Breaking News

ಸಿ.ಸಿ‌ ಕ್ಯಾಮೆರಾ ಮಹಿಮೆ – ಬೈಕ್ ಸವಾರರ ಹೆಲ್ಮೆಟ್ ಒಲುಮೆ- -ಯಲ್ಲಾಪುರ ಪೊಲೀಸರ ಉಪಾಯ ಸಕ್ಸಸ್..

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ

ಯಲ್ಲಾಪುರ : ಇತ್ತೀಚಿನ ದಿನಗಳಲ್ಲಿ ತಾಲೂಕಿನಾಧ್ಯಂತ ವಾಹನಗಳ ಸಂಖ್ಯೆ ಹೆಚ್ಚಾಗಿದೆ. ಅದರಲ್ಲೂ ದ್ವಿಚಕ್ರ ವಾಹನಗಳ ಸಂಖ್ಯೆ ವಿಪರೀತ ಹೆಚ್ಚಿದ್ದು ಅದಕ್ಕೆ ಸರಿಹೊಂದುವಂತೆ ಅಪಘಾತಗಳ ಸಂಖ್ಯೆಯು ಹೆಚ್ಚಳವಾಗಿದೆ. ಇದನ್ನು ತಡೆಗಟ್ಟಲು ಯಲ್ಲಾಪುರ ಪೊಲೀಸರು ಹುಡುಕಿದ ಅದ್ಬುತವಾದ ಉಪಾಯ ” ಸಿ.ಸಿ.ಕ್ಯಾಮೆರಾ ಎಚ್ಚರ ” ಯಶಸ್ವಿಯಾಗಿದೆ.

  ಬ್ಯಾಂಕ್, ಫೈನಾನ್ಸ್, ಸಹಕಾರಿ ಸಂಘಗಗಳು ಬೈಕ್ ಕೊಡಿಸುವುದಕ್ಕೆ ಸಾಲದ ರೂಪದಲ್ಲಿ ಸಹಾಯಕ್ಕೆ ಮುಂದಾಗುತ್ತವೆ ಇದರಿಂದಾಗಿಯು  ವಾಹನಗಳ ಸಂಖ್ಯೆ ಹೆಚ್ಚಾಗಿದೆ. ಇದರಿಂದ ಉಪಯೋಗ ಎಷ್ಟಿದೆಯೊ ಅಷ್ಟೇ ಅಪಾಯವು ಬೆನ್ನು ಹತ್ತಿದೆ.

   ಸಾರ್ವಜನಿಕರಿಂದ ಸಂಚಾರಿ ನಿಯಮಗಳು  ಪಾಲನೆಯಾಗದೆ ,ಬೈಕ್ ಚಲಾಯಿಸುವ ಯುವಕರಲ್ಲಿ ಜಾಗೃತಿ ಇಲ್ಲದೆ ಹಲವು ಅಪಘಾತಗಳು ಸಂಭವಿಸಿ ತಂದೆತಾಯಿ ಅದೆಷ್ಟೊ ಮಕ್ಕಳನ್ನು, ಹೆಂಡತಿಯರು ಗಂಡಂದಿರನ್ನು,ಮಕ್ಕಳು ಪೊಷಕರನ್ನು ಕಳೆದುಕೊಂಡು ಸುಂದರ ಕುಟುಂಬಗಳು ಚಿದ್ರವಾದ ಘಟನೆಗಳು ನಮ್ಮ ಕಣ್ಣಮುಂದಿದೆ. ಇಂತಹ ಸಮಸ್ಯೆಗಳನ್ನು ನಿಯಂತ್ರಣಕ್ಕೆ ತರಲು ಯಲ್ಲಾಪುರ ಪೊಲೀಸರು ಕಂಡುಕೊಂಡ ಅದ್ಬುತವಾದ ಉಪಾಯ ” ಸಿ‌ಸಿ.ಕ್ಯಾಮೆರಾ ಎಚ್ಚರಿಕೆ ವಿಧಾನ” 

ಪಟ್ಟಣದಾದ್ಯಂತ ಪ್ರಮುಖ ವೃತ್ತಗಳಲ್ಲಿ ಅತ್ಯಾಧುನಿಕ ಸಿ.ಸಿ.ಕ್ಯಾಮೆರಾಗಳು ಕಾರ್ಯ ನಿರ್ವಹಿಸುತ್ತಿದ್ದು ಇತರೆಡೆಗಳಲ್ಲಿ 30 ಕ್ಕು ಹೆಚ್ಚು ಕ್ಯಾಮೆರಾಗಳು ಕೆಲಸ ಮಾಡುತ್ತಿವೆ. ಇದರ ಸಹಾಯದಿಂದ ಯಾವುದೆ ವಾಹನಗಳ ನಂಬರ್ ಪ್ಲೇಟ್ ಸೆರೆ ಹಿಡಿದು ಯಲ್ಲಾಪುರ ಠಾಣೆಯಲ್ಲಿರುವ ದೊಡ್ಡದಾದ ಮಾನಿಟರ್ ಗೆ ರವಾನಿಸುತ್ತದೆ. ನಂಬರ್ ಪ್ಲೇಟ್ ಸ್ಕ್ಯಾನ್ ಆದೊಡನೆ ವಾಹನದ ಮಾಡೆಲ್ ಯಾವುದು,ಮಾಲಿಕ ಯಾರು?, ಇನ್ಷೂರೆನ್ಸ್ ಇದೆಯೋ ಇಲ್ಲವೋ? ಹೊಗೆ ಪರಿಕ್ಷೆ ಮಾಡಿಸಿದ್ದಾರೊ ಇಲ್ಲವೊ ? ಎಂಬುದರ ಬಗ್ಗೆ ನಿಖರ ಮಾಹಿತಿ ಲಭ್ಯವಾಗುತ್ತದೆ.

ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಇದನ್ನೆ ವೀಕ್ಷಿಸಲು ಒರ್ವ ಸಿಬ್ಬಂದಿ ಇದ್ದು ಸಂಚಾರಿ ನಿಯಮಗಳನ್ನು ಉಲ್ಲಂಘಿಸಿದ ವಾಹನ ಸವಾರರಿಗೆ ದೂರವಾಣಿ ಕರೆ ಮಾಡಿ  ನಿಯಮ ಉಲ್ಲಂಘಿಸಿದ ಮಾಹಿತಿ ನೀಡಿ ಠಾಣೆಗೆ ಬಂದು ದಂಡ ಕಟ್ಟಲು ಸೂಚನೆ ನೀಡಲಾಗುತ್ತದೆ. ಇಲ್ಲವಾದಲ್ಲಿ ನ್ಯಾಯಾಲಯದಲ್ಲಿ ಕಟ್ಟುವಂತೆ ನೋಟಿಸ್ ಮನೆ ಬಾಗಿಲಿಗೆ ಬಂದುಬಿಡುತ್ತದೆ ಕೊಟ್೯ನಲ್ಲಿ  ದಂಡ ಪಾವತಿಸಬೇಕಾಗುತ್ತದೆ.

ಇಷ್ಟೆಲ್ಲಾ ಸಮಸ್ಯೆ ಮೈಮೇಲೆ ಎಳೆದುಕೊಳ್ಳುವ ಬದಲು ಸಂಚಾರಿ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದೆ ಒಳ್ಳೆಯ ಉಪಾಯ ಎಂದು ತಿಳಿದು 10% ನಿಯಮ ಪಾಲಿಸುತ್ತಿದ್ದ ಸಾರ್ವಜನಿಕರು ಈಗ 80% ಗಿಂತಲು ಅಧಿಕ  ಸವಾರರು ನಿಯಮಗಳನ್ನು ಚಾಚು ತಪ್ಪದೆ ಪಾಲಿಸುತ್ತಿದ್ದಾರೆ. ಇದಕ್ಕೆ ಯಲ್ಲಾಪುರ ಪೊಲೀಸರ ಸಿ.ಸಿ.ಕ್ಯಾಮೆರಾ ಕಾನ್ಸಪ್ಟ್ ಪರಿಣಾಮಕಾರಿಯಾಗಿ ಯಶಸ್ವಿಯಾಗಿದೆ.

• 100 ಕ್ಕೆ 80 ಜನರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ ವಾಹನ ಚಲಾಯಿಸುತ್ತಿದ್ದಾರೆ.

• ಕಾರುಗಳನ್ನು ಚಲಾಯಿಸುವಾಗ ಸೀಟ್ ಬೆಲ್ಟ್  ಹಾಕಿಕೊಳ್ಳುವುದು, ರಾಂಗ್ ಸೈಡ್  ಚಲಾಯಿಸುವುದನ್ನು ನಿಲ್ಲಿಸಿದ್ದು, ಓವರ್ ಸ್ಪೀಡ್ ಪ್ರಕರಣಗಳು ಗಣನೀಯವಾಗಿ ಇಳಿಕೆಯಾಗಿದೆ. ತ್ರಿಬ್ಬಲ್ ರೈಡ್,  ಡಿ.ಎಲ್.ಇಲ್ಲದೆ ವಾಹನ ಚಾಲನೆ ಪ್ರಕರಣಗಳು ಸಹ ನಿಧಾನವಾಗಿ ಕಡಿಮೆಯಾಗುತ್ತಲಿದೆ.

• ವಿಶೇಷವಾಗಿ ಸರ್ಕಾರಿ ನೌಕರರು ಹೆಚ್ಚಿನ ಸಂಖ್ಯೆಯಲ್ಲಿ ಹೆಲ್ಮೆಟ್ ಧರಿಸುತ್ತಿದ್ದು  ಇತರರಿಗೆ ಮಾದರಿಯಾಗಿದ್ದಾರೆ. 

• ಪ್ರಾರಂಭದಲ್ಲೆ ಉತ್ತಮ ಪ್ರತಿಕ್ರಿಯೆ ಯಶಸ್ಸಿನ ರೂಪದಲ್ಲಿ ದೊರೆತ ಫಲವಾಗಿ ಯಲ್ಲಾಪುರ ಪೊಲೀಸರು ಅಂಗಡಿ,ಹೊಟೆಲ್,ಬ್ಯಾಂಕ್, ಸಹಕಾರಿ ಸಂಸ್ಥೆಗಳು ಅಂಗಡಿ ಮಳಿಗೆಗಳು ರಸ್ತೆ ಬದಿಯಲ್ಲಿರುವ ಗ್ರಾಹಕರ ಮನೆಗಳಿಗು ಉತ್ತಮ ಗುಣ ಮಟ್ಟದ ಸಿ.ಸಿ ಕ್ಯಾಮೆರಾಗಳನ್ನು ಅಳವಡಿಸಿಕೊಳ್ಳುವಂತೆ ಮನವೊಲಿಸುತ್ತಿದ್ದಾರೆ.

• ಸಿ.ಸಿ ಕ್ಯಾಮೆರಾ ಗಳಿಂದ ಕಾನೂನಿನ ಬಿಗಿತ ಮತ್ತಷ್ಟು ಗಟ್ಟಿಗೊಳಿಸುವುದು ಜೊತೆಗೆ ಇತರೆ ಅಪರಾಧಗಳನ್ನು ತಡೆಗಟ್ಟಬಹುದು ಮತ್ತು ಅಪರಾಧ ಹೇಗೆ ನಡೆಯಿತು ಅಪರಾಧಿ ಯಾರೆಂಬುದನ್ನು ಬಲು ಸುಲಭವಾಗಿ ಪತ್ತೆಹಚ್ಚಬಹುದು. ಇದೇ ಭಯದಲ್ಲಿ ಅಪರಾಧಗಳ ಸಂಖ್ಯೆಯು ಗಣನೀಯವಾಗಿ ಇಳಿಕೆಯಾಗಲಿದೆ.

ಪಟ್ಟಣದಲ್ಲಿ ಪ್ರಮುಖವಾಗಿ ಕಾರ್ಯನಿರ್ವಹಿಸುತ್ತಿರುವ ಸಿಸಿ ಕ್ಯಾಮೆರಾಗಳು.

ಅಂಬೇಡ್ಕರ್ ವೃತ್ತ

ಬಸವೇಶ್ವರ ವೃತ್ತ

ಪೊಲೀಸ್ ವೃತ್ತ

ಸಂಕಲ್ಪ ವೃತ್ತ

ತಟಗಾರ್ ಕ್ರಾಸ್

ಬಿಸಗೋಡು ಕ್ರಾಸ್

ಹಳಿಯಾಳ ಕ್ರಾಸ್

ಮಾಗೋಡು ಕ್ರಾಸ್

ಇನ್ನೂ ಹಲವು ಕಡೆಗಳಲ್ಲಿ, ಪ್ರಮುಖ ಸ್ಥಳಗಳಲ್ಲಿ ಸಿ.ಸಿ ಕ್ಯಾಮೆರಾಗಳು ಪೊಲೀಸ್ ವೃತ್ತಿಯನ್ನು ನಿಭಾಯಿಸುತ್ತಿವೆ.

ಒಟ್ಟಿನಲ್ಲಿ ನಿಯಮ ಉಲ್ಲಂಘಿಸಿ ಸಂಚರಿಸುವುದು. ಪೊಲೀಸರು ಅಡ್ಡ ಹಾಕಿ ಕೇಸ್ ಮಾಡಲು ಮುಂದಾದರೆ ಸಿಫಾರಿಶ್ ಮಾಡಿಸಿ ಮುಜುಗರಕ್ಕೊಳಗಾಗುವುದು ತಪ್ಪಿದಂತಾಗಿದ್ದು ಎಲ್ಲರಲ್ಲೂ ಜಾಗೃತಿ ಮೂಡುತ್ತಿದೆ. 

ಅಪಘಾತ ತಡೆಗಟ್ಟಲು ಸಂಚಾರಿ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಆದರೆ ಈಗಿನ ಯುವ ಪೀಳಿಗೆಯಲ್ಲಿ ಜಾಗೃತಿ ಇಲ್ಲದೆ ನಿರ್ಲಕ್ಷ್ಯ ತೋರುತ್ತಿದ್ದರು. ಇತ್ತೀಚೆಗೆ ಯಲ್ಲಾಪುರ ಪೊಲೀಸರು ಸಿ.ಸಿ.ಕ್ಯಾಮೆರಾಗಳ ಮೂಲಕ ದಂಡದ ಬಿಸಿ ಮುಟ್ಟಿಸಲು ಪ್ರಾರಂಭಿಸಿದ್ದು ಬಹುತೇಕ ಬೈಕ್ ಸವಾರರು ತಲೆಯಲ್ಲಿ ಹೆಲ್ಮೆಟ್ ಕಾಣಿಸುತ್ತಿದೆ. ಮತ್ತು ನಿಯಮಗಳನ್ನು ಚಾಚು ತಪ್ಪದೆ ಪಾಲಿಸಲು ಪ್ರಾಭಿಸಿದ್ದಾರೆ ಇದು ಒಳ್ಳೆಯ ಬೆಳವಣಿಗೆ :-     ,ನಿವೃತ್ತ ಸರ್ಕಾರಿ ನೌಕರ,ಯಲ್ಲಾಪುರ               

ಪಟ್ಟಣ ವ್ಯಾಪ್ತಿಯಲ್ಲಿ ಅಪಘಾತಗಳ ಸಂಖ್ಯೆ ಶೂನ್ಯದತ್ತ ಸಾಗುತ್ತಿರುವುದು ನಮ್ಮ ಶ್ರಮ ಸಾರ್ಥಕ ಎನಿಸುತ್ತಿದೆ. ಸಿ‌ಸಿ ಕ್ಯಾಮೆರಾಗಳು ಸಂಚಾರಿ ನಿಯಮ ಉಲ್ಲಂಘಿಸಿದವರ ಮಾಹಿತಿ ನೀಡುತ್ತಿದ್ದು ರಸ್ತೆಗಳಲ್ಲಿ ಅಡ್ಡ ಹಾಕುವುದು ತಪ್ಪಿದೆ. ಸಾರ್ವಜನಿಕರು ಸಹ ಉತ್ತಮ ರೀತಿಯಲ್ಲಿ ಸಹಕರಿಸುತ್ತಿದ್ದು ಸಿಸಿ ಕ್ಯಾಮೆರಾ ಎಚ್ಚರಿಕೆ ಕೆಲಸ ಮಾಡುತ್ತಿದೆ. ಕಾನೂನು ಬದ್ದ ಸಂಚಾರ ಸವಾರರಿಗು ಆರೋಗ್ಯಕರ ಇದು ನಮ್ಮ ದ್ಯೆಯ. ರಮೇಶ್ ಹಾನಾಪುರ , ಪಿ.ಐ ಯಲ್ಲಾಪುರ

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ವೈ.ಟಿ.ಎಸ್‌.ಎಸ್ ನಿಂದ ರಾಧಾ ಕೃಷ್ಣ ವೇಷ ಸ್ಪರ್ಧೆ.

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ ವರದಿ, ಯಲ್ಲಾಪುರ : ಸ್ಥಳೀಯ ವೈ.ಟಿ.ಎಸ್.ಎಸ್ …

Leave a Reply

Your email address will not be published. Required fields are marked *