
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ
ಪ್ರತಿಧ್ವನಿ,ಯಲ್ಲಾಪುರ : ತಾಲೂಕಿನಲ್ಲ್ಲಿ ಈ ವರ್ಷ ಹೇಳಿಕೊಳ್ಳುವಂತಹ ಮಳೆ ಬೀಳದ ಕಾರಣ ಅಂತಹ ಸಮಸ್ಯೆಗಳೇನು ಸೃಷ್ಟಿಯಾಗಿಲ್ಲ. ಆದರು ಪಟ್ಟಣ ಪಂಚಾಯತ ಎಲ್ಲೆಲ್ಲಿ ಸಮಸ್ಯೆ ಉದ್ಬವವಾಗಬಹುದೋ ಅಂತಹ ಸ್ಥಳಗಳಲ್ಲಿ ದುರಸ್ತಿ ಕಾರ್ಯ ಕೈಗೊಂಡು ಮುನ್ನೆಚ್ಚರಿಕೆ ಕೆಲಸಗಳನ್ನು ಮಾಡುತ್ತ್ತಿದೆ.

ಪಟ್ಟಣದ ಉದ್ಯಮ ನಗರದಲ್ಲಿ ಗುಡ್ಡಪ್ರದೇಶದಲ್ಲಿ ಮನೆಗಳ ಬಳಿ ಗಟಾರವಿಲ್ಲದೆ ನೀರು ಮನೆಗಳಿಗೆ ನುಗ್ಗುವ ಭೀತಿಯ ಹಿನ್ನೆಲೆಯಲ್ಲಿ ಪಟ್ಟಣ ಪಂಚಾಯತ ಸಿಬ್ಬಂದಿಗಳು ಜೆಸಿಬಿ ಬಳಸಿ ತಾತ್ಕಲಿಕ ವ್ಯವಸ್ಥೆ ಮಾಡಿ ನೀರು ಮನೆಗಳಿಗೆ ನುಗ್ಗದಂತೆ ಕ್ರಮ ಕೈಗೊಂಡಿದ್ದಾರೆ.

ಮಂಜುನಾಥ ನಗರದಲ್ಲಿ ನೀರು ಸರಾಗವಾಗಿ ಹರಿಯುವಂತೆ ಗಟಾರ ಸ್ವಚ್ಛಗೊಳಿಸಿದ್ದಾರೆ. ಭಾರೀ ಪ್ರಮಾಣದಲ್ಲಿ ಮಳೆ ಬೀಳಬೇಕಿದ್ದ ಸಮಯದಲ್ಲಿ ಮಳೆಯೇ ಇಲ್ಲವಾಗಿದ್ದು ಸಣ್ಣಪುಟ್ಟ ಸಮಸ್ಯೆಗಳನ್ನು ಬಗೆಹರಿಸಲು ಅನುಕೂಲವಾಗಿದೆ.
ಪಟ್ಟಣ ವ್ಯಾಪ್ತಿಯಲ್ಲಿ ಮಳೆ ನೀರು ಮನೆಗೆ ನುಗ್ಗುವುದು, ಗಟಾರ ಕಟ್ಟಿಕೊಂಡಿರುವುದು ಇನ್ನಿತರೆ ಸಮಸ್ಯೆಗಳಿದ್ದಲ್ಲಿ ತಕ್ಷಣ ಪಟ್ಟಣ ಪಂಚಾಯತದ ಗಮನಕ್ಕೆ ತಂದರೆ ಸಾಧ್ಯವಾದಷ್ಟು ಶೀಘ್ರದಲ್ಲಿ ಸಮಸ್ಯೆ ಬಗೆಹರಿಸಲು ಅನುಕೂಲವಾಗಲಿದೆ. ಆದರೆ ಭಾರೀ ಪ್ರಮಾಣದಲ್ಲಿ ಮಳೆ ಬಂದು ಇಂತಹ ಸಮಸ್ಯೆಗಳು ಉದ್ಭವವಾದಾಗ ತಿಳಿಸಿದರೆ ಸುಲಲಿತ ಕಾಮಗಾರಿ ಸಾಧ್ಯವಾಗದು. – ಗುರು ಗಡಗಿಪ.ಪಂ ಆರೋಗ್ಯ ನಿರೀಕ್ಷಕ
Prathidvani Yellapura