Breaking News

ಬಿಸಿಲ ಧಗೆಗೆ ಬಾಯಾರಿಕೆ ಹೆಚ್ಚಾಗಿ ಎಳನೀರು, ಕಲ್ಲಂಗಡಿ ಹಣ್ಣಿಗೆ ಮೊರೆಹೋದ ಯಲ್ಲಾಪುರದ ಜನತೆ.


ಪ್ರತಿಧ್ವನಿ ಯಲ್ಲಾಪುರ : ಬೇಸಿಗೆಯ ಝಳ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಬಿಸಿಲ ಹೊಡೆತಕ್ಕೆ ಜನ ಹೈರಾಣಾಗಿ ಹೋಗಿದ್ದಾರೆ. ಬಾಯಾರಿಕೆ ನೀಗಿಸಲು ಎಳನೀರು ಮತ್ತು ಕಲ್ಲಂಗಡಿ ಹಣ್ಣಿಗೆ ಮೊರೆಹೋಗಿದ್ದಾರೆ.


ಹಿಂದೆ ಒಮ್ಮೆ 50 ರುಪಾಯಿಗೆ ಜಿಗಿದ ಎಳನೀರು ದರ ವಾಪಸ್ ಬರಲೇ ಇಲ್ಲ ಇದೀಗ  ಸಾಕಷ್ಟು ಪ್ರಮಾಣದಲ್ಲಿ ಎಳನೀರು ಸರಬರಾಜಾಗದೆ ದೂರದ ಮಂಡ್ಯ ಮದ್ದೂರಿನಿಂದ ಸಪ್ಲೆ ಬರುತ್ತಿದೆ. ಆ ಕಾರಣದಿಂದ ಸಾರಿಗೆ ವೆಚ್ಚ ಹೆಚ್ಚಾಗುತ್ತಿರುವುದು ವ್ಯಾಪಾರಸ್ಥರು ಗ್ರಾಹಕರಿಗೆ ಕಡಿಮೆ ಹಣಕದಕೆ ನೀಡಲು ಸಾದ್ಯವಾಗುವುದಿಲ್ಲ.


ಸದ್ಯಕ್ಕೆ ಕಲ್ಲಂಗಡಿ ಹಣ್ಣು ಕೆ.ಜಿ.ಗೆ 30 ರುಪಾಯಿ ಇದ್ದು ಪೂರೈಕೆ ಸರಿ ಇದ್ದು ದಾಹ ತಣಿಸಿಕೊಳ್ಳಲು ಅತಿ ಹೆಚ್ಚು ಗ್ರಾಹಕರು ಕೊಂಡುಕೊಳ್ಳುವುದು ಸಾಮಾನ್ಯವಾಗಿದೆ.
ಒಟ್ಟಿನಲ್ಲಿ ಬಿಸಿಲ ಬಿಸಿಗೆ ನೆಲವೆಲ್ಲಾ ಸುಡುತಿದ್ದು ಮನೆಯೊಳಗೆ ಇರುವುದು ಸಹ ಕಷ್ಟವಾಗುತ್ತಿದೆ ಇಂತಹ ಸಂದರ್ಭದಲ್ಲಿ ತಣ್ಣಗಿರುವ ಎಲ್ಲಾ ಮಾರ್ಗಗಳನ್ನು ಜನರು ಹುಡುಕುತಿದ್ದು ಮಳೆಗಾಲ ಸಮೀಪಿಸುತ್ತಿದ್ದು ಬೇಗನೆ ಮಳೆಹನಿ ಬೀಳಲಿ ಎನ್ನುತ್ತಿದ್ದಾರೆ.

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ನಾಡುಕಂಡ ಹಿರಿಯ ಮತ್ತು ಶ್ರೇಷ್ಠ ರಾಜಕಾರಣಿ ಆರ್.ವಿ.ದೇಶಪಾಂಡೆ ಅವರ ಜನುಮ ದಿನಕ್ಕೆ ಶುಭ ಕೋರಿದ ಅತ್ಯಾಪ್ತ  ಬಾಬು ಸಿದ್ದಿ ಮತ್ತು ತಂಡ.

ಪ್ರತಿಧ್ವನಿ ಯಲ್ಲಾಪುರ : ನಾಡಿನ ಹಿರಿಯ ಮತ್ತು ಶ್ರೇಷ್ಠ ರಾಜಕಾರಣಿ ಹಳಿಯಾಳ ಕ್ಷೇತ್ರದ ಶಾಸಕ ಮಾಜಿ ಮಂತ್ರಿ ಹಾಲಿ ಆಡಳಿತ …

Leave a Reply

Your email address will not be published. Required fields are marked *