


ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ
ಪ್ರತಿಧ್ವನಿ,ಯಲ್ಲಾಪುರ: ಅಣ್ಣ ಬಸವಣ್ಣನವರ ನಿಕಟವರ್ತಿಯಾಗಿ ಅವರ ಕೊನೆಯವರೆಗೆ ಜೊತೆಯಲ್ಲಿದ್ದು ಸೇವೆ ಸಲ್ಲಿಸಿದವರಲ್ಲಿ ಹಡಪದ ಅಪ್ಪಣ್ಣ ಕೂಡ ಒಬ್ಬರು. ಆಗಿನ ಕಾಲಘಟ್ಟದಲ್ಲಿ ಸಮಾಜದಲ್ಲಿನ ತಾರತನ್ಯದ ವಿರುದ್ದ ಸಾಮಾಜಿಕ ಕ್ರಾಂತಿಯ ಕಹಳೆ ಮೊಳಗುಸಿ ಪರಿವರ್ತನೆಗೆ ಪ್ರಯತ್ನಸಿದವರಲ್ಲಿ ಒಬ್ಬರು. ಅನೇಕ ಕ್ರಾಂತಿಕಾರಕ ವಚನ ರಚಿಸಿ ಸಮಜದಲ್ಲಿನ ದೋಷಗಳನ್ನು ಸೂಕ್ಷಮವಾಗಿ ಹೊರಗಿಡುವುದರಮೂಲಕ ತಮ್ಮ ಜೀವನದ ಸಾರ್ಥಕತೆಗೆವಸಾಕ್ಷಿಯಾದ ” ಹಡಪದ ಅಪ್ಪಣ್ಷ ” ನವರ ಆದರ್ಶಗಳು ಪ್ರಸ್ತುತ ಸಮಾಜಕ್ಕೆ ಅನಿರ್ವಾವಿದೆ ಎಂದು ಹಡಪದ ಸಮಾಜದ ಪ್ರಮುಖ ನಾಗರಾಜ ಯಾಮ್ಕೆ ಹೇಳಿದರು


ಅವರು ಪಟ್ಟಣದ ತಹಶಿಲ್ದಾರ ಕಚೇರಿಯಲ್ಲಿ ತಾಲೂಕು ಆಡಳಿತದಿಂದ ಆಯೋಜಿಸಿದ್ದ ಶಿವಶರಣ ” ಹಡಪದ ಅಪ್ಪಣ್ಣ” ಜಯಂತಿ ಕಾರ್ಯಕ್ರಮದಲ್ಲಿ ಶರಣರಿಗೆ ಪೂಜೆ ಸಲ್ಲಿಸಿ ಸಭೆ ಉದ್ದೇಶಿಸಿ ಮಾತನಾಡಿದರು.

ವಚನ ರಚನಕಾರರೆಲ್ಲ ಶ್ರಮ ಸಂಸ್ಕೃತಿ ಆಧಾರದಲ್ಲೆ ತಮ್ಮ ರಚನೆಗಳನ್ನು ದಾಖಲಿಸುತ್ತ ಸಾಗಿದ್ದಾರೆ. ಮನುಷ್ಯ ತನ್ನೆಲ್ಲ ಉತ್ತಮ ಸಂಸ್ಕಾಸರಗಳೆಲ್ಲವನ್ನು ರೂಡಿಸಿಕೊಳ್ಳಲು ಇಂತಹ ವಚನಗಳ ಅಧ್ಯನ ಮತ್ತು ಅಳವಡಿಸಿಕೊಳ್ಳುವುದು ಒಳಿತಾಗಲಿದೆ. ಹಡಪದ ಅಪ್ಪಣ್ಣ ನವರ ವಚನಗಳಲ್ಲು ಶ್ರಮದ ಬಗ್ಗೆ ವಿಸ್ತಾರವಾದ ವಿಚಾರಧಾರೆ ಸಾರುತ್ತ ಬಂದಿದ್ದಾರೆ. ಜಯಂತಿಗಳ ಆಚರಣೆಗಳೆಲ್ಲ ಕೇವಲ ಸರ್ಕಾರದ ತೃಪ್ತಿಗಲ್ಲದೆ ಆಯಾ ಸಮಾಜದ ಸಮದನಕ್ಲಾಗಿ ಅಲ್ಲದೆ ಜಯಂತಿ ಮಾಡುವ ಮಹಾನ್ ವ್ಯಕ್ತಿತ್ವಗಳ ಆದರ್ಶಗಳನ್ನು ಕನಿಷ್ಟ ಅಳವಡಿಸಿಕೊಳ್ಳುವುದಕ್ಕಸಗಿ ಆಗಿದೆ ಎಂದು ಪತ್ರಕರ್ತ ಕೇಬಲ್ ನಾಗೇಶ್ ಹೇಳಿದರು.
ಗ್ರೇಡ್ 2 ತಹಶಿಲ್ದಾರ ಸಿ.ಜಿ.ನಾಯ್ಕ್ ನೇತೃತ್ವದಲ್ಲಿ ಕಂದಾಯ ಇಲಾಖೆಯ ಸಿಬ್ಬಂದಿಗಳು, ಸಮಾಜದ ಭಾಂದವರು ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.
Prathidvani Yellapura