Breaking News

ನಿತ್ಯ ಬಳಕೆ ವಸ್ತುಗಳ ದರ ಗಗನಕ್ಕೆ – ಬರಲಿರುವ ಹಬ್ಬಗಳ ಆಚರಣೆ ಕಷ್ಟವೋ ಕಷ್ಟ…

ಪ್ರತಿಧ್ವನಿ ಯಲ್ಲಾಪುರ : ಹಬ್ಬ ಹರಿದಿನಗಳು ಹತ್ತಿರವಾದಂತೆಲ್ಲಾ ದಿನಸಿ, ತರಕಾರಿ, ಈರುಳ್ಳಿ, ಸಕ್ಕರೆ, ಹೂವು ಹಾಗೂ ಹಬ್ಬದ ಅಗತ್ಯ ವಸ್ತುಗಳ ಬೆಲೆಗಳು ಗಗನಕ್ಕೇರಿ ಜನಸಾಮಾನ್ಯರಿಗೆ ನುಂಗಲಾರದ ತುತ್ತಾಗಿದೆ.

ಈರುಳ್ಳಿ ದರ ಏರಿಕೆ: ಮಾರುಕಟ್ಟೆಯಲ್ಲಿ ಈರುಳ್ಳಿ ಪೂರೈಕೆ ಕಡಿಮೆಯಾಗಿದ್ದು, ಕೆ.ಜಿಗೆ ₹60ರ ಗಡಿ ದಾಟಿದೆ. ಮುಂಬರುವ ದಿನಗಳಲ್ಲಿ ಇದು ಮತ್ತಷ್ಟು ಹೆಚ್ಚಾಗುವ ಆತಂಕವಿದೆ.ಕಳೆದ ವರ್ಷಕ್ಕಿಂತ ಶೇಕಡ 45ರಷ್ಟು ಹೆಚ್ಚಳಗೊಂಡಿದೆ ಎನ್ನಲಾಗಿದೆ. ಮಾಹಿತಿಯ ಪ್ರಕಾರ ಬೆಂಗಳೂರಿನಲ್ಲಿ ಒಂದು ಕೆಜಿ ಈರುಳ್ಳಿಯು 45 ರಿಂದ 52 ರೂಪಾಯಿಗಳಿಗೆ ಮಾರಾಟವಾಗುತ್ತಿದ್ದರೆ, ದೆಹಲಿಯಲ್ಲಿ ಇದರ ಬೆಲೆ 35 ರಿಂದ 65ರೂಪಾಯಿಗೆ, ಚೆನ್ನೈನಲ್ಲಿ 33 ರೂಪಾಯಿಗಳಿಂದ 58 ರೂಪಾಯಿಗೆ ತಲುಪಿದೆ. ಮಹಾರಾಷ್ಟ್ರದಲ್ಲಿ ಖಾರಿಫ್ ಬೆಳೆ ಉತ್ಪಾದನೆಯಲ್ಲಿನ ಕುಸಿತ ಮತ್ತು ಹಬ್ಬದ ಸಮಯವಾದ್ದರಿಂದ ಬೇಡಿಕೆ ಹೆಚ್ಚಳಗೊಂಡಿರುವುದೇ ಬೆಲೆ ಅಧಿಕಗೊಳ್ಳಲು ಪ್ರಮುಖ ಕಾರಣವಾಗಿದೆ ಎನ್ನಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು  ಗ್ರಾಹಕರ ಹಿತಾಸಕ್ತಿಯನ್ನು ಕಾಪಾಡಲು ಮಹತ್ವದಾಯಕ ನಿರ್ಣಯವನ್ನು ಕೈಗೊಂಡಿದ್ದು, ತನ್ನ ಬಳಿ ಇರುವ ಬಫರ್ ಶೇಖರಣೆಯಿಂದ  ಈರುಳ್ಳಿಗಳನ್ನು ಪ್ರಮುಖ ನಗರಗಳಿಗೆ ಸಾಗಿಸಲು ‘ಕಾಂಡಾ ಎಕ್ಸ್ ಪ್ರೆಸ್ ‘ ರೈಲು ಸೇವೆಯನ್ನು ಸೋಮವಾರದಿಂದ ಆರಂಭಿಸಿದೆ ಎನ್ನುವ ಮಾಹಿತಿ ಮೂಲಗಳಿಂದ ಲಭಿಸಿದೆ.

ಸಕ್ಕರೆ ಮತ್ತು ಸಿಹಿತಿಂಡಿಗಳು: ಹಬ್ಬದ ಸೀಸನ್‌ನಲ್ಲಿ ಸಕ್ಕರೆಗೆ ಬೇಡಿಕೆ ಹೆಚ್ಚಾಗಿದ್ದು, ಬೆಲೆ ಏರಿಕೆಯಾಗಿದೆ. ಇದರಿಂದ ಸಕ್ಕರೆಯನ್ನೇ ಅವಲಂಬಿಸಿರುವ ಸಿಹಿತಿಂಡಿಗಳು ಹಾಗೂ ಇತರ ಉತ್ಪನ್ನಗಳ ಬೆಲೆಯೂ ದುಬಾರಿಯಾಗಲಿದೆ.

ಹೂವು ಮತ್ತು ಹಣ್ಣುಗಳು: ಹಬ್ಬಗಳ ಸಂದರ್ಭದಲ್ಲಿ ಹೂವು ಮತ್ತು ಹಣ್ಣುಗಳ ಬೆಲೆ ದಿಢೀರ್ ಏರಿಕೆಯಾಗಿದ್ದು, ಖರೀದಿದಾರರಿಗೆ ಶಾಕ್ ನೀಡಿದೆ.

ದಿನಸಿ ಮತ್ತು ಡ್ರೈಫ್ರೂಟ್ಸ್: ಅಡುಗೆ ಎಣ್ಣೆ, ಕೊಬ್ಬರಿ ಹಾಗೂ ಒಣಹಣ್ಣುಗಳ ದರವು ಗರಿಷ್ಠ ಮಟ್ಟ ತಲುಪಿದೆ.

ವಾಹನ ಮತ್ತು ಇತರೆ ದರಗಳು: ಕಚ್ಚಾ ವಸ್ತುಗಳ ಬೆಲೆ ಹೆಚ್ಚಳದಿಂದಾಗಿ ಹೊಸ ವಾಹನಗಳ ದರಗಳು ಏರಿಕೆಯಾಗಿವೆ.

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ದೇಶದ ಪ್ರಧಾನಿ,ಅರಣ್ಯ ಸಚಿವರು ಮತ್ತು ಸಚಿವಾಲಯದ ಕಾರ್ಯದರ್ಶಿಯವರಿಗೆ ಪಶ್ಚಿಮ ಘಟ್ಟಗಳ ವಿಚಾರದಲ್ಲಿ ಮದ್ಯ ಪ್ರವೇಶಿಸುವಂತೆ ಚಂದ್ರಕಾಂತ ಕೊಚರೇಕರ್ ಮನವಿ

ಪ್ರತಿಧ್ವನಿ ಯಲ್ಲಾಪುರ :  ಕರ್ನಾಟಕದ ಪಶ್ಚಿಮ ಘಟ್ಟ ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶ (ESA) ಎಂದು ಘೋಷಿಸುವ ಸಂಬಂಧ 27-07-2026ರಂದು …

Leave a Reply

Your email address will not be published. Required fields are marked *