
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ
ಪ್ರತಿಧ್ವನಿ,ಯಲ್ಲಾಪುರ : ತಾಲೂಕಿನ ಸೊಸೈಟಿ ಚುನಾವಣೆಗಳಲ್ಲಿ ತೀವ್ರ ಆಸಕ್ತಿ ಕೆರಳಿಸಿದ ಆನಗೋಡು ಸೊಸೈಟಿ ಚುನಾವಣೆಯ ಫಲಿತಾಂಶ ರವಿವಾರ ಪ್ರಕಟವಾಗಿದ್ದು ನಾರಾಯಣ ಭಟ್ಟ ಅಗ್ಗಾಶಿಕುಂಬ್ರಿ ತಂಡ ಜಯಭೇರಿ ಬಾರಿಸಿದೆ.
ಚುನಾವಣೆ ನಡೆದಾಗಿನಿಂದ ನ್ಯಾಯಾಲಯದ ನಿರ್ದೇಶನದಂತೆ ಮತ ಎಣಿಕೆ ರವಿವಾರ ನಡೆದಿದ್ದು ಉಪಖಜಾನೆಯಲ್ಲಿದ್ದ ಮತಪೆಟ್ಟಿಗೆ ಕಾದು ಕುಳಿತ ವಿಚಾರಕ್ಕೆ ತೆರೆ ಬಿದ್ದಿದೆ.

ಸಾಮಾನ್ಯ ಕ್ಷೇತ್ರದಲ್ಲಿ ನಾರಾಯಣ ಕಾಮೇಶ್ವರ ಭಟ್ಟ ಅಗ್ಗಾಶಿಕುಂಬ್ರಿ, ಗಣಪತಿ ರಾಮಕೃಷ್ಣ ಗಾಂವ್ಕರ ಮಾನಿಗದ್ದೆ, ಗೋಪಾಲಕೃಷ್ಣ ನರಸಿಂಹ ಗಾಂವ್ಕರ ಜಮಗುಳಿ, ಬಾಲಚಂದ್ರ ಗಜಾನನ ಗುಮ್ಮಾನಿ ಗುಮ್ಮಾನಿಮನೆ, ರಾಮಕೃಷ್ಣ ರಾಮಚಂದ್ರ ಗಾಂವ್ಕರ ಅಳ್ವೆಗದ್ದೆ, ಅ-ವರ್ಗದಿಂದ ಗಣಪತಿ ಕೃಷ್ಣಾ ಗೌಡ ಗೇರಾಳ, ಬ-ವರ್ಗದಿಂದ ಸುಬ್ರಾಯ ಚೂಡಾ ಕೈಟಕರ ಕೊಡಸೆ, ಪರಿಶಿಷ್ಟ ಪಂಗಡದಿAದ ಸಣ್ಯಾ ಬೋಂಡು ಸಿದ್ದಿ ಬಳಗಾರ, ಮಹಿಳಾ ವಿಭಾಗದಲ್ಲಿ ರಾಜೇಶ್ವರಿ ರಾಜಶೇಖರ ಧೂಳಿ ಘಟಿಗೇಮನೆ, ಸುಶೀಲಾ ರಾಮಕೃಷ್ಣ ಗಾಂವ್ಕರ ಲಿಂಗದಬೈಲು, ಸಾಲಗಾರರಲ್ಲದ ಕ್ಷೇತ್ರದಿಂದ ದತ್ತಾತ್ರೇಯ ಶಿವರಾಮ ಬೋಳುಗುಡ್ಡೆ ಗೆಲುವು ಸಾಧಿಸಿದವರಾಗಿದ್ದಾರೆ.
Prathidvani Yellapura