
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ
ಪ್ರತಿಧ್ವನಿ,ಯಲ್ಲಾಪುರ : ವಿದ್ಯಾರ್ಥಿಗಳ ವೇದನೆ ಅರ್ಥ ಮಾಡಿಕೊಂಡು ಹಗಲುರಾತ್ರಿ ಎನ್ನದೆ ಬೆಂಗಳೂರು ಕಚೇರಿ ಅಲೆದು ಮಕ್ಕಳ ಭವಿಷ್ಯ ಆತಂಕದಲ್ಲಿದ್ದಾಗ ಶತಾಯಗತಾಯ ಪ್ರಯತ್ನಿಸಿ 9 ಮತ್ತು 10 ನೆ ತರಗತಿ ಆಂಗ್ಲ ಮಾಧ್ಯಮದಲ್ಲಿ ಪ್ರಾರಂಭಿಸಲು ಅನುಮತಿ ತರುವಲ್ಲಿ ಶ್ರಮಿಸಿದ ಶ್ರೇಯ ಸಲ್ಲಬೇಕಿರುವುದು ಉರ್ದುಶಾಲೆಯ ಎಸ್.ಡಿ.ಎಂ.ಸಿ ಪ್ರಮುಖ ಹಾಗು ಕಾಂಗ್ರೆಸ್ ಪಕ್ಷದ ಅಲ್ಪಸಂಖ್ಯಾತ ವಿಭಾಗದ ತಾಲೂಕು ಅಧ್ಯಕ್ಷ ಫೈರೋಝ್ ಸೈಯದ್ ಮತ್ತು ಕಾಂಗ್ರೆಸ್ ನಗರ ಘಟಕ ಅಧ್ಯಕ್ಷ ರವಿಚಂದ್ರ ನಾಯ್ಕ್ ಅವರಿಗೆ ಆದರೆ ಅದನ್ನು ಬಿಟ್ಟು ಯಾರದ್ದೊ ಪ್ರಯತ್ನದಿಂದಾದ ಕೆಲಸಕ್ಕೆ ತಾನೆ ಕಾರಣ ಎಂದು ಸಾಮಾಜಿಕ ಜಾಲತಾಣದಲ್ಲಿ ಸ್ವಯಂ ಬಿಂಬಿಸಿಕೊಂಡಿರುವ ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಶಾಸಕರ ವೈಖರಿ ಖಂಡನೀಯ ಎಂದು ಯಲ್ಲಾಪುರ ಬ್ಲಾಕ್ ಕಾಂಗ್ರೆಸ್ ವಕ್ತಾರ ಹಿಂದುಳಿದ ವರ್ಗಗಳ ವಿಭಾಗದ ಪ್ರಮುಖ ರವಿ ನಾಯ್ಕ ಇಂಜನಿಯರ್ ಹೇಳಿದರು.
ಅವರು ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಕರೆಯಲಾದ ಸುದ್ದಿಗೋಷ್ಟಿಯಲ್ಲಿ ಹೇಳಿದರು.

ನಮ್ಮ ಕ್ಷೇತ್ರದ ಶಾಸಕರು ಅತ್ಯಂತ ಪ್ರೌಡರಿದ್ದು ತನ್ನದಲ್ಲದ ಪ್ರಯತ್ನಕ್ಕೆ ತಾನೆ ಕಾರಣ ಎಂದು ಹೇಳಿಕೊಳ್ಳುವಂತವರಲ್ಲ ಇದು ಅವರ ಆಪ್ತರು ಯಾರೊ ಹರಿಬಿಟ್ಟಿರುವ ತಪ್ಪು ಸಂದೇಶ. ಆಂಗ್ಲ ಮಾಧ್ಯಮದ ತರಗತಿಗಳು ಪ್ರಾರಂಭವಾಗಿರುವುದಕ್ಕೆ ಕೇವಲ ನನ್ನ ಮತ್ತು ಫೈರೋಝ್ ಪ್ರಯತ್ನ ಮಾತ್ರ ಕಾರಣವಾಗಿದೆ. ಪ್ರಮುಖವಾಗಿ ಈ ಪ್ರಪೋಸಲ್ ಗೆ ಪೂರಕ ಪತ್ರ ಮಾತ್ರ ಶಾಸಕರು ಕೊಟ್ಟಿದ್ದು ಅದಕ್ಕೆ ಕೃತಜ್ಞತೆ ಸಲ್ಲಿಸುತ್ತೇವೆ ಎಂದು ಯಲ್ಲಾಪುರ ಕಾಂಗ್ರೆಸ್ ನಗರ ಘಟಕ ಅಧ್ಯಕ್ಷ ರವಿಚಂದ್ರ ನಾಯ್ಕ್ ಹೇಳಿದರು.

ಕಾಂಗ್ರೆಸ್ ಪಕ್ಷ ಬಡವರ, ದಲಿತರ, ಹಿಂದುಳಿದ, ಅಲ್ಪಸಂಖ್ಯಾತರ ಪರ ಧ್ವನಿಯಾಗಿ ಕೆಲಸ ಮಾಡುತ್ತದೆ ಎಂದಿಗು ಪ್ರಚಾರ ಬಯಸಲಿಲ್ಲ ಆದರೆ ಬಿಜೆಪಿ ಪ್ರಚಾರ ಪ್ರಿಯ ಪಕ್ಷವಾಗಿದ್ದು ತನ್ನದಲ್ಲದ ಪ್ರತ್ನವನ್ನು ತನ್ನದು ಎಂದು ಹೇಳಿಕೊಂಡು ನಗೆಪಾಟಲಿಗೀಡಾಗಿದೆ. ಮುಂದೆ ಇಂತಹ ತಪ್ಪುಗಳಾಗದಂತೆ ಎಚ್ಚರಿಕೆ ವಹಿಸಿ. ಮುಂದೆ ನಮ್ಮ ಸರ್ಕಾರದ ಅಡಿಯಲ್ಲಿ ನಡೆಯುವ ಜನಪರ ಅಭಿವೃದ್ಧಿ ಕಾರ್ಯಗಳನ್ನು ನಾವೆ ಪ್ರಚಾರ ಮಾಡಲು ನಿರ್ಧರಿಸಲಾಗಿದೆ. ಮಕ್ಕಳ ವಿದ್ಯಾಬ್ಯಾಸಕ್ಕೆ ಆತಂಕ ತೊಲಗಿಸಿ ಆಂಗ್ಲ ಮಾದ್ಯಮ ವಿಭಾಗವನ್ನು ತರುವಲ್ಲಿ ಸಹಕರಿಸಿದ ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಮಂತ್ರಿ ಮಂಕಾಳ ವೈದ್ಯ, ಶಿರಸಿ ಶಾಸಕ ಬೀಮಣ್ಣ ನಾಯ್ಕ ಹಾಗು ವಿಶೇಷವಾಗಿ ಯಲ್ಲಾಪುರ ವಿಧಾನಸಭಾ ಕ್ಷೇತ್ರದ ನಾಯಕ ವಿ.ಎಸ್.ಪಾಟೀಲ್ ಮತ್ತು ಶಿಕ್ಷಣ ಸಚಿವ ಮಧು ಬಂಗಾರಪ್ಪ, ಡಿಡಿಪಿಐ ಹಾಗು ಬಿಇಒ ಮತ್ತು ಪರೋಕ್ಷವಾಗಿ ಸಹಕರಿಸಿದ ಸರ್ವರಿಗು ಧನ್ಯವಾದಗಳು ತಿಳಿಸುವೆ ಎಂದು ಕಾಂಗ್ರೆಸ್ ಅಲ್ಪಸಂಖ್ಯಾತ ವಿಭಾಗದ ತಾಲೂಕು ಅಧ್ಯಕ್ಷ ಉರ್ದುಶಾಲೆ ಎಸ್ ಡಿ ಎಂ ಸಿ ಪ್ರಮುಖ ಫೈರೋಝ್ ಸೈಯದ್ ಹೇಳಿದರು.
ಈ ಸಂದರ್ಬದಲ್ಲಿ ಕಾಂಗ್ರೆಸ್ ಪಕ್ಷದ ಜಿಲ್ಲಾ ಅಲ್ಪಸಂಖ್ಯಾತ ವಿಭಾಗದ ಜಿಲ್ಲಾ ಪ್ರಮುಖ ಅನ್ವರ್ ಶೇಖ್ ಉಪಸ್ಥಿತರಿದ್ದರು.
Prathidvani Yellapura