
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ…………
ಪ್ರತಿಧ್ವನಿ,ಯಲ್ಲಾಪುರ: ಅರಣ್ಯ ಸಂರಕ್ಷಣೆಯ ಮೂಲಕ ಇಲಾಖೆಯ ಆದಾಯದಲ್ಲಿ ಪಾಲು ಪಡೆದು, ಇಲಾಖೆಯೊಂದಿಗೆ ಗ್ರಾಮಸ್ಥರು ಕೈ ಜೋಡಿಸುವ ಉದ್ದೇಶದಿಂದಲೇ ಗ್ರಾಮ ಅರಣ್ಯ ಸಮಿತಿಗಳನ್ನು ರಚಿಸಲಾಗಿದ್ದು, ಇದರಿಂದ ಬೇಸಿಗೆಯಲ್ಲಿ ಕಾಡಿಗೆ ಬೀಳುವ ಬೆಂಕಿ ತಡೆ; ಅರಣ್ಯ ಕಳ್ಳತನ ಮತ್ತಿತರ ಕಾನೂನು ಬಾಹಿರ ಚಟುವಟಿಕೆಗಳಿಗೆ ನಿಯಂತ್ರಣ ಸಾಧ್ಯವಾಗಿದೆ ಎಂದು ಮಂಚೀಕೇರಿ ವಲಯಾರಣ್ಯಾಧಿಕಾರಿ ಅಮಿತ್ ಚವ್ಹಾಣ ಹೇಳಿದರು.
ಅವರು ತಾಲೂಕಿನ ಕುಂದರಗಿ ಗ್ರಾ.ಪಂ ವ್ಯಾಪ್ತಿಯ ಹೆಮ್ಮಾಡಿಯ ಗ್ರಾಮ ಅರಣ್ಯ ಸಮಿತಿ ಕಟ್ಟಡದಲ್ಲಿ ಯಲ್ಲಾಪುರ ವಿಭಾಗದ ಮಂಚೀಕೇರಿ ವಲಯದ ಅರಣ್ಯ ಇಲಾಖೆ ಆಶ್ರಯದಲ್ಲಿ ಗ್ರಾಮ ಅರಣ್ಯ ಸಮಿತಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ `ಪಾಲಿಸಿದರೆ ಪಾಲು’ ಯೋಜನೆಯ ಲಾಭಾಂಶವನ್ನು ಫಲಾನುಭವಿಗಳಿಗೆ ವಿತರಿಸಿ ಮಾತನಾಡಿದರು.
ಇತ್ತೀಚಿನ ವರ್ಷಗಳಲ್ಲಿ ಅಧಿಕ ಅರಣ್ಯ ನಾಶದಿಂದಾಗಿ ಕೃಷಿಕರಿಗೆ ಮತ್ತು ವನ್ಯ ಜೀವಿಗಳಿಗೆ ತೀರಾ ತೊಂದರೆಯಾಗಿದ್ದು, ವನ್ಯ ಪ್ರಾಣಿಗಳ ಹಾವಳಿ ಮಿತಿಮೀರಲೂ ಅರಣ್ಯ ವಿನಾಶವೇ ಕಾರಣವಾಗಿದೆ. ಇದನ್ನು ಪ್ರತಿಯೊಬ್ಬರೂ ಅರಿತುಕೊಂಡು ಅರಣ್ಯ ಸಂರಕ್ಷಣೆಯ ಕಾರ್ಯದಲ್ಲಿ ಕೈಜೋಡಿಸಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ವಿ.ಎಫ್.ಸಿ ಅಧ್ಯಕ್ಷ ರಾಮಾ ಗೌಡ , ಅತಿಥಿಗಳಾಗಿದ್ದ ಗ್ರಾ.ಪಂ ಸದಸ್ಯ ಗಣೇಶ ಹೆಗಡೆ ಅರಣ್ಯದ ಉತ್ಪನ್ನಗಳ ಕಳುವಿನ ಪ್ರಕರಣಗಳೂ ಇತ್ತೀಚಿಗೆ ಸಾಕಷ್ಟು ಕಡಿಮೆಯಾಗಿದ್ದು, ವಿ.ಎಫ್.ಸಿ ಮೂಲಕ ಇಲಾಖೆ ಮತ್ತು ಸಾರ್ವಜನಿಕರ ನಡುವೆ ಸಾಧಿಸಿರುವ ಉತ್ತಮ ಸಂಬಂಧಗಳೆ ಕಾರಣವಾಗಿದೆ ಎಂದರು.
“ಪಾಲಿಸಿದರೆ ಪಾಲು” ಯೋಜನೆಯಡಿ 5.53 ಲಕ್ಷ ರೂ. ಮೌಲ್ಯದ 35 ಊಟದ ಮೇಜು, 120 ಕುರ್ಚಿಗಳನ್ನು ಸಮುದಾಯದ ಬಳಕೆಗೆ ಹಾಗೂ 175 ಸೋಲಾರ್ ವಿದ್ಯುತ್ ಲ್ಯಾಂಪ್‌ಗಳನ್ನು ವೈಯಕ್ತಿಕವಾಗಿ ವಿತರಿಸಲಾಯಿತು.
ಗ್ರಾ.ಪಂ ಅಧ್ಯಕ್ಷೆ ದೀಪಾ ಸಿದ್ದಿ, ಸದಸ್ಯರಾದ ಇಂದಿರಾ ನಾಯ್ಕ, ತುಂಗಾ ಚಲುವಾದಿ ಮತ್ತಿತರರು ವೇದಿಕೆಯಲ್ಲಿದ್ದರು. ನಾಗೇಶ ಗೌಡ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಉಪವಲಯಾರಣ್ಯಾಧಿಕಾರಿ ಕಲ್ಲಪ್ಪ ಬರದೂರು ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿ, ನಿರ್ವಹಿಸಿದರು.

ಆತ್ಮೀಯ ಓದುಗರ ಗಮನಕ್ಕೆ
ಪ್ರತಿಧ್ವನಿ ಯಲ್ಲಾಪುರ ನಿಮ್ಮಿಂದ ವಿಶೇಷ ಲೇಖನವನ್ನು ಆಹ್ವಾನಿಸುತ್ತಿದೆ. ಪ್ರಸಕ್ತ ವಿದ್ಯಮಾನಗಳು, ಪ್ರೇಕ್ಷಣೀಯ ಸ್ಥಳಗಳ ಮಾಹಿತಿ, ಇನ್ನಿತರ ಪ್ರಮುಖ ವಿಷಯಗಳ ಕುರಿತು ನೀವು ಬರೆಯಲು ಪ್ರಾರಂಭಿಸಿ ನಿಮ್ಮ ಲೇಖನವನ್ನು ನಮ್ಮ ಪ್ರತಿಧ್ವನಿ ಯಲ್ಲಾಪುರ ವೆಬ್ ನಲ್ಲಿ ಪ್ರಕಟಿಸಲಾಗುವುದು.
>> ನಿಮ್ಮ ಲೇಖನ ಸಮಾಜಕ್ಕೆ ಉತ್ತಮ ಸಂದೇಶ ನೀಡುವಂತೆ ಮತ್ತು ಜಾಗೃತಗೊಳಿಸುವಂತಿರಬೇಕು.
>>>ಯಾವುದೆ ವ್ಯಕ್ತಿ, ಧರ್ಮ, ಜಾತಿ, ಸಂಘ ಸಂಸ್ಥೆಗಳ ಹಾಗು ರಾಜಕೀಯ ಪಕ್ಷ ಅಥವ ವ್ಯಕ್ತಿಗಳ ಭಾವನೆಗೆ ದಕ್ಕೆಯಾಗುವಂತಿರಬಾರದು.
>>>ಮೊಬೈಲ್ ನಲ್ಲೆ ಟೈಪ್ ಮಾಡಿ ಕಳಿಸಬೇಕು.
>>>ನಿಮ್ಮ ಹೆಸರು, ವಿಳಾಸ, ಮತ್ತು ನಿಮ್ಮ ಭಾವಚಿತ್ರ ಕಡ್ಡಾಯವಾಗಿ ಕಳಿಸಬೇಕು.
>>>ನಿಮ್ಮ ಲೇಖನವನ್ನು ” ಪ್ರತಿಧ್ವನಿ ಯಲ್ಲಾಪುರ ಅತಿಥಿ ಬರಹ” ದ ಅಡಿಯಲ್ಲಿ ಪ್ರಕಟಿಸಲಾಗುವುದು.
>>>ವಿ.ಸೂ<<< ನಿಮ್ಮ ಲೇಖನ ಯಾವಾಗ ಪ್ರಕಟಿಸಬೇಕು ಅಥವ ಬೇಡವೊ ಎಂಬ ನಿರ್ಧಾರ ಪ್ರತಿಧ್ವನಿ ಸಂಪಾದಕರ ಇಚ್ಚೆಯಾಗಿರುತ್ತದೆ.
ಮತ್ತೇಕೆ ತಡ ನೀವು ಬರೆಯಿರಿ
ಈ ವಾಟ್ಸಪ್ ಸಂಖ್ಯೆಗೆ ಕಳುಹಿಸಿ
9113096085, 8088255121


ತ್ವರೆ ಮಾಡಿ ಯಾರಿಗೆ ಗೊತ್ತು ನಿಮ್ಮಲ್ಲೆ ಹೆಸರಾಂತ ಕ್ರಿಕೇಟರ್ ಸಚ್ಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿ, ಕೆ.ಎಲ್ ರಾಹುಲ್ ಇರಬಹುದು ಮತ್ತೇಕೆ ತಡ ಈಗಲೆ ನೊಂದಾಯಿಸಿಕೊಳ್ಳಿ
Prathidvani Yellapura