Breaking News

ಜೇನುಗೂಡಿನ ಪೆಟ್ಟಿಗೆ ಕದ್ದ ಕಳ್ಳರು ಜೈಲು ಕಂಬಿ ಹಿಂದೆ.!!


ಯಲ್ಲಾಪುರ : ತಾಲೂಕಿನ ಹಿತ್ಲಳ್ಳಿ ಗ್ರಾಮದಲ್ಲಿ ಜೇನುಪೆಟ್ಟಿಗೆ ಕಳ್ಳತನವಾದ ಪ್ರಕರಣಕ್ಕೆ ಸಂಬAಧಿಸಿದಂತೆ ರವಿವಾರ ಯಲ್ಲಾಪುರ ಠಾಣೆಯಲ್ಲಿ ದೂರು ದಾಖಲಾಗಿದೆ.
ಹಿತ್ಲಳ್ಳಿ ಗ್ರಾಮದ ನಿವಾಸಿ ಹರಿಹರ ವೆಂಕಟ್ರಮಣ ಹೆಗಡೆ ಎಂಬುವರ ತೋಟದಲ್ಲಿದ್ದ 13,,5೦೦ ಬೆಲೆಯುಳ್ಳ ಮೂರು ಜೇನುಗೂಡು ಪೆಟ್ಟಿಗೆಗಳ ಕಳ್ಳತನವಾಗಿದ್ದು ಈ ಸಂಬಂಧ ಯಲ್ಲಾಪುರ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ತನಿಖೆ ಕೈಗೊಂಡ ಪೊಲೀಸರು ಕಾರ್ಯಾಚರಣೆ ನಡೆಸಿ ಇಬ್ಬರನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿರುತ್ತಾರೆ.
ಹಿತ್ಲಳ್ಳಿ ಪುರ್ಲೆಮನೆ ನಇವಾಸಿ ಮಹೇಶ್ ರಾಮಾ ಸಿದ್ದಿ(20), ಶಿರನಾಲಾ ಬೈಚಗೋಡು ನಿವಾಸಿ ಗಣೇಶ ನಾಗೇಂಧ್ರ ಸಿದ್ದಿ ಎಂಬುವರೇ ಬಂಧಿತರಾಗಿರುತ್ತಾರೆ.

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

“ಸೇವೆ ಎಂಬ ಯಜ್ಞದಲ್ಲಿ ಸಮಿತೆಯಂತೆ ಉರಿಯುವ” ಹಿಂದು ಮುಖಂಡ ಸೋಮೇಶ್ವರ ನಾಯ್ಕ್ ಗೆ ಒಪ್ಪುವಂತಹ ಸಾಲುಗಳು.

ಪ್ರತಿಧ್ವನಿ ಯಲ್ಲಾಪುರ : ಸೇವಾ ಭಾವದಲ್ಲಿ ಸಮಾಜಕ್ಕಾಗಿ ಶ್ರಮಿಸುವ ಮತ್ತು ಸಮಾಜದ ಒಳಿತಿಗಾಗಿ ಸದಾ ಮಿಡಿವ ಮನಸ್ಸುಗಳಲ್ಲಿ ಯಲ್ಲಾಪುರದ ಹಿಂದು …

Leave a Reply

Your email address will not be published. Required fields are marked *