Breaking News

ಅಪ್ರತಿಮ ರಾಷ್ಟ್ರಭಕ್ತ “ಸತೀಶ್ ಕಟ್ಟಿಗೆ” ಸ್ಮರಣಾರ್ಥ ರಕ್ತದಾನ ಶಿಭಿರ

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ

ಪ್ರತಿಧ್ವನಿ ಯಲ್ಲಾಪುರ
” ದೇಹವಳಿದರೂ ರಾಷ್ಟ್ರ ಭಕ್ತಿಯ ಜ್ಯೋತಿ ಜ್ವಲಿಸುತ್ತಿರೆ ಆತ್ಮದೊಳು.
ಭರತ ಮಾತೆಯ ಸೇವೆಗೈದ ಆತ್ಮಕೆಲ್ಲಿಯ ಸಾವು ?? ಬೆಳಕನೀವುದು ತಮ ತುಂಬಿದ ಮನಕೆ”
ಇದು ದಿ, ಸತೀಶ್ ಕಟ್ಟಿಗೆಯವರಿಗೆ ಸಲ್ಲುತ್ತದೆ


ಶುಕ್ರವಾರ ಪಟ್ಟಣದ ಅಡಿಕೆ ಭವನದಲ್ಲಿ ರಾಷ್ಟ್ರ ಭಕ್ತನ ನೆನಪಿನಾರ್ಥ ಸಾರ್ಥಕ ಸೇವಾ ಕಾರ್ಯಕ್ಕಾಗಿ ದಿ,ಸತೀಶ್ ಕಟ್ಟಿಗೆ ಅವರು ತೊಡಗಿಕೊಂಡು ಬಂದ ರಾಷ್ಟ್ರೋತ್ಥಾನ ರಕ್ತನಿಧಿ ಕೇಂದ್ರದ ವತಿಯಿಂದ ಆರ್.ಎಸ್.ಎಸ್ ಅಡಿಯಲ್ಲಿ ಬೃಹತ್ ರಕ್ತದಾನ ಶಿಭಿರ ನಡೆಯಿತು.


ದಿ,ಸತೀಶ್ ಕಟ್ಟಿಗೆ ಅವರು ರಾಷ್ಟ್ರಭಕ್ತರಾಗಿ ಸಂಘಟನೆಯಲ್ಲಿ ನಿರಂತರ ಸೇವೆ ಸಲ್ಲಿಸುವುದು ಮಾತ್ರವಲ್ಲದೆ ಸಮಾಜಮುಖಿ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ರಾಷ್ಟ್ರ ಕಾರ್ಯಕ್ಕಾಗಿ ಎನ್ನ ಜೀವ ಮುಡಿಪಿದು ಎಂಬ ಭಾವದಲ್ಲಿ ರಾಷ್ಟ್ರ ಭಕ್ತಿಯೆಡೆಗೆ ಯುವಕರನ್ನು ಸೆಳೆಯುತ್ತಿದ್ದರು.

ಸುದ್ದಿಯ ವಿಡಿಯೋ ನೋಡಬೇಕ ಹಾಗಿದ್ದರೆ ಇಲ್ಲಿ ಕ್ಲಿಕ್ ಮಾಡಿ

ಅಂತಹ ಮಹಾನ್ ಚೇತನದ ನೆನಪು ಅಮರ ಮತ್ತು ಆ ನೆನಪು ಸಾರ್ಥಕ ಕಾಯಕ್ಕೆ ಸಾಕ್ಷಿಯಾಗಿಸುವಲ್ಲಿ ಸಂಘದ ಸರ್ವರ ಪ್ರಯತ್ನ ಯಶಸ್ವಿಯಾಯಿತು.


ಶಿಭಿರದಲ್ಲಿ 176 ಜನ ರಕ್ತದಾನ ಮಾಡಿ ಸತೀಶ್ ಕಟ್ಟಿಗೆ ನೆನಪನ್ನು ಮತ್ತಷ್ಟು ಪವಿತ್ರಗೊಳಿಸಿದರು.


ದಿ,ಸತೀಶ್ ಕಟ್ಟಿಗೆ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಶಿಭಿರ ಆರಂಬಿಸಲಾಯಿತು.
ಹಿರಿಯರಾದ ವಿ.ಎನ್.ಗೇರಗದ್ದೆ, ಸುಬ್ರಹ್ಮಣ್ಯ ಹೆಗಡೆ ನುಡಿನಮನ ಸಲ್ಲಿಸಿದರು. ಹಿಂದು ಸಂಘಟನೆಗಳ ಪ್ರಮುಖ ಗೋಪಾಲಕೃಷ್ಣ ಎನ್ ಗಾಂವ್ಕರ್ , ಸುರೇಶ್ ಶಾನಬಾಗ್, ರಾಷ್ಟ್ರೋತ್ಥಾನ ರಕ್ತನಿಧಿ ಕೇಂದ್ರದ ಡಾ|| ಚೇತನಾ, ಬಸವರಾಜ ರೆಡ್ಡಿ, ಸಿದ್ದು ಅಂಗಡಿ ಇನ್ನಿತರ ಪ್ರಮುಖರು ಉಪಸ್ಥಿತರಿದ್ದರು.


ಸಂಘದ ಗಣಪತಿ ಹಿರೇಸರ ಪ್ರಾಸ್ತಾವಿಕ ನುಡಿದರು.ರಾಮಕೃಷ್ಣ ಕವಡಿಕೆರೆ ನಿರೂಪಿಸಿದರು. ಅನಂತ ಅಬ್ಬಿ ವಂದಿಸಿದರು.

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ವೈ.ಟಿ.ಎಸ್‌.ಎಸ್ ನಿಂದ ರಾಧಾ ಕೃಷ್ಣ ವೇಷ ಸ್ಪರ್ಧೆ.

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ ವರದಿ, ಯಲ್ಲಾಪುರ : ಸ್ಥಳೀಯ ವೈ.ಟಿ.ಎಸ್.ಎಸ್ …

Leave a Reply

Your email address will not be published. Required fields are marked *