Breaking News

ದಾಹ ತಣಿಸಲಿಲ್ಲ ಬೇಡ್ತಿ ಕುಡಿವ ನೀರಿನ ಯೋಜನೆ..!!! ‌‌ ‌‌‌ ‌‌ ‌‌‌‌‌‌‌ ಯಲ್ಲಾಪುರದ ದಾಹ ನೀಗಲಿದೆ ಬೊಮ್ಮನಹಳ್ಳಿ ಯೋಜನೆ.

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ‌‌‌‌ ‌‌‌‌‌‌ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ……..


ಪ್ರತಿಧ್ವನಿ,ಯಲ್ಲಾಪುರ : ರಾಜ್ಯದಲ್ಲಿ ಕೊಳವೆ ಬಾವಿಯನ್ನೇ ಆಧರಿಸಿ ಕುಡಿಯುವ ನೀರಿನ ಅವಶ್ಯಕತೆ ಪೂರೈಸುತ್ತಿರುವ ಕೆಲವೇ ಪಟ್ಟಣ ಪಂಚಾಯತಗಳಲ್ಲಿ ಯಲ್ಲಾಪುರ ಪಟ್ಟಣ ಪಂಚಾಯತಿಯೂ ಒಂದು. ಅದಕ್ಕೀಗ ಮುಕ್ತಿ ಬೇಕಿದ್ದು ಶಾಶ್ವತ ಕುಡಿಯುವ ನೀರಿನ ಯೋಜನೆ ಅನುಷ್ಠಾನಗೊಳ್ಳಲೇ ಬೇಕಿದೆ.


ದಿನಕಳೆದಂತೆ ಪಟ್ಟಣ ಪ್ರದೇಶ ಬೆಳೆಯುತ್ತಿದ್ದು ವಸತಿಗಳ ಸಂಖ್ಯೆಯೂ ಹೆಚ್ಚುತ್ತಿದೆ. ಯಲ್ಲಾಪುರ ಪಟ್ಟಣ ಪಂಚಾಯತ ವ್ಯಾಪ್ತಿಯಲ್ಲಿ 19 ವಾರ್ಡುಗಳಿದ್ದು ಕಳೆದೆರಡು ವರ್ಷಗಳಿಂದ 48 ಕೊಳವೆಬಾವಿಗಳ ಮೂಲಕ ಊರ ನಾಗರೀಕರ ನೀರಿನ ಅವಶ್ಯಕತೆಯನ್ನು ಪೂರೈಸುತ್ತಾ ಬಂದಿತ್ತು. ಪ್ರಸಕ್ತ ಸಾಲಿನಲ್ಲಿ 10 ಹೊಸ ಕೊಳವೆಬಾವಿಗಳನ್ನು ಕೊರೆಸಿದ್ದು ಇದೀಗ ಪಟ್ಟಣ ವ್ಯಾಪ್ತಿಯಲ್ಲಿ ಒಟ್ಟು 58 ಕೊಳವೆಬಾವಿಗಳ ಮೂಲಕ ನೀರಿನ ಅವಶ್ಯಕತೆ ಪೂರೈಸುತ್ತಿದೆ.
ಬೇಡ್ತಿ ನದಿಯಿಂದ ಪಟ್ಟಣಕ್ಕೆ ಶಾಶ್ವತ ಕುಡಿಯುವ ನೀರಿನ ಯೋಜನೆಗಾಗಿ ವ್ಯಯಿಸಿದ ಕೋಟ್ಯಾಂತರ ಹಣ ವ್ಯರ್ಥವಾಗಿದ್ದು ಕೊಳವೆಬಾವಿಗಳನ್ನೇ ನಂಬಿ ಬದುಕುವ ಸ್ಥಿತಿ ಪಟ್ಟಣಕ್ಕೆ ಒದಗಿದೆ. ಸುತ್ತಲೂ ಅರಣ್ಯಪ್ರದೇಶವಿದ್ದು ಕಾಲಕಾಲಕ್ಕೆ ಮಳೆಯೂ ಸಾಕಷ್ಟು ಪ್ರಮಾಣದಲ್ಲಿ ಬೀಳುತ್ತಿರುವುದರಿಂದ ಸದ್ಯದ ಮಟ್ಟಿಗೆ ಅಂತರ್ಜಲಕ್ಕೇನೂ ಕೊರತೆಯಾಗಿಲ್ಲವಾದರೂ ಪ್ರಕೃತಿ ಮುನಿದು ಮಳೆಯ ಪ್ರಮಾಣ ಕಡಿಮೆಯಾಗಿ ಅಂತರ್ಜಲ ಮಟ್ಟ ಬಾರೀ ಪ್ರಮಾಣದಲ್ಲಿ ಕುಸಿದರೆ ಯಲ್ಲಾಪುರ ಪಟ್ಟಣದಲ್ಲಿ ನೀರಿಗೆ ಹಾಹಾಕಾರ ಮುಗಿಲು ಮುಟ್ಟಲಿದೆ.

ಕೊಳವೆ ಬಾವಿ ಹೊರತುಪಡಿಸಿ ಪಟ್ಟಣಕ್ಕೆ ಇನ್ನಾವುದೇ ಮೂಲದಿಂದಲೂ ಸದ್ಯದ ಮಟ್ಟಿಗೆ ನೀರಿನ ಪೂರೈಕೆ ಸಾಧ್ಯವಿಲ್ಲ.
ಇಂತಹ ಗಂಭೀರ ಸಮಸ್ಯೆಯ ಬಗ್ಗೆ ಅರಿವಿದ್ದ ಸಚಿವ ಶಿವರಾಮ ಹೆಬ್ಬಾರ್ ಸರ್ಕಾರದ ಮಟ್ಟದಲ್ಲಿ ಪ್ರಯತ್ನಿಸಿ, ಮುಖ್ಯಮಂತ್ರಿಗಳೊಡನೆ ಚರ್ಚಿಸಿ ಯಲ್ಲಾಪುರ ಪಟ್ಟಣದ ಶಾಶ್ವತ ಕುಡಿಯುವ ನೀರಿನ ಯೋಜನೆಗಾಗಿ 100 ಕೋಟಿ ಬೃಹತ್ ವೆಚ್ಛದಲ್ಲಿ ಬೊಮ್ಮನಹಳ್ಳಿ ಅಣೆಕಟ್ಟಿನಿಂದ ಯಲ್ಲಾಪುರಕ್ಕೆ ನೀರು ಸರಬರಾಜು ಯೋಜನೆ ರೂಪಿಸಿದ್ದು ಕಾರ್ಯ ಪ್ರಗತಿಯಲ್ಲಿದೆ.


ಬೊಮ್ಮನಹಳ್ಳಿ ಅಣೆಕಟ್ಟು ಪ್ರದೇಶವು ದಾಂಡೇಲಿ ತಾಲೂಕಿನ ಅಂಬಿಕಾನಗರ ಗ್ರಾ.ಪಂ ವ್ಯಾಪ್ತಿಯಲ್ಲಿದ್ದು ರಸ್ತೆ ಮಾರ್ಗವಾಗಿ ಸಾಗಿದರೆ ಯಲ್ಲಾಪುರದಿಂದ 35 ಕಿ.ಮೀ ಅಂತರದಲ್ಲಿದೆ. ಈ ಮೊದಲು ತಟ್ಟಿಹಳ್ಳ ಡ್ಯಾಂನಿಂದ ಪಟ್ಟಣಕ್ಕೆ ನೀರು ತರುವ ಯೋಜನೆ ತಾಂತ್ರಿಕ ಸಮಸ್ಯೆಗಳ ಕಾರಣದಿಂದ ಕೈಬಿಟ್ಟಿದ್ದು ಬೊಮ್ಮನಹಳ್ಳಿ-ಯಲ್ಲಾಪುರ ಯೋಜನೆ ಉತ್ತಮವೆನಿಸಿ ಕಾಮಗಾರಿಯ ಪೂರ್ವದ ಕಾರ್ಯ ಪ್ರಗತಿಯಲ್ಲಿದೆ.

ದೊಡ್ಡಗಾತ್ರದ ಪೈಪುಗಳ ಮೂಲಕ ನೀರು ಹರಿಸಲಿದ್ದು ಬೃಹತ್ ಗಾತ್ರದ ಜಾಕ್ವೆಲ್ ಹಾಗೂ ಉತ್ಕೃಷ್ಟ ದರ್ಜೆಯ ತಂತ್ರಜ್ಞಾನವನ್ನು ನೀರು ಸರಬರಾಜು ಪ್ರಕ್ರಿಯೆಗೆ ಬಳಸಲಿದ್ದಾರೆ.

ಜಲಪಾತಗಳ ಆಗರವೆನಿಸಿಕೊಂಡಿರುವ ಯಲ್ಲಾಪುರ ತಾಲೂಕಿನಲ್ಲಿ ತಾಲೂಕು ಕೇಂದ್ರವಾದ ಯಲ್ಲಾಪುರದಲ್ಲಿ ಭವಿಷ್ಯದಲ್ಲಿ ಕುಡಿಯುವ ನೀರಿಗೆ ಬರವೆಂದರೆ ಹಾಸ್ಯಾಸ್ಪದವೆನಿಸಿಕೊಳ್ಳುವ ಆತಂಕವಿದೆ. ಶೀಘ್ರದಲ್ಲಿ ಸಮಸ್ಯೆ ಬಗೆಹರಿಯದಿದ್ದರೆ ಬರದ ನಾಡಿನಲ್ಲಿ ಕಾಣುವ ನೀರಿನ ಹಾಹಾಕಾರ ಹಚ್ಚಹಸಿರಿನ ಮಲೆನಾಡು ಯಲ್ಲಾಪುರದಲ್ಲಿ ಕಾಣುವಂತಾಗುತ್ತದೆ ಎಂಬುದು ಪ್ರಾಜ್ಞರ ಅಭಿಪ್ರಾಯವಾಗಿದೆ.


ಅಂತರ್ಜಲ ಕುಸಿತವಾಗದಂತೆ ತಡೆಯಲು ಪಟ್ಟಣದಾದ್ಯಂತ ಇರುವ ಕೆರೆಗಳ ರಕ್ಷಣೆಯಾಗಬೇಕಿದೆ. ಮಳೆನೀರು ಹೆಚ್ಚಾಗಿ ಸಂಗ್ರಹವಾಗುವಂತೆ ಕೆರೆಗಳ ಹೂಳೆತ್ತುವ ಕಾರ್ಯ ಕಾಲಕಾಲಕ್ಕೆ ಜರುಗಬೇಕಿದೆ. ಇಲ್ಲವಾದಲ್ಲಿ ಸಮಸ್ಯೆ ಉಲ್ಬಣವಾಗಿ ನೀರಿನ ಹಾಹಾಕಾರ ತಪ್ಪಿದ್ದಲ್ಲ. ಸರ್ಕಾರದ ಪ್ರಯತ್ನ ಏನೇ ಇದ್ದರೂ ಶಾಶ್ವತ ಕುಡಿಯುವ ನೀರಿನ ಯೋಜನೆ ಎಲ್ಲಿಂದಲೋ ಯಾವ ರೂಪದಲ್ಲೇ ತಂದರೂ ಪಟ್ಟಣದ ಸಾರ್ವಜನಿಕರು ಮತ್ತು ಸ್ಥಳೀಯ ಆಡಳಿತ ಗಂಬೀರವಾಗಿ ಚಿಂತಿಸಿ ಇರುವ ಕೆರೆಗಳ ರಕ್ಷಣೆ ಮಾಡಿ ಅಂತರ್ಜಲ ಮಟ್ಟ ಹೆಚ್ಚಿಸುವತ್ತ ಕಾರ್ಯಪ್ರವೃತ್ತರಾಗಬೇಕಿದೆ. ವೆಂಕಟೇಶ್ ಮೂಡಲಗಿರಿ ಪೈ, ಸ್ಥಳೀಯ ನಾಗರಿಕರು

ಆತ್ಮೀಯ ಓದುಗರ ಗಮನಕ್ಕೆ
ಪ್ರತಿಧ್ವನಿ ಯಲ್ಲಾಪುರ ನಿಮ್ಮಿಂದ ವಿಶೇಷ ಲೇಖನವನ್ನು ಆಹ್ವಾನಿಸುತ್ತಿದೆ. ಪ್ರಸಕ್ತ ವಿದ್ಯಮಾನಗಳು, ಪ್ರೇಕ್ಷಣೀಯ ಸ್ಥಳಗಳ ಮಾಹಿತಿ, ಇನ್ನಿತರ ಪ್ರಮುಖ ವಿಷಯಗಳ ಕುರಿತು ನೀವು ಬರೆಯಲು ಪ್ರಾರಂಭಿಸಿ ನಿಮ್ಮ ಲೇಖನವನ್ನು ನಮ್ಮ ಪ್ರತಿಧ್ವನಿ ಯಲ್ಲಾಪುರ ವೆಬ್ ನಲ್ಲಿ ಪ್ರಕಟಿಸಲಾಗುವುದು.
>> ನಿಮ್ಮ ಲೇಖನ ಸಮಾಜಕ್ಕೆ ಉತ್ತಮ ಸಂದೇಶ ನೀಡುವಂತೆ ಮತ್ತು ಜಾಗೃತಗೊಳಿಸುವಂತಿರಬೇಕು.
>>>ಯಾವುದೆ ವ್ಯಕ್ತಿ, ಧರ್ಮ, ಜಾತಿ, ಸಂಘ ಸಂಸ್ಥೆಗಳ ಹಾಗು ರಾಜಕೀಯ ಪಕ್ಷ ಅಥವ ವ್ಯಕ್ತಿಗಳ ಭಾವನೆಗೆ ದಕ್ಕೆಯಾಗುವಂತಿರಬಾರದು.
>>>ಮೊಬೈಲ್ ನಲ್ಲೆ ಟೈಪ್ ಮಾಡಿ ಕಳಿಸಬೇಕು.
>>>ನಿಮ್ಮ ಹೆಸರು, ವಿಳಾಸ, ಮತ್ತು ನಿಮ್ಮ ಭಾವಚಿತ್ರ ಕಡ್ಡಾಯವಾಗಿ ಕಳಿಸಬೇಕು.
>>>ನಿಮ್ಮ ಲೇಖನವನ್ನು ” ಪ್ರತಿಧ್ವನಿ ಯಲ್ಲಾಪುರ ಅತಿಥಿ ಬರಹ” ದ ಅಡಿಯಲ್ಲಿ ಪ್ರಕಟಿಸಲಾಗುವುದು.
>>>ವಿ.ಸೂ<<< ನಿಮ್ಮ ಲೇಖನ ಯಾವಾಗ ಪ್ರಕಟಿಸಬೇಕು ಅಥವ ಬೇಡವೊ ಎಂಬ ನಿರ್ಧಾರ ಪ್ರತಿಧ್ವನಿ ಸಂಪಾದಕರ ಇಚ್ಚೆಯಾಗಿರುತ್ತದೆ.
ಮತ್ತೇಕೆ ತಡ ನೀವು ಬರೆಯಿರಿ
ಈ ವಾಟ್ಸಪ್ ಸಂಖ್ಯೆಗೆ ಕಳುಹಿಸಿ
9113096085, 8088255121

ಯಾರಿಗೆ ಗೊತ್ತು ನಿಮ್ಮಲ್ಲೆ ಒಬ್ಬ ಸಚ್ಚಿನ್, ವಿರಾಟ್ ಕೊಯ್ಲಿ,ಕೆ‌ಎಲ್.ರಾಹುಲ್ ರಂತಹ ಪ್ರತಿಭಾನ್ವಿತ ಕ್ರಿಕೇಟರ್ ಅಡಗಿರಬಹುದು. ಮತ್ತೇಕೆ ತಡ ತಕ್ಷಣ ಸೇರಿಸಿ

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ವೈ.ಟಿ.ಎಸ್‌.ಎಸ್ ನಿಂದ ರಾಧಾ ಕೃಷ್ಣ ವೇಷ ಸ್ಪರ್ಧೆ.

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ ವರದಿ, ಯಲ್ಲಾಪುರ : ಸ್ಥಳೀಯ ವೈ.ಟಿ.ಎಸ್.ಎಸ್ …

Leave a Reply

Your email address will not be published. Required fields are marked *