Breaking News

ಅರಣ್ಯರಕ್ಷಣೆಯ ಬೇಲಿಗೆ ರಕ್ಷಣೆ ಬೇಕಿದೆ ಇಲ್ಲವಾದರೆ ಸಾರ್ವಜನಿಕರ ತೆರಿಗೆ ಹಣ ಪೋಲಾಗಲಿದೆ.!!

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ


ಯಲ್ಲಾಪುರ : ಅರಣ್ಯ ಇಲಾಖೆ ಅರಣ್ಯ ರಕ್ಷಣೆಗೆಂದು ಹಾಕುವ ಬೇಲಿಗೇ ರಕ್ಷಣೆ ಬೇಕಿದೆ. ಸಾರ್ವಜನಿಕರ ತೆರಿಗೆ ಹಣದಲ್ಲಿ ಇಲಾಖೆಗಳು ತಮ್ಮ ವಿವೇಚನೆಗೆ ಬಂದಂತೆ ಯೋಜನೆಗಳಿಗೆ ಹಣ ಸುರಿಯುತ್ತ ಬಂದಿದ್ದು ಅದರಲ್ಲಿ ಅರಣ್ಯಕ್ಕೆ ತಂತಿ ಬೇಲಿ ಅಳವಡಿಸುವ ವಿಚಾರ ಸಮಸ್ಯೆಯಾಗಿಯೇ ಉಳಿದಿದ್ದು ಸದಾ ಜೀವಂತವಾಗಿದೆ.


ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎಂಬಂತೆ ವಿಶಾಲವಾದ ಅರಣ್ಯವನ್ನು ತಂತಿ ಬೇಲಿ ಹಾಕಿ ರಕ್ಷಿಸುತ್ತೇವೆಂಬುದೇ ಹಾಸ್ಯಾಸ್ಪದ ಸಂಗತಿ ಆದರು ತಮ್ಮ ಕೈಲಾದ ಮಟ್ಟಿಗಾದರು ಅರಣ್ಯ ರಕ್ಷಣೆಗೆ ಮುಂದಾದ ಅರಣ್ಯ ಇಲಾಖೆ ಕೆಲವು ಕಡೆ ವಿಶೇಷವಾಗಿ ರಸ್ತೆ ಬದಿಯಲ್ಲಿ ಸಿಮೆಂಟ್ ಕಂಬಹಾಕಿ ಅದರಲ್ಲಿ ತಂತಿ ಪೋಣಿಸಿ ಬೇಲಿ ಹಾಕಿದ್ದಾರೆ. ಬೇಲಿ ಹಾಕಿದ ಕೆಲವೇ ದಿನಗಳಲ್ಲಿ ಗಾಳಿಯ ರಭಸ ಮತ್ತು ಮಳೆಯ ಆರ್ಭಟಕ್ಕೆ ಕೆಲವೆಡೆ ಬೃಹತ್ ಗಾತ್ರದ ಮರಗಳ ಭಾರದ ರೆಂಬೆಕೊಂಬೆಗಳು ಧರೆಗುರುಳಿದ್ದು ಈ ಸಂದರ್ಭದಲ್ಲಿ ಮುರಿದು ಬಿದ್ದ ಕಂಬಗಳು ಕಿತ್ತುಹೋದ ಮುಳ್ಳು ತಂತಿಗಳು ಇಂದಿಗು ಹಾಗೆ ಬಿದ್ದಿವೆ.
ಅರಣ್ಯ ರಕ್ಷಣೆಗೆಂದು ಅಳವಡಿಸಿದ ಬೇಲಿಗಳನ್ನು ರಕ್ಷಿಸುವ ಕಾರ್ಯ ಇಲಾಖೆಯಿಂದಲೆ ಜರುಗಬೇಕಿದೆ.

ಸಾರ್ವಜನಿಕರ ತೆರಿಗೆ ಹಣದಲ್ಲಿ ಹಾಕಿದ ಬೇಲಿ ನಿರ್ವಹಣೆ ಇಲ್ಲದೆ ಹಾಳಾಗಿ ಹೋದರೆ ಅದಕ್ಕೆ ಇಲಾಖೆಯೆ ಹೊಣೆಯಾಗಬೇಕಾಗುತ್ತದೆ. ತೆರಿಗೆ ಹಣವಿದೆ ಎಂದು ಮತ್ತೆಮತ್ತೆ ಬೇಲಿ ಹಾಕುವುದಕ್ಕೆ ಹಣ ಬಳಸುತ್ತಿದ್ದರೆ ಅರ್ಥವೇ ಇಲ್ಲದಂತಾಗಲಿದೆ ಎಂಬುದು ಇದೇ ರಸ್ತೆಯಲ್ಲಿ ಸಂಚರಿಸುವ ಸಾಮಾನ್ಯ ನಾಗರಿಕರ ಅಭಿಪ್ರಾಯವಾಗಿದೆ.


ಕಣ್ಣಿಗೆರೆ ರಸ್ತೆಯಲ್ಲಿ ಅಳವಡಿಸಿರುವ ತಂತಿ ಬೇಲಿಗೆ ಎಷ್ಟು ವರ್ಷವಾಯಿತು ? ಇದೀಗ ಪಾಳು ಬೀಳುತ್ತಿದ್ದು ನಿರ್ವಹಣೆಗೆಂದು ಹಣ ಸುರಿಯುತ್ತಿದ್ದರೆ ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟಾಗಲಿದೆ. ಅಧಿಕಾರಿಗಳು ಗಮನ ಹರಿಸಿ ಬಿದ್ದಿರುವ ಕಂಬಗಳನ್ನೇ ಪುನಃ ನಿಲ್ಲಿಸಿ ತುಂಡಾದ ತಂತಿಗಳನ್ನು ಜೋಡಿಸಿದರೆ ಬೇಲಿ ಗಟ್ಟಿಮುಟ್ಟಾಗುತ್ತದೆ. ಅದನ್ನು ಬಿಟ್ಟು ಮತ್ತೊಮ್ಮೆ ಬೇಲಿ ಹಾಕಲು ಹಣ ಸುರಿದರೆ ತೆರಿಗೆ ಹಣಕ್ಕೆ ಅರ್ಥವೇ ಇಲ್ಲದಂತಾಗುತ್ತದೆ. ವಿಲ್ಸನ್ ಫರ್ನಾಂಡೀಸ್ ಜಯಕರ್ನಾಟಕ ಸಂಘಟನೆ ತಾಲೂಕು ಅಧ್ಯಕ್ಷ

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ವೈ.ಟಿ.ಎಸ್‌.ಎಸ್ ನಿಂದ ರಾಧಾ ಕೃಷ್ಣ ವೇಷ ಸ್ಪರ್ಧೆ.

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ ವರದಿ, ಯಲ್ಲಾಪುರ : ಸ್ಥಳೀಯ ವೈ.ಟಿ.ಎಸ್.ಎಸ್ …

Leave a Reply

Your email address will not be published. Required fields are marked *