Breaking News

ಮಕ್ಕಳ ವಿದ್ಯಾಬ್ಯಾಸಕ್ಕೆ ಪ್ರೋತ್ಸಾಹ ನೀಡಲು ಸ್ವಂತ ದುಡಿಮೆಯ ಹಣದಲ್ಲಿ ಪೆನ್ನು ಪುಸ್ತಕ ವಿತರಿಸಿದ-ವಿಟ್ಟು ದೋಂಡು ಪಟಕಾರೆ.

ಪ್ರತಿಧ್ವನಿ ಯಲಾಪುರ :ಇಂದಿನ ಕಾಲಮಾನದಲ್ಲಿ ದುಡಿದ ಹಣ ದುಂದು ಮಾಡಿ ಅರ್ಥಹೀನ ಕೆಲಸಗಳಲ್ಲಿ ಪೋಲು ಮಾಡುವವರ ಮದ್ಯೆ ಸಣ್ಣ ಯಲವಳ್ಳಿ ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಕ್ರಿಯಾಶೀಲ ಯುವಕ ವಿಟ್ಟು ದೋಂಡು ಪಟಕಾರೆ ವಿಬಿನ್ನತೆ ತೋರಿದ್ದು ಕಿರವತ್ತಿ ಗ್ರಾಮ ಪಂಚಾಯತ ವ್ಯಾಪ್ತಿಯ ಶಾಲೆಗಳ 410 ಕ್ಕು ಅಧಿಕ ವಿದ್ಯಾರ್ಥಿಗಳಿಗೆ ತನ್ನ ಸ್ವಂತ ದುಡಿದ ಹಣದಿಂದ ನೋಟ್ ಪುಸ್ತಕ ಮತ್ತು ಪೆನ್ನುಗಳನ್ನು ವಿತರಿಸಿ ಸಾರ್ಥಕತೆ ಮೆರೆದಿದ್ದಾರೆ.

ತಾಲೂಕು ಕಿರವತ್ತಿ ಪಂಚಾಯತಿ ವ್ಯಾಪ್ತಿಯ ತೆಂಗಿನಗಿರಿ, ಬೊಂಬಡಿಕೊಪ್ಪ , ಕಂಚನಹಳ್ಳಿ , ಕೋನಮಡ್ಡಿ, ಕಾರಕುಂಡಿ, ಹುಣಸಗಿರಿ , ಮುಂದವಾಡ , ದೊಡ್ಡಯಲ್ಲವಳಿ , ಸಣ್ಣ ಯಳವಳ್ಳಿ , ಹುಣಸಗಿರಿ ಗೌಳಿವಾಡ, ಪಾನಿಗುಂಡಿ , ಸಣ್ಣ ಪಾನಿಗುಂಡಿ, ಕಂಚನಹಳ್ಳಿ ಗ್ರಾಮದ  ಎಲ್ಲಾ ಶಾಲೆ ಮುದ್ದು ಮಕ್ಕಳಿಗೆ ನೋಟ್ ಬುಕ್ ಪೆನ್ನು ವಿತರಣೆ ಮಾಡಲಾಯಿತು.

ಈ ಸಂದರ್ಭ ಯಲವಳ್ಳಿ ಗ್ರಾಮದ ಹಿರಿಯರು ಹಾಗೂ ಸುರೇಶ್ ರಾಮಾ ಮಿರಾಶಿ, ಪ್ರಕಾಶ್ ಮಿರಾಶಿ, ಬಾಬು ಪಟಕಾರೆ, ಹಾಗೂ ಯಳವಳ್ಳಿ ಶಾಲೆಯ ಶಿಕ್ಷಕರಾದ ಅಶೋಕ್ ಹಾಗೂ ಸಣ್ಣ ಯಳವಳ್ಳಿ ಶಿಕ್ಷಕಿ ಭಾಗ್ಯ ಶಿಕ್ಷಕರಾದ ಸಂತೋಷ್ ಸಹಕರಿಸಿ ಪ್ರೋತ್ಸಹಿಸಿದರು.

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ಮಾರಿಷಸ್‌ನಲ್ಲಿ ಪ್ರಯಾಣ, ಪ್ರವಾಸೋದ್ಯಮ ಮತ್ತು ಆತಿಥ್ಯ ವಿಭಾಗದಲ್ಲಿ ಡಿಪ್ಲಮೋ ಮಾಡಲು ಸುವರ್ಣಾವಕಾಶ..

ಪ್ರತಿಧ್ವನಿ ಯಲ್ಲಾಪುರ ಉದ್ಯೋಗವಕಾಶದ ಮಾಹಿತಿ ಮಾರಿಷಸ್ ದೇಶದಲ್ಲಿ ಮಾರಿಷಸ್ ಸರ್ಕಾರದ ಮಾನ್ಯತೆ ಪಡೆದಿರುವ ಎಂ.ಕ್ಯೂ.ಎ ಅನುಮೋದಿತ ಒ.ಸಿ.ಇ.ಪಿ ತರಬೇತಿ ಸಂಸ್ಥೆ …

Leave a Reply

Your email address will not be published. Required fields are marked *