
ಪ್ರತಿಧ್ವನಿ ಯಲ್ಲಾಪುರ : ಜಿಲ್ಲೆಯಲ್ಲಿ ಕ್ರಿಯಾಶೀಲ ಕನ್ನಡ ಸಾಹಿತ್ಯ ಚಟುವಟಿಕೆಯನ್ನು ನಡೆಸಿಕೊಂಡು ಬರುತ್ತಿರುವ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ವತಿಯಿಂದ ಜಿಲ್ಲಾಧ್ಯಕ್ಷೆ ಶಿಕ್ಷಕಿ ಲೇಖಕಿ ಶಿವಲೀಲಾ ಹುಣಸಗಿ ಅವರ ಶಿವಶಂಕರ ನಿವಾಸದಲ್ಲಿ ” ನನ್ನ ಪುಸ್ತಕದ ಅವಲೋಕನ ಕಾರ್ಯಕ್ರಮ ಮತ್ತು ಕವಿಗೋಷ್ಟಿ/ಉಪನ್ಯಾಸ ” ಕಾರ್ಯಕ್ರಮ ಮದ್ಯಾಹ್ನ 3 ಗಂಟೆಗೆ ಜರುಗಲಿದೆ.
ಖ್ಯಾತ ಇತಿಹಾಸ ತಜ್ಞ ಡಾ.ಲಕ್ಷ್ಮೀಷ ಸೋಂದ,ಹಿರಿಯ ಸಾಹಿತಿ ಬೀರಣ್ಣ ನಾಯಕ ಮೊಗಟ, ಲೇಖಕ ಡಾ,ನವೀನ್ ಕುಮಾರ್ ಉಪನ್ಯಾಸ ನೀಡಲಿದ್ದು ಪವಿತ್ರ ಅಗೇರ್ ಮತ್ತು ಮಂಜುನಾಥ ಪಟಗಾರ ಪುಸ್ತಕ ಅವಲೋಕನ ಮಾಡಲಿದ್ದಾರೆ.
ಕಾರ್ಯಕ್ರಮವನ್ನು ಯಲ್ಲಾಪುರದ ಪ್ರಥಮಧರ್ಜೆ ಕಾಲೇಜು ಪ್ರಾಂಶುಪಾಲ ಡಾ,ಆರ್.ಡಿ.ಜನಾರ್ಧನ ಉದ್ಘಾಟಿಸಲಿದ್ದು ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಜಿಲ್ಲಾಧ್ಯಕ್ಷೆ ಶಿಕ್ಷಕಿ/ಲೇಖಕಿ ಶಿವಲೀಲ ಹುಣಸಗಿ ಅಧ್ಯಕ್ಷತೆ ವಹಿಸಲಿದ್ದಾರೆ.
ಇದೇ ಸಂದರ್ಭದಲ್ಲಿ ಯಲ್ಲಾಪುರ ತಾಲೂಕಿನ ಕವಿಗಳಿಂದ ” ಮಹಿಳೆ ” ಎಂಬ ವಿಷಯದ ಮೇಲೆ ಕವಿಗೋಷ್ಟಿ ಜರುಗಲಿದೆ.
ಈ ಎಲ್ಲಾ ಸಾತ್ವಿಕ ಸಾಹಿತ್ಯಾತ್ಮಕ ಕನ್ನಡ ಪ್ರೇಮದ ಕಾರ್ಯಕ್ರಮಕ್ಕೆ ಸಾಹಿತ್ಯ ಪ್ರೇಮಿಗಳು ಆಗಮಿಸಬೇಕೆಂದು ಸಂಘಟನೆ ಶ್ರದ್ದೆಯಿಂದ ಕರೆ ನೀಡಿದ್ದಾರೆ.

Prathidvani Yellapura