Breaking News

“ಶ್ರೀ ಪರಾಭವ ಸಂವತ್ಸರ” ನೂತನ ವರ್ಷ ಯುಗಾದಿ ಆಚರಣೆಗೆ ಉತ್ಸವ ಸಮಿತಿಯಿಂದ ಕರಪತ್ರ ಬಿಡುಗಡೆ.


ಪ್ರತಿಧ್ವನಿ ಯಲ್ಲಾಪುರ : ಹಿಂದುಗಳ ನೂತನ ವರ್ಷ ಯುಗಾದಿ ಸಂಭ್ರಮಿಸುವ ಹಿನ್ನೆಲೆಯಲ್ಲಿ ಪ್ರತಿ ವರ್ಷದಂತೆ ಈ ವರ್ಷವು “ಶ್ರೀ ಪರಾಭವ ಸಂವತ್ಸರ ಯುಗಾದಿ ” ಯನ್ನು ಅತ್ಯಂತ ವಿಜ್ರಂಭಣೆಯಿಂದ ಆಚರಿಸಲು ನಿರ್ಧರಿಸಿದ್ದು ಯುಗಾದಿ ಉತ್ಸವ ಸಮಿತಿ ವತಿಯಿಂದ ಗುರುವಾರ ಯಲ್ಲಾಪುರ ಗ್ರಾಮದೇವಿ ಸಾನಿದ್ಯದಲ್ಲಿ ಕರಪತ್ರ ಬಿಡುಗಡೆ ಮಾಡಲಾಯಿತು.


ಉತ್ಸವದ ಯಶಸ್ಸಿಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ದಿನಾಂಕ 17 ರಂದು ಬೃಹತ್ ಬೈಕ್ ರ‍್ಯಾಲಿ ಆಯೋಜಿಸಲಾಗಿದೆ. ದಿನಾಂಕ 19 ರಂದು ಬೃಹತ್ ಶೋಭಾಯಾತ್ರೆ ಆಯೋಜಿಸಲಾಗಿದ್ದು ಚಂಡೆ,ಝಾಂಜ್,ಪತಾಕೆ,ಸ್ಥಬ್ದ ಚಿತ್ರಗಳು, ಬೃಹತ್ ಗೊಂಬೆಗಳು, ಭಜನೆ ಇನ್ನಿತರ ಸಾಂಪ್ರದಾಯಿಕ ಹಾಗು ವೆಷಭೂಷಣಗಳೊಂದಿಗೆ ಸ್ಥಳೀಯ ಜಾನಪದ ಸೊಗಡಿನೊಂದಿಗೆ ಶೋಭಾಯಾತ್ರೆ ಆಯೋಜಿಸಲಾಗಿದೆ.

ಈ ಎಲ್ಲಾ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಪಾಲ್ಗೊಂಡು ಯಶಸ್ವಿಯಾಗಿಸುವಂತೆ ಯುಗಾದಿ ಉತ್ಸವ ಸಮಿತಿ ಶಕ್ತಿ ದೇವತೆಯರಾದ ಯಲ್ಲಾಪುರ ಗ್ರಾಮದೇವಿಯರ ಸಾನಿದ್ಯದಲ್ಲಿ ಪರಶುರಾಮ ಆಚಾರಿ ಮತ್ತು ಗಣಪತಿ ಆಚಾರಿ ಪೂಜೆಸಲ್ಲಿಸಿದರು. ನಂತರ ಸಮಿತಿ ಪ್ರಮುಖರು ಕರಪತ್ರ ಬಿಡುಗಡೆ ಮಾಡಿದರು.


    ಈ ಸಂದರ್ಭದಲ್ಲಿ ಯುಗಾದಿ ಉತ್ಸವ ಸಮಿತಿ ನೂತನ ಅಧ್ಯಕ್ಷ ವಿಶಾಲ್ ವಾಳಂಬಿ,ಉಪಾಧ್ಯಕ್ಷ ಮಹೇಶ್ ನಾಯ್ಕ್,
ನಿಕಟಪೂರ್ವ ಅಧ್ಯಕ್ಷ ಗೋಪಾಲಕೃಷ್ಣ ಎನ್ ಗಾಂವ್ಕರ್, ವಿಶ್ವ ಹಿಂದೂಪರಿಷತ್ ತಾಲೂಕು ಅಧ್ಯಕ್ಷ ಗಜಾನನ ನಾಯ್ಕ್ ತಳ್ಳೀಗೆರೆ, , ಮಹಿಳಾ ಪ್ರಮುಖರಾದ ನಮಿತಾ ಬೀಡಿಕರ್, ನರ್ಮದಾ ನಾಯ್ಕ್,ಸುನಂದ ದಾಸ್, ಶಾಮಿಲಿ ಪಾಟಣ್ಕರ್,ಪುಷ್ಪಾ ಜೋರಾರ್ ಶೆಟ್ರು, ಪ್ರಮುಖರಾದ ಸತೀಶ್ ಶಿವಾನಂದ ನಾಯ್ಕ್, ಅಮಿತ್ ಅಂಗಡಿ,  ಶಿವು ಕವಳಿ,ಆರ್.ಎಸ್.ಭಟ್, ಸಂತೋಷ್ ಪಾಟಣ್ಕರ್,ಕಿರಣ್ ಬುರಾನಿ, ಗೌತಮ್ ಕಾಮತ್,ನವೀನ್ ನಾಯ್ಕ್,ಗಜಾನನ ಭಟ್,, ಸಿದ್ದಾರ್ಥ ನಂದೊಳ್ಳಿಮಠ, ನರೇಂದ್ರ ಪಾಟೀಲ್, ಉದಯ್ ನಾಯ್ಕ್,ಶಿವು ನಾಯ್ಡು,ರಾಮು ಇನ್ನಿತರ ಪ್ರಮುಖರು ಉಪಸ್ಥಿತರಿದ್ದರು

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ಅಂಬೇಡ್ಕರ್ ಕೇವಲ ಭಾರತಕ್ಕೆ ಸೀಮಿತರಲ್ಲ ಅವರು ಜಗತ್ಪುರುಷ ಮನುಕುಲದ ಘನತೆ – ಹೆಬ್ಬಾರ್.

ಪ್ರತಿಧ್ವನಿ ಯಲ್ಲಾಪುರ – ಅಂಬೇಡ್ಕರ್ ಅವರ ಬಗ್ಗೆ ಮಾತನಾಡಲು ಯುಗ ಒಂದು ಸಾಲದು ಅವರೊಂದು ವಿಶ್ವಕೋಶ. ಅವರು ಕೇವಲ ಭಾರತಕ್ಕೆ …

Leave a Reply

Your email address will not be published. Required fields are marked *