
ಪ್ರತಿಧ್ವನಿ ಯಲ್ಲಾಪುರ : ಪಟ್ಟಣದ ನಾಯಕನಕೆರೆಯ ಶ್ರೀ ಶಾರದಾಂಬಾ ವೇದ ಸಂಸ್ಕೃತ ಪಾಠಶಾಲೆಯಲ್ಲಿ ಮಾ.15 ರಂದು ವಾರ್ಷಿಕ ಧಾರ್ಮಿಕ ಕಾರ್ಯಕ್ರಮ ಪ್ರಾತಃಕಾಲದಲ್ಲಿ ನವಗ್ರಹಹೋಮ, ಗಣಹೋಮ, ಸರಸ್ವತೀ ಹೋಮ ಮುಂತಾದ ಧಾಮಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ಮುಖ್ಯಾಧ್ಯಾಪಕ ಡಾ.ಶಿವರಾಮ ಭಾಗ್ವತ ತಿಳಿಸಿದ್ದಾರೆ.

ಮಧ್ಯಾಹ್ನ 2-30 ಕ್ಕೆ ನಡೆಯುವ ಸಾಹಿತ್ಯ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆಯು ಸಂಸ್ಥೆಯ ಅಧ್ಯಕ್ಷ ಉಮೇಶ ಭಾಗ್ವತ ಅಧ್ಯಕ್ಷತೆಯಲ್ಲಿ ನಡೆಯುವುದು. ಉಪನ್ಯಾಸಕರಾಗಿ ವಿಶ್ವದರ್ಶನ ಶಿಕ್ಷಣ ಸಮೂಹದ ಅಧ್ಯಕ್ಷ ಹರಿಪ್ರಕಾಶ ಕೋಣೆಮನೆ, ಅಭ್ಯಾಗತರಾಗಿ ಡಾ.ಡಿ.ಕೆ.ಗಾಂವ್ಕರ, ಮುಕ್ತಾ ಶಂಕರ, ವಿಘ್ನೇಶ್ವರ ಗಾಂವ್ಕರ ಸಿಎ ಆಗಮಿಸುವರು. 3-30 ರಿಂದ 5 ರವರೆಗೆ “ಸುಧನ್ವಾರ್ಜುನ” ತಾಳಮದ್ದಲೆ ನಡೆಯಲಿದ್ದು, ಭಾಗವತರಾಗಿ ನಾಗೇಂದ್ರ ಭಾಗ್ವತ ಶೇಡಿಜಡ್ಡಿ, ಮಾರ್ದಂಗಿಕರಾಗಿ ಮಂಜುನಾಥ ಭಟ್ಟ ಬಾಳೆಗದ್ದೆ, ಹಂಸಧ್ವಜನಾಗಿ ಪ್ರಸನ್ನ ಭಟ್ಟ ಮಾವಿನಗದ್ದೆ, ಕೃಷ್ಣನಾಗಿ ರಾಮಕೃಷ್ಣ ಭಟ್ಟ, ಅರ್ಜುನನಾಗಿ ಗಣೇಶ ಭಟ್ಟ, ಸುಧನ್ವನಾಗಿ ಭುವನ ಗಾಂವ್ಕರ ಭಾಗವಹಿಸುವರು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.





Prathidvani Yellapura