


ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ
ಪ್ರತಿಧ್ವನಿ,ಯಲ್ಲಾಪುರ : ಒಂದು ಕಾಲದಲ್ಲಿ ಯಲ್ಲಾಪುರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಳೆ ಬೀಳುವ ಪ್ರಮಾಣ ಕಂಡರೆ ಭಯ ಪಡುವ ವಾತಾವರಣವಿತ್ತು. ಬೇರೆಕಡೆ ಕರ್ತವ್ಯ ನಿರ್ವಹಿಸುವ ಸರ್ಕಾರಿ ಅಧಿಕಾರಿಗಳು ಸಹ ತಾಲೂಕಿನಲ್ಲಿ ಸುರಿಯುವ ಮಳೆಯ ಪ್ರಮಾಣ ಕಂಡು ನಮಗೆ ಅಲ್ಲಿರಲು ಸಾದ್ಯವಿಲ್ಲ ಎನ್ನುವ ಮಾತುಗಳು ಕೇಳಿ ಬರುತ್ತಿತ್ತು ಆದರೆ ಈ ವರ್ಷ ಮುಂಗಾರು ತಡವಾಗಿ ಆರಂಭವಾಗಿದೆ ಪ್ರತಿ ವರ್ಷದಂತೆ ಈ ವೇಳೆಗಾಗಲೆ ಹಳ್ಳಕೊಳ್ಳ, ನದಿತೊರೆಗಗಳೆಲ್ಲ ತುಂಬಿ ಕಳೆಗಟ್ಟಬೇಕಿತ್ತು ಆದರೆ ವರುಣನ ಕಣ್ಣಾಮುಚ್ಚಾಲೆಗೆ ಮಳೆಗಾಲದಲ್ಲೆ ಬೇಡ್ತಿ ಒಡಲು ಬಾಡಿದಂತಾಗಿ ಜೀವ ಕಳೆ ಕಳೆದುಕೊಂಡಿದೆ ಮುಂದೆ ಗತಿ ಏನು ಎಂಬಂತಾಗಿದೆ.

ಹುಬ್ಬಳ್ಳಿ-ದಾರವಾಡ-ಕಲಘಟಗಿ ವ್ಯಾಪ್ತಿಯಲ್ಲಿ ಹೆಚ್ಚಿನ ಮಳೆಯಾದರೆ ತಾಲೂಕಿನಲ್ಲಿ ಹರಿಯುವ ಬೇಡ್ತಿ ನದಿ ಮೈದುಂಬಿ ಹರಿಯುವುದು. ಆದರೆ ಆ ಭಾಗದಲ್ಲಿ ಮಳೆ ಪ್ರಮಾಣ ಕಡಿಮೆಯಾಗಿದ್ದೆ ಬೇಡ್ತಿ ಖಾಲಿಖಾಲಿ ಇರಲು ಕಾರಣವಾಗಿದೆ.
ಕಳೆದೆರಡು ವರ್ಷಗಳ ಮಳೆಯಲ್ಲಿ ಇಷ್ಟು ಹೊತ್ತಿಗೆ ಯಲ್ಲಾಪುರ ಶಿರಸಿ ರಸ್ತೆಯಲ್ಲಿನ ಸಂಪರ್ಕಸೇತುವೆ ಬುಡದಲ್ಲಿ ಲೋಡ್ ಗಟ್ಟಲೆ ಮರದ ದಿಮ್ಮಿ ತೇಲಿ ಬಂದುರಾಶಿಯಾಗಿತ್ತು ಈ ಬಾರಿ ಸೇತುವೆ ಕಂಬಗಳಿಗೆ ಮುಟ್ಟುವಷ್ಟು ಸರಿಯಾಗಿ ನೀರೆ ಬಂದಿಲ್ಲ.

ಇದು ಕೇವಲ ಬೇಡ್ತಿ ಕಥೆಯಲ್ಲ ತಾಲೂಕಿನ ಹಳ್ಳ ಕೊಳ್ಳಗಳ ಕಥೆಯು ಇದೇ ಆಗಿದೆ. ಇದು ಹೀಗೆ ಮುಂದುವರೆದರೆ ಅಂತರ್ಜಲ, ಮಟ್ಟ ಏರಿಕೆಯಾಗದೆ ಮುಂದೆ ನೀರಿಗೆ ತತ್ವಾರವಾಗಬಹುದಾಗಿಧೆ. ಜಲಪಾತಗಳ ತೊಟ್ಟಿಲು ಎನಿಸಿಕೊಂಡ ಯಲ್ಲಾಪುರ ತಾಲೂಕಿನ ಜಲಪಾತಗಳು ನೀರಿಲ್ಲದೆ ತನ್ನ ಎಂದಿನ ಸೌಂದರ್ಯ ಕಳೆದುಕೊಂಡಿದೆ. ಪ್ರವಾಸಿಗರ ಸಂಖ್ಯೆಯು ಕಡಿಮೆಯಾಗಿದೆ.
ವಾಡಿಕೆಯಂತೆ ಇದುವರೆಗೆ 736.5 ಮಿ.ಮೀ ಮಳೆಯಾಗಬೇಕಿತ್ತು ಆದರೆ 253.8 ಮಿ.ಮೀ ಮಳೆಯಾಗಿದೆ ಅಂದರೆ ಸುಮಾರು 66% ಮಳೆಯ ಪ್ರಮಾಣ ಕಡಿಮೆಯಾಗಿದೆ.ಇದು ಆತಂಕಕಾರಿಯಾಗಿದೆ.

Prathidvani Yellapura