

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ
ಪ್ರತಿಧ್ವನಿ,ಯಲ್ಲಾಪುರ : ದೈಹಿಕ ಮಾನಸಿಕ ಸ್ವಾಸ್ಥ್ಯ ಕಾಪಾಡಿಕೊಳ್ಳಲು, ದೈಹಿಕವಾಗಿ ಸಧೃಡವಾಗಲು ಸ್ಪರ್ಧಾತ್ಮಕ ಮನೋಭಾವನೆ ಬೆಳೆಸುವಲ್ಲಿ ಕ್ರೀಡೆಯ ಪಾತ್ರ ಮುಖ್ಯವಾಗಿದೆ ಎಂದು ಕ್ಷೇತ್ರಶಿಕ್ಷಣಾಧಿಕಾರಿ ಎನ್.ಆರ್ ಹೆಗಡೆ ಹೇಳಿದರು.

ಅವರು ತಾಲೂಕಿನ ಕಿರವತ್ತಿಯ ಕೆಪಿಎಸ್ ಕ್ರೀಡಾಂಗಣದಲ್ಲಿ ನಡೆದ ಮದನೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಪ್ರಾಥಮಿಕ ಶಾಲಾ ಮಕ್ಕಳ ಇಲಾಖಾ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು.

ಮುಖ್ಯ ಅತಿಥಿಗಳಾಗಿ ಪ್ರಭಾರೆ ಜಿಲ್ಲಾ ದೈಹಿಕ ಶಿಕ್ಷಣ ಪರಿವೀಕ್ಷಕ ಪ್ರಕಾಶ ತಾರಿಕೊಪ್ಪ ,
ಬಿ.ಆರ್.ಸಿ ಸಂಯೋಜಕ ಶ್ರೀರಾಮ ಹೆಗಡೆ, ಶಿಕ್ಷಣ ಸಂಯೋಜಕ ಪ್ರಶಾಂತ ಜಿ.ಎನ್, ಪ್ರಾ.ಶಿ. ಸಂಘದ ನಾರಾಯಣ ನಾಯ್ಕ, ಅಜೇಯ ನಾಯಕ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಈ ಕ್ರೀಡಾಕೂಟದಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಂಚನಳ್ಳಿ ಶಾಲಾ ಬಾಲಕರು ಹಾಗೂ ಬಾಲಕಿಯರು ಸತತ ೩ನೇ ಬಾರಿಗೆ ಖೋಖೋ ಸ್ಪರ್ಧೆಯಲ್ಲಿ ಪ್ರಶಸ್ತಿ ಪಡೆಯುವುದರ ಜೊತೆಗೆ ಚೆಸ್ , ಓಟ, ಎತ್ತರ ಜಿಗಿತ, ಚಕ್ರ ಎಸೆತಗಳಲ್ಲಿ ಪ್ರಶ್ತಿ ಪಡೆದು ತಾಲೂಕಾ ಮಟ್ಟಕ್ಕೆಆಯ್ಕೆಯಾಗಿರುತ್ತಾರೆ.

ಮಕ್ಕಳಲ್ಲಿ ಕ್ರೀಡಾಸ್ಪೂರ್ತಿ, ಸ್ಪರ್ಧಾತ್ಮಕ ಮನೋಭಾವನೆ, ಶಿಸ್ತಿನಿಂದ
ಕ್ರೀಡಾಂಗಣದಲ್ಲಿ ಮಕ್ಕಳು ಭಾಗವಹಿಸಲು ಪದೋನ್ನತ ಮುಖ್ಯೋಧ್ಯಾಪಕ ಹಾಗೂ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಸುಧಾಕರ ನಾಯಕ ೨೦,೦೦೦ ರೂಪಾಯಿಗಳಿಗೂ ಅಧಿಕ ಮೌಲ್ಯದ ಟ್ರಾö್ಯಕ್ ಸೂಟ್, ಕ್ನಿ ಕ್ಯಾಪ್, ಹ್ಯಾಂಟ್ ಗ್ಲೌಸ್ ನೀಡಿ ಜಿಲ್ಲಾಮಟ್ಟದ ಪ್ರಶಸ್ತಿಗಳಿಸಲು ಪ್ರೇರಣೆ ಮಾರ್ಗದರ್ಶನ ತರಬಬೇತಿ ನೀಡುತ್ತಿರುವುದು ಶ್ಲಾಘನೀಯ.

ಸಹಶಿಕ್ಷಕರಾದ ಗಣೇಶ ಮಹಾಲೆ, ಸುಮಂಗಲಾ ಹೆಗಡೆ, ಬಾಬು ಬಾಗು ಪಟಕಾರೆ ಹಾಗೂ ಎಸ್.ಡಿ.ಎಂ.ಸಿ ಸಹಕಾರದ ಬಗ್ಗೆ ಹಾಗೂ ಶಾಲಾ ಮಕ್ಕಳು ಚಾಂಪಿಯನ್ ಪ್ರಶಸ್ತಿ ಪಡೆದ ಮಕ್ಕಳ ಸಾಧನೆಗೆ ಶಿಕ್ಷಕರ ಪ್ರೋತ್ಸಾಹಕ್ಕೆ ಅಭಿನಂದಿಸಿದ್ದಾರೆ.
Prathidvani Yellapura