

ಪ್ರತಿಧ್ವನಿ ಯಲ್ಲಾಪುರ :ತಾಲೂಕಿನ ಖಾರೆವಾಡ ನಿವಾಸಿ ಅತ್ಯಂತ ಹಿಂದುಳಿದ ಧನಗರ ಗೌಳಿ ಸಮುದಾಯದ ಕಡುಬಡವನಾಗಿರುವ, ಕೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿರುವ, ಚಾಂಗು ಪಟಗಾರೆ ವಯಸ್ಸು 33 ವರ್ಷ ಎಂಬಾತ ಕ್ಯಾನ್ಸರ್ ನಿಂದ ಬಳಲುತ್ತಿದ್ದು, ಈಗಾಗಲೇ ಎರಡು ಬಾರಿ ಶಸ್ತ್ರಚಿಕಿತ್ಸೆ ಮಾಡಿ ಸುಮಾರು 10 ರಿಂದ 12 ಲಕ್ಷ ರೂಪಾಯಿ ಖರ್ಚು ಆಗಿರುತ್ತದೆ.ಹಾಗೆಯೇ,ಈಗ ಈ ಕ್ಯಾನ್ಸರ್ ರೋಗವು 3 ನೇ ಹಂತಕ್ಕೆ (Third Stage* ) ತಲುಪಿದೆ.ಈಗ ಮತ್ತೆ ಶಸ್ತ್ರಚಿಕಿತ್ಸೆ ಮಾಡಲು ಸುಮಾರು 7/8 ಲಕ್ಷ ರೂಪಾಯಿ ಖರ್ಚು ಆಗಬಹುದು ಎಂದು ವೈದ್ಯರು ತಿಳಿಸಿರುತ್ತಾರೆ, ಇವರಿಗೆ ಪತ್ನಿ ಹಾಗೂ ಮೂವರು ಪುಟ್ಟ ಮಕ್ಕಳಿದ್ದು, ಅತ್ಯಂತ ಕಷ್ಟಕರ ಸ್ಥಿತಿಯಲ್ಲಿ ಇದ್ದಾರೆ, ಆದ್ದರಿಂದ
ಕೈಲಾದ ಮಟ್ಟಿಗೆ ಧನ ಸಹಾಯ ಮಾಡಿ ಬಡ ಕುಟುಂಬಕ್ಕೆ ಆಸರೆಯಾಗಿ ಎಂದು ಕುಟುಂಬದ ಸದಸ್ಯರು ಮತ್ತು ಅವರ ಆಪ್ತರು ಮಾದ್ಯಮದ ಮೂಲಕ ಜನತೆಯಲ್ಲಿ ಮನವಿ ಮಾಡಿದ್ದಾರೆ.

ನೇರವಾಗಿ ಮಾತನಾಡಲು ಸಂಪರ್ಕಿಸಿ : 9480700703
ಹಣ ಹಾಕಿದ ಮೇಲೆ Screen shot ಕಳುಹಿಸಿ ಎಂದು ಕುಟುಂಬದವರು ಕೇಳಿಕೊಂಡಿದ್ದಾರೆ.








Prathidvani Yellapura