
ಪ್ರತಿಧ್ವನಿ ಯಲ್ಲಾಪುರ : ಕಾಂಗ್ರೆಸ್ ಸರಕಾರ ಕಳೆದ ಮೂರು ವರ್ಷಗಳಿಂದ ರಸ್ತೆಗಳನ್ನು ನಿರ್ವಹಣೆ ಮಾಡದೇ ಹೊಂಡಗಳ ಭಾಗ್ಯ ಕರುಣಿಸಿದೆ. ಇಂತಹ ಭಾಗ್ಯಗಳು ನಮ್ಮ ತಾಲ್ಲೂಕಿಗೆ ,ನಮ್ಮ ರಾಜ್ಯಕ್ಕೆ ಬೇಕಾಗಿತ್ತೇ ? ಎಂದು ಬಿಜೆಪಿ ಮಂಡಲಾಧ್ಯಕ್ಷ ಪ್ರಸಾದ ಹೆಗಡೆ ಆಕ್ರೋಶ ವ್ಯಕ್ತಪಡಿಸಿದರು.

ಅವರು ಪಟ್ಟಣದ ಬಿಜೆಪಿ ಕಾರ್ಯಾಲಯದಲ್ಲಿ ಕರೆಯಲಾದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪಿಡಬ್ಲುಡಿ ರಸ್ತೆಗಳ ತುರ್ತು ನಿರ್ವಹಣೆ ಆಗದಿದ್ದಲ್ಲಿ ಪ್ರತಿಭಟನೆ ಅನಿವಾರ್ಯವಾಗಿ ಮಾಡಬೇಕಾಗುತ್ತದೆಂದು ಇಲಾಖಾ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.ಮತ್ತು ಹೊಂಡಗಳಲ್ಲಿ ಬಾಳೆ ಗಿಡನೆಟ್ಟು ಪ್ರತಿಭಟಿಸುತ್ತೇವೆ,ಸಂಭಂಧಿಸಿದ ಅಧಿಕಾರಿಗಳು ಬರುವ ತನಕ ಸ್ಥಳದಲ್ಲೇ ಮೊಕ್ಕಂ ಹೂಡಿ ಆಡಳಿತ ವ್ಯವಸ್ಥೆಗೆ ಛೀಮಾರಿಹಾಕುತ್ತೇವೆ ಎಂದು ಹೇಳಿದರು.

ಕಂಪ್ಲಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ವಿನೇಶ ಭಟ್ಟ ಮಾಳಕೊಪ್ಪ ಹಾಗೂ ಇಡಗುಂದಿ ಮಹಾಶಕ್ತಿ ಕೇಂದ್ರದ ಜಿ.ಆರ್ ಭಾಗ್ವತ್ ಮಾತನಾಡಿ, ಯಲ್ಲಾಪುರ ಶಿರಸಿ ರಸ್ತೆ, ಚಿನ್ನಾಪುರ ಬಾರೆ ರಸ್ತೆ,ನಂದೊಳ್ಳಿ ಮಾಗೋಡ,ರಸ್ತೆ, ಇಡೀ ತಾಲ್ಲೂಕಿನ pwd ಇಲಾಖೆ ರಸ್ತೆ ಗಳು ಸಂಪೂರ್ಣ ಹದಗೆಟ್ಟದ್ದು, ಓಡಾಟ ದುಸ್ತರವಾಗಿದೆ. ಲೋಕೋಪಯೋಗಿ ಇಲಾಖೆ ನಿರ್ವಹಣೆ ನಿರ್ಲಕ್ಷ್ಯ ತಾಳಿದೆ. ವಾರದೊಳಗೆ ನಿರ್ವಹಣೆ ಆಗದೇ ಇದ್ದಲ್ಲಿ ಪ್ರತಿಭಟನೆ ನಡೆಸುತ್ತೇವೆ ಎಂದರು.
ಮಂಡಲ ಉಪಾಧ್ಯಕ್ಷ ಗಣೇಶ ಹೆಗಡೆ ಮಾತನಾಡಿ, ಪಿಡ್ಲುಡಿ ಇಲಾಖೆಯ ತಾಲೂಕಿನಲ್ಲಿ ರಸ್ತೆ ಹದಗೆಟ್ಟಿದೆ. ಇದಕ್ಕೆಲ್ಲಾ ಇಂಜಿನಿಯರಿಂಗ್ ವಿಭಾಗ ಸಂಪೂರ್ಣ ಹೊಣೆಯಾಗಿದೆ ಎಂದು ಆರೋಪಿಸಿದರು.


ಬಿಜೆಪಿ ಜಿಲ್ಲಾ ಕಾರ್ಯಕಾರಣಿ ಸದಸ್ಯ ನ್ಯಾಯವಾದಿ ಗಣೇಶ ಪಾಟಣಕರ್ ಮಾತನಾಡಿ, ಪಟ್ಟಣದಲ್ಲಿ ಹಂದಿಗಳು, ಬೀಡಾಡಿ ದನಗಳು, ನಾಯಿಗಳ ಹಾವಳಿ ಮಿತಿ ಮೀರಿದೆ. ವಾಹನ ಸವಾರರಿಗೆ ತೀವೃ ತೊಂದರೆ ಆಗುತ್ತಿದೆ. ಅಪಘಾತವಾದರೆ ಯಾರು ಹೊಣೆ. ಪ.ಪಂ ಎಲ್ಲಾ ಬೀದಿ ನಾಯಿಗಳಿಗೂ ರೇಬಿಸ್ ಇಂಜಕ್ಷ್ಯನ್ ಹಾಕಿಸಬೇಕು. ಕಂಡ ಕಂಡಲ್ಲಿ ಮೀನು ಮಾರಾಟವಾಗುತ್ತಿದೆ. ಕೆಲವು ದಿನಗಳ ಹಿಂದೆ ಪ.ಪಂ.ನ ಆಡಳಿತಾಧಿಕಾರಿಗಳೂ ಆದ ತಹಶೀಲ್ದಾರ ಅವರು ಪ.ಪಂ. ಸಂಬಂಧಪಟ್ಟ ಅಧಿಕಾರಿಗಳಿಗೆ ಮೀನು ಮಾರುಕಟ್ಟೆಯಲ್ಲಿ ಮಾತ್ರ ಮೀನು ಮಾರಬೇಕು. ಬೇರೆಡೆ ಎಲ್ಲೂ ಮಾರುವಂತಿಲ್ಲ. ಮಾರಿದವರ ಮೇಲೆ ಸೂಕ್ತ ಕಾನೂನು ಕ್ರಮ ಮಾಡುವಂತೆ ನಿರ್ದೇಶನ ನೀಡಿದ್ದರೂ ಕ್ರಮ ಕೈಗೊಳ್ಳಲಿಲ್ಲ. ಇದನ್ನು ನೋಡಿದರೆ ಆ ಮೀನು ಮಾರಾಟಗಾರರ ಬೆಂಬಲಕ್ಕೆ ಪ್ರಭಾವಿ ಜನರಿದ್ದಾರೋ, ಕಮಿಷನ್ ವ್ಯವಹಾರ ಇದೆಯೇ ಎಂದು ಪ್ರಶ್ನಿಸಿದ ಅವರು, ತಕ್ಷಣದಿಂದ ರಸ್ತೆಯ ಮೇಲೆ ಮೀನು ಮಾರಾಟ ನಿಲ್ಲಿಸುವಂತೆ ಪ.ಪಂ.ಗೆ ಆಗ್ರಹಿಸಿದರು.

ನಗರ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಸೋಮೇಶ್ವರ ನಾಯ್ಕ ಮಾತನಾಡಿ, ಅಲಂಕಾರಿಕ ದೀಪ ಆರು ವರ್ಷದಿಂದ ಪೂರ್ಣ ಆಗಿಲ್ಲ. ತಕ್ಷಣ ಸರಿಪಡಿಸದಿದ್ದಲ್ಲಿ ಇಲಾಖೆಯ ಎದುರು ಧರಣಿ ನಡೆಸುತ್ತೇವೆ ಎಂದರು. ಈ ಸಂದರ್ಭದಲ್ಲಿ ನಾಗೇಂದ್ರ ಪತ್ರೇಕರ್ ಉಪಸ್ಥಿತರಿದ್ದರು.









Prathidvani Yellapura