

ಪ್ರತಿಧ್ವನಿ ಯಲ್ಲಾಪುರ : ಪಟ್ಟಣದ ನಾಯ್ಕನ ಕೆರೆ ಬಳಿ ಇರುವ ತೋಟಗಾರಿಕೆ ಕ್ಷೇತ್ರದಲ್ಲಿ ಅಡಿಕೆ,ಮಾವಿನ ತೋಟದ ನಡುವೆ ನೂರಾರು ಸಂಖ್ಯೆಯಲ್ಲಿ ಜೇನಿನ ಪೆಟ್ಟಿಗೆ ಇಟ್ಟಿದ್ದು ಮಕರಂದ ಕ್ರೂಡಿಕರಣದ ಜೇನಿನ ಕೃಷಿ ಸಾಗಿದೆ.

ತಾಲೂಕಿನ ದೋಣಗಾರದ ನಿವಾಸಿ ತಿಮ್ಮಣ್ಣ ಭಟ್ ಈ ಜೇನಿನ ಕೃಷಿಯಲ್ಲಿ ತೊಡಗಿದವರಾಗಿದ್ದು ತೋಟಗಾರಿಕ ಇಲಾಖೆಗೆ ಜೇನಿನ ಗೂಡುಗಳನ್ನು ಒದಗಿಸುವ ಅಧಿಕೃತ ಸರಬರಾಜುದಾರರಾಗಿ ಕಾರ್ಯ ನಿರ್ವ ಹಿಸುತ್ತಿದ್ದಾರೆ.


ಸದ್ಯ ಯಲ್ಲಾಪುರದ ತೋಟಗಾರಿಕಾ ಕ್ಷೇತ್ರದಲ್ಲಿ200 ಕ್ಕು ಅಧಿಕ ಜೇನಿನ ಪೆಟ್ಟಿಗೆ ಅನುಷ್ಟಾನ ಮಾಡಿದ್ದಾರೆ.
ಸದ್ಯ ತೋಟಗಾರಿಕ ಕ್ಷೇತ್ರದಲ್ಲಿ ಸಮೃದ್ಧವಾಗಿ ಬೆಳೆದ ಅಡಿಕೆ ತೋಟ, ಗೇರುತೊಟ,ಮಾವು ಮತ್ತು ಸಪೋಟ ಸುಭೀಕ್ಷವಾಗಿ ಬೆಳೆದಿದ್ದು ಸುತ್ತಮುತ್ತಲಿನ ಅರಣ್ಯ ಪ್ರದೇಶದಲ್ಲಿನ ಕಾಡು ಹೂಗಳಿಂದ ಸಂಗ್ರಹಿಸಿದ ಜೇನು ಪೆಟ್ಟಿಗೆ ಸೇರಲಿದೆ.

ತೋಟಗಾರಿಕೆ ಇಲಾಖೆ ಯಿಂದ ಜೇನು ಕೃಷಿಗೆ ಉತ್ತೇಜನ ನೀಡುವ ಹಿನ್ನೆಲೆಯಲ್ಲಿ ರೈತರಿಗೆ ಗೂಡುಗಳನ್ನು ವಿತರಿಸುವ ಸಂದರ್ಭದಲ್ಲಿ ಇಲ್ಲಿಂದಲೆ ನೀಡಬಹುದಾಗಿದೆ ಮತ್ತು ಜೇನು ಕೃಷಿಯ ಆಸಕ್ತಿ ಇರುವವರಿಗೆ ಬೃಹತ್ ಪ್ರಮಾಣದ ಪ್ರಾತ್ಯಕ್ಷಿಗೆ ಅನುಕೂಲ ಆಗಲಿದೆ, ಮಕರಂದ ಸಂಗ್ರಹಕ್ಕೆ ಪ್ರಶಸ್ತವಾದ ಸ್ಥಳವಾಗಿದ್ದು ಇದರಿಂದ ಪರಾಗಸ್ಪರ್ಷಕ್ಕು ಅನುಕೂಲವಾಗಲಿದೆ. ತೋಟಗಾರಿಕೆ ಇಲಾಖೆಯ ಜೇನು ಪೆಟ್ಟಿಗೆಯ ವ್ಯವಸ್ಥೆಯನ್ನು ನಾವೆ ನೋಡಿಕೊಳ್ಳುವುದರಿಂದ ಎಲ್ಲ ಕಸರ್ಯಕ್ಕು ಇದು ಅನುಕೂಲಕರವಾಗಿದೆ. ಜೇನು ಪೆಟ್ಟಿಗೆ ರೈತರಿಗೆ ನೀಡುವ ಸಂದರ್ಭದಲ್ಲಿ ಇಲ್ಲಿಂದಲೆ ನೀಡಲು ಅನುಕೂಲವಾಗಲಿದೆ.
ತಿಮ್ಮಣ್ಣ ಭಟ್ಟ , ದೋಣಗಾರ, ಜೇನು ಕೃಷಿಕ
ಇಲಾಖೆಯ ಕ್ಷೇತ್ರ ಪರಿಸರದಲ್ಲಿ ಜೇನಿನ ಪೆಟ್ಟಿಗೆ ಇರಿಸಿದ್ದು ಅಡಿಕೆ ಹೂವಿನ ಪರಾಗಸ್ಪರ್ಶ ಕಾರ್ಯಕ್ಕು ಇದು ಅನುಕೂಲ ಆಗಲಿದೆ. ವಿಶೇಷವಾಗಿ ಜೇನಿನ ಕೃಷಿ ಬಗ್ಗೆ ಆಸಕ್ತಿ ಹೊಂದಿದವರು ಇಲ್ಲಿ ಬಂದು ಪ್ರಾತ್ಯಕ್ಷಿಕೆ ಪಡೆಯಬಹುದಾಗಿದೆ.
ಅರುಣ್
ತೋಟಗಾರಿಕೆ ಇಲಾಖೆ ಸ್ಥಳೀಯ ಅಧಿಕಾರಿ


Prathidvani Yellapura