

ಪ್ರತಿಧ್ವನಿ,ಯಲ್ಲಾಪುರ – ತಾಲೂಕಿನ ನಂದೊಳ್ಳಿ ಸ.ಹಿ.ಪ್ರಾ ಶಾಲೆಯ ಆವಾರದಲ್ಲಿ ರಾಮಲಿಂಗೇಶ್ವರ ನಾಟಕ (ನಾಟ್ಯ) ಕಲಾ ಬಳಗದ ಕಲಾವಿದರಿಂದ ” ಕುಡುಕ ಕಟ್ಟಿದ ತಾಳಿ ಅರ್ಥಾತ್ ಸಾಕು ತಂಗಿಯ ಸಂಕಟ “ ನಾಟಕ ಪ್ರದರ್ಶನ ಕಂಡಿತು.

ಜ್ಯೋತಿಷಿ ಗೋಪಾಲಕೃಷ್ಣ ಭಟ್ಟ ಹಂಡ್ರಮನೆ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಗ್ರಾ.ಪಂ ಅಧ್ಯಕ್ಷ ನರಸಿಂಹ ಕೋಣೆಮನೆ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ವೈದಿಕ ನಾರಾಯಣ ಭಟ್ಟ ಮೊಟ್ಟೆಗದ್ದೆ, ನಾಟಕ ಕಲಾವಿದ ನರಸಿಂಹ ಭಾಗ್ವತ ಗುಂಡ್ಕಲ್, ನಿವೃತ್ತ ಶಿಕ್ಷಕ ಕೆ.ಜಿ.ನಾಯಕ ಹಾಗೂ ಕೊನೆ ಕೊಯ್ಲು ಮಾಡುವ ಕಾರ್ಮಿಕ ಗಣಪಾ ಸಿದ್ದಿ ಅವರನ್ನು ಸನ್ಮಾನಿಸಲಾಯಿತು.

ಗ್ರಾ.ಪಂ ಉಪಾಧ್ಯಕ್ಷೆ ಮೀನಾಕ್ಷಿ ಭಟ್ಟ, ಸದಸ್ಯರಾದ ಟಿ.ಆರ್.ಹೆಗಡೆ, ನಾಗರತ್ನಾ ನಾಯ್ಕ, ಕಮಲಾ ಸಿದ್ದಿ, ಎಪಿಎಂಸಿ ಮಾಜಿ ಅಧ್ಯಕ್ಷ ಎಲ್.ಪಿ.ಭಟ್ಟ, ಟಿಎಂಎಸ್ ನಿರ್ದೇಶಕ ವೆಂಕಟರಮಣ ಭಟ್ಟ ಕಿರಕುಂಭತ್ತಿ, ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷ ಆರ್.ಎಸ್.ಭಟ್ಟ, ಗ್ರಾ.ಪಂ ಮಾಜಿ ಉಪಾಧ್ಯಕ್ಷ ಎಂ.ಎನ್.ಭಟ್ಟ, ಪ್ರಾಥಮಿಕ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ವಿನಾಯಕ ಭಟ್ಟ, ಪ್ರೌಢಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಬಾಲಚಂದ್ರ ಭಟ್ಟ, ನಂದೊಳ್ಳಿ ಸಹಕಾರಿ ಸಂಘದ ಅಧ್ಯಕ್ಷ ಟಿ.ವಿ.ಭಾಗ್ವತ, ಕಲಾ ಬಳಗದ ಅಧ್ಯಕ್ಷ ನಾಗರಾಜ ಕವಡಿಕೆರೆ, ಕಾರ್ಯದರ್ಶಿ ಶಿವಾನಂದ ನಾಯ್ಕ ಇತರರಿದ್ದರು.

ಕಲಾ ಬಳಗದ ಕಲಾವಿದರಿಂದ ” ಸಾಕು ತಂಗಿಯ ಸಂಕಟ” ನಾಟಕ ಪ್ರದರ್ಶನಗೊಂಡಿತು. ದತ್ತಾತ್ರೇಯ ಹೆಗಡೆ ಹೆಗ್ಗುಂಬಳಿ, ಮಂಜುನಾಥ ಸೂರಾ ನಾಯ್ಕ, ನರಸಿಂಹ ಭಟ್ಟ ಮೇಲಿನಕುಂಕಿ, ಸುದರ್ಶನ ಭಾಗ್ವತ, ಸುಬ್ಬಣ್ಣ ಕೋಡ್ನಗುಡ್ಡೆ, ಶ್ರೀಧರ ಅಣಲಗಾರ, ಸುಬ್ಬಣ್ಣ ಕಂಚಗಲ್, ಶಿವಾನಂದ ನಾಯ್ಕ, ಸುದರ್ಶನ ದೇವಿತಗ್ಗು, ಮಾದೇವ ನಾಯ್ಕ, ಗಜಾನನ ಹೆಗಡೆ ಬೆಳಖಂಡ, ತಿಮ್ಮಣ್ಣ ಭಟ್ಟ ಸೂಳಗಾರ, ಶಿವ ಸಿದ್ದಿ ವಿವಿಧ ಪಾತ್ರಗಳನ್ನು ನಿರ್ವಹಿಸಿದರು.

Prathidvani Yellapura