Breaking News

ಯಲ್ಲಾಪುರದಲ್ಲಿ ಮುಗಿಲು ಮುಟ್ಟಿದ ಹಿಂದು ಧರ್ಮದ ಜಯಘೋಷ- ವಿಜ್ರಂಭಣೆಯಿಂದ ಜರುಗಿದ ಯುಗಾದಿ ಉತ್ಸವದ ಶೋಭಾಯಾತ್ರೆ.


ಪ್ರತಿಧ್ವನಿ ಯಲ್ಲಾಪುರ : ಹಿಂದು ಧರ್ಮದ ನೂತನ ವರ್ಷಾರಂಭ ಯುಗಾದಿ ಯಿಂದ ಪ್ರಾರಂಭ ಅದಕ್ಕೆ ಯಲ್ಲಾಪುರದಲ್ಲಿ ವಿಜ್ರಂಭಣೆಯ ಆಚರಣೆ ನಡೆಯುತ್ತಾ ಬಂದಿದೆ. ಅದರಂತೆ ಮಾ,19,ಗುರುವಾರ ಯುಗಾದಿ ಉತ್ಸವ ಶೋಭಾಯಾತ್ರೆ ಅದ್ದೂರಿಯಾಗಿ ನಡೆಯಿತು.

ಚಂಡೆಯ ಝಲಕ್
ಝಾಂಜ್ ನ ಹೊಡೆತ
ಗೊಂಬೆಗಳ ಕುಣಿತ
ಭಜನಾ ತಂಡದ ಭಕ್ತಿ ನೃತ್ಯ
ಛದ್ಮ ವೇಷದ ಸೊಬಗು

ಊರಿನ ತುಂಬಾ ಕೇಸರಿ ಕಲರವ,ಮಾವಿನ ತೋರಣ ವಿದ್ಯುತ್ ದೀಪಾಲಂಕಾರದ ವೈಭವ, ಚಂಡೆಯ ನಿನಾದ,ಡಿ.ಜೆ ಸದ್ದು,ಝಾಂಜ್,ಪತಾಕೆಗಳ ಆರ್ಭಟ ವಿವಿಧ ಚದ್ಮ ವೇಷಗಳ ಆಕರ್ಷಣೆ, ಭಜನೆಯಮೇಳ,ಬೃಹತ್ ಗೊಂಬೆಗಳ ಕುಣಿತ ಮುಗಿಲು ಮುಟ್ಟುವಷ್ಟರ ಮಟ್ಟಿಗೆ ಹಿಂದು ಧರ್ಮದ ಜಯಘೋಷ, ಭಾರತಾಂಬೆಗೆ ಜೈಕಾರ, ಮಹಿಳೆಯರು, ಮಕ್ಕಳು, ಯುವಕರು ಎಲ್ಲರಲ್ಲು ಹಿಂದುತ್ವದ ಕಿಚ್ಚು ಯಾತ್ರೆಗೊಂದು ರಂಗುತಂದಿತ್ತು.


ಸಂಜೆ ಕೋಟೆ ಕರಿಯಮ್ಮ ದೇವಾಲಯದಿಂದ ಆಭಗೊಂಡ ಶೋಭಾಯಾತ್ರೆ ಊರಿನ ಪ್ರಮುಖ ರಸ್ತೆಯಲ್ಲಿ ಸಂಚರಿಸಿ ಕೊನೆಗೆ ಗ್ರಾಮದೇವಿ ದೇವಸ್ಥಾನದ ಆವಾರದಲ್ಲಿ ಸಮಾಪ್ತಿ ಕಂಡಿತು. ಮಜ್ಜಿಗೆ,ಪಾನಕ,ಪ್ರಸಾದ ವಿತರಿಸಲಾಯಿತು, ಉತ್ಸವದ ಪ್ರಮುಖ ಘಟ್ಟ ಪಂಚಾಂಗ ಪಠಣ ಕಾರ್ಯಕ್ರಮ ಶ್ರದ್ದಾ ಭಕ್ತಿಯಿಂದ ಜರುಗಿತು.

*ಯುಗಾದಿ ಉತ್ಸವ 2026 – ಶೋಭಾಯಾತ್ರೆ ವಿಡಿಯೋ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ* ☝

ಶೋಭಾಯಾತ್ರೆ ಸಾಗುವ ದಾರಿ ಮದ್ಯೆ ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಶಿವರಾಮ ಹೆಬ್ಬಾರ್ ಮತ್ತು ಪುತ್ರ ವಿವೇಕ್ ಹೆಬ್ಬಾರ್ ಮೆರವಣಿಗೆಯಲ್ಲಿ ಪಾಲ್ಗೊಂಡರು ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ ಮಾಜಿ ಸದಸ್ಯ ವಿಜಯ್ ಮಿರಾಶಿ ಸೇರಿದಂತೆ ಇನ್ನಿತರ ಪ್ರಮುಖರು ಜೊತೆಯಲಿದ್ದರು. ಶೋಭಾಯಾತ್ರೆಯಲ್ಲಿ ಪಾಲ್ಗೊಂಡ ಛದ್ಮ ವೇಷಧಾರಿಗಳೊಂದಿಗೆ ಫೋಟೋ ಕ್ಲಿಕ್ಕಿಸಿಕೊಂಡರು.

ನಂತರ  ಮೆರವಣಿಗೆ ಮದ್ಯದಲ್ಲಿ  ಹೆಬ್ಬಾರ್ ಜನಸಾಮಾನ್ಯರೊಡನೆ ತಾಳಕ್ಕೆ ಹೆಜ್ಜೆ ಹಾಕಿ ಮೆರವಣಿಗೆಯಲ್ಲಿ ಪಾಲ್ಗೊಂಡ ಸಾರ್ವಜನಿಕರಿಗೆ ಹುರಿದುಂಬಿಸಿದರು. ಈ ಸಂದರ್ಭದಲ್ಲಿ ಪುತ್ರ ವಿವೇಕ್ ಹೆಬ್ಬಾರ್ ಸಹ ತಂದೆಯೊಡನೆ ಹೆಜ್ಜೆ ಹಾಕಿದರು.


ತಾಲೂಕಿನ ಹಿರಿಯರು ವೇದ ಪಂಡಿತರು ಗೋಪಾಲಕೃಷ್ಣ ಭಟ್ ಹಂಡ್ರಮನೆ ಪಂಚಾಂಗ ಪಠಿಸಿದರು. ವರ್ಷದ ಆರಂಭದಲ್ಲಿ ಪಂಚಾಂಗ ಶ್ರವಣ ಅತ್ಯಂತ ಶ್ರೇಷ್ಠ ವಾದುದು ಎಂಬುದನ್ನು ಸಭಿಕರಿಗೆ ವಿವರಿಸಿದರು.

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ಬಿಲ್ಲಿಗದ್ದೆ ಅರಣ್ಯ ಅತಿಕ್ರಮಣ ಅರಣ್ಯರೋಧನ  ಪ್ರಕರಣದ ಸುದ್ದಿಗೆ ಬಿಗ್ ಟ್ವಿಸ್ಟ್.

ಪ್ರತಿಧ್ವನಿ ಯಲ್ಲಾಪುರ : ಕಳೆದೆರಡು ದಿನಗಳ ಹಿಂದೆ ಪ್ರತಿಧ್ವನಿ ಯಲ್ಲಾಪುರ ನ್ಯೂಸ್ ನಲ್ಲಿ ” ಬಿಲ್ಲಿಗದ್ದೆ ಹೊಸದಾಗಿ ಅರಣ್ಯ ಅತಿಕ್ರಮಣ-ಅರಣ್ಯ …

Leave a Reply

Your email address will not be published. Required fields are marked *