Breaking News

“ಪ್ರತಿಧ್ವನಿ ಯಲ್ಲಾಪುರ ನ್ಯೂಸ್” ಸುದ್ದಿಗೆ ಸ್ಪಂದನೆ-ಅಂಬೇಡ್ಕರ್ ಕಟ್ಟೆ ಶುಚಿಗೊಳಿಸಿದ ಪಟ್ಟಣ ಪಂಚಾಯತ. ಪೌರಕಾರ್ಮಿಕರಿಗೆ ಪ್ರತಿಧ್ವನಿ ವಂದನೆ.


ಪ್ರತಿಧ್ವನಿ ಯಲ್ಲಾಪುರ : ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಅಂಬೇಡ್ಕರ್ ಕಟ್ಟೆಗೆ ಕವಳ ತಿಂದು ಉಗಿದು ಅಪಮಾನ ಮಾಡಿರುವ ಘಟನೆಯ ಕುರಿತು ತೊಗಲು ಹರಳಯ್ಯ ಟ್ರಸ್ಟ್ ಅಧ್ಯಕ್ಷ ಜಗನ್ನಾಥ ರೇವಣ್ಕರ್ ಖಂಡಿಸಿ ಹೋರಾಟದ ಎಚ್ಚರಿಕೆ ನೀಡಿದ ಸುದ್ದಿಯನ್ನು ಪ್ರತಿಧ್ವನಿ ಯಲ್ಲಾಪುರ ನ್ಯೂಸ್ ತಕ್ಷಣದಲ್ಲೇ ಪ್ರಕಟಿಸಿತ್ತು.

ಇದಕ್ಕೆ ಸ್ಪಂದಿಸಿದ ಪಟ್ಟಣ ಪಂಚಾಯತ ತಕ್ಷಣಕ್ಕೆ ಅಂಬೇಡ್ಕರ್ ಕಟ್ಟೆ ತೊಳೆದು ಶುಚಿಗೊಳಿಸಿದ್ದಾರೆ.
ತೊಗಲು ಹರಳಯ್ಯ ಟ್ರಸ್ಟ್ ಅಧ್ಯಕ್ಷ ಜಗನ್ನಾಥ ರೇವಣ್ಕರ್ ಮುಂದೆ ನಿಂತು ಪಟ್ಟಣ ಪಂಚಾಯತ ಆರೋಗ್ಯ ನಿರೀಕ್ಷಕ ಗುರು ನೇತೃತ್ವದಲ್ಲಿ ಪೌರಕಾರ್ಮಿಕರ ಸಹಾಯದಲ್ಲಿ ಅಂಬೇಡ್ಕರ್ ಕಟ್ಟೆ ತೊಳೆಯಲಾಯಿತು. ಸುದ್ದಿಗೆ ಸ್ದಂದಿಸಿ ಕಟ್ಟೆ ಶುಚಿಗೊಳಿಸಿದ ಪಟ್ಟಣ ಪಂಚಾಯತಕ್ಕೆ ಪ್ರತಿಧ್ವನಿ ವಂದನೆ ಸಲ್ಲಿಸಿದೆ.


ಅಂಬೇಡ್ಕರ್ ಕಟ್ಟೆಗೆ ಅಪಮಾನ ಸಹಿಸಲಾಗದೆ ತೊಳೆಸಿದ್ದೇನೆ ಹೊರತು ಪ್ರಕರಣ ಬಗೆಹರಿದಿಲ್ಲ. ಅಂಬೇಡ್ಕರ್ ವೃತ್ತದಲ್ಲಿ ಅತ್ಯಾಧುನಿಕ ತಂತ್ರಜ್ಞಾನದ ಸಿಸಿ ಟಿ.ವಿ ಅಳವಡಿಸಿದ್ದು ಗುರುವಾರ ನಡೆದ ಪ್ರತಿಭಟನಾ ಸಭೆಯಲ್ಲಿ ಅಂಬೇಡ್ಕರ್ ಕಟ್ಟೆಗೆ ಕವಳ ಉಗುಳಿದ ವ್ಯಕ್ತಿ ಯಾರೆಂದು ಪತ್ತಹಚ್ಚಿ ಆತನಮೇಲೆ ಕ್ರಮ ಜರುಗಿಸಬೇಕು. ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಕಟ್ಟೆಗೆ ಅವಮಾನಿಸಿದ ತಪ್ಪಿಗಾಗಿ ಬಹಿರಂಗವಾಗಿ ಕ್ಷಮೆ ಯಾಚಿಸಬೇಕು ಇಲ್ಲವಾದಲ್ಲಿ ಹೋರಾಟ ಅನಿವಾರ್ಯವಾಗಲಿದೆ. ದಲಿತ ಸಂಘಟನೆಗಳು ಈ ಪ್ರಕಾರವನ್ನು ಲಘುವಾಗಿ ಪರಿಗಣಿಸದೆ ಗಂಭೀರವಾಗಿ ಪರಿಗಣಿಸಿದೆ ಎಚ್ಚರಿಕೆ.
ಜಗನ್ನಾಥ ರೇವಣ್ಕರ್
ಅಧ್ಯಕ್ಷರು, ತೊಗಲು ಹರಳಯ್ಯ ಟ್ರಸ್ಟ್, ಯಲ್ಲಾಪುರ

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ಯಲ್ಲಾಪುರದಲ್ಲಿ ಮುಗಿಲು ಮುಟ್ಟಿದ ಹಿಂದು ಧರ್ಮದ ಜಯಘೋಷ- ವಿಜ್ರಂಭಣೆಯಿಂದ ಜರುಗಿದ ಯುಗಾದಿ ಉತ್ಸವದ ಶೋಭಾಯಾತ್ರೆ.

ಪ್ರತಿಧ್ವನಿ ಯಲ್ಲಾಪುರ : ಹಿಂದು ಧರ್ಮದ ನೂತನ ವರ್ಷಾರಂಭ ಯುಗಾದಿ ಯಿಂದ ಪ್ರಾರಂಭ ಅದಕ್ಕೆ ಯಲ್ಲಾಪುರದಲ್ಲಿ ವಿಜ್ರಂಭಣೆಯ ಆಚರಣೆ ನಡೆಯುತ್ತಾ …

Leave a Reply

Your email address will not be published. Required fields are marked *