
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ
ಯಲ್ಲಾಪುರ : ರಾಜ್ಯದ ಹೆಸರಾಂತ ಪತ್ರಿಕೆ ವಿಜಯ ಕರ್ನಾಟಕ ವತಿಯಿಂದ ಸಾಧಕ ರೈತರಿಗೆ ಗೌರವಿಸಿ ಸನ್ಮಾನಿಸಲಾಯಿತು.

ಶನಿವಾರ ಪಟ್ಟಣದ ಅಡಿಕೆ ಭವನದಲ್ಲಿ ವಿಜಯ ಕರ್ನಾಟಕ ವತಿಯಿಂದ ಹಮ್ಮಿಕೊಂಡಿದ್ದ ವಿಕ ಸೂಪರ್ ಸ್ಟಾರ್ ರೈತ 2024 – 25 ರ ಪ್ರಶಸ್ತಿ ಪುರಸ್ಕಾರ ಕಾರ್ಯಕ್ರಮದಲ್ಲಿ ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಶಿವರಾಮ ಹೆಬ್ಬಾರ್ ಪಾಲ್ಗೊಂಡು ದೀಪ ಬೆಳಗಿ ಉದ್ಘಾಟಿಸಿ ಉತ್ತರ ಕನ್ನಡ ಜಿಲ್ಲೆಯ ಪ್ರಗತಿ ಪರ ರೈತರನ್ನು ಸನ್ಮಾನಿಸಿ ಪ್ರಶಸ್ತಿ ಪತ್ರವನ್ನು ನೀಡಿ ಗೌರವಿಸಿದರು.
ಯಲ್ಲಾಪುರ ತಾಲೂಕು ವಿಜಯ ಕರ್ನಾಟಕ ವರದಿಗಾರ ನಾಗರಾಜ್ ಮದ್ಗುಣಿ ನಿರೂಪಿಸಿದರು. ಪ್ರೇಮಾ ಜೋಶಿ ಪ್ರಾರ್ಥಿಸಿದರು. ಡಾ,ಸುಚೇತಾ ಮದ್ಗುಣಿ ಮತ್ತು ಸಂಗಡಿಗರು ರೈತ ಗೀತೆ ಹಾಡಿದರು.



Prathidvani Yellapura