

ಪ್ರತಿಧ್ವನಿ ಯಲ್ಲಾಪುರ : ಭರಣಿಯ ಶ್ರೀ ಕಾಶೀ ವಿಶ್ವನಾಥ ದೇವಸ್ಥಾನದಲ್ಲಿ ಶ್ರಾವಣ ಮಾಸದ ಪ್ರಥಮ ಸೋಮವಾರದಂದು ವಿಶೇಷ ಪೂಜೆ ಭಜನೆ ಹಾಗೂ ಅನ್ನಸಂತರ್ಪಣೆ ಕಾರ್ಯಕ್ರಮಗಳು ಸಂಪನ್ನಗೊಂಡಿತು. ‘ಶ್ರೀ ಮಾರುತೇಶ್ವರ ಭಜನಾ ಮಂಡಳಿ ಮರಗುಂಡಿ’ ಇವರಿಂದ ಭಜನಾ ಸೇವೆ ನೆರವೇರಿತು.

ಸತ್ಸಂಗದಲ್ಲಿ ವಿಶೇಷ ವ್ಯಕ್ತಿಯಾಗಿ, ಸಾಮಾಜಿಕ ರಾಜಕೀಯವಾಗಿ ತೊಡಗಿಸಿಕೊಂಡಿರುವ ,ಸಹಕಾರಿ ಕ್ಷೇತ್ರದಲ್ಲಿ ವಿಶೇಷ ಸಾಧನೆಗೈದ ಸತತ ಮೂರನೇ ಬಾರಿಗೆ ಕೊರ್ಲಕಟ್ಟಾ ಸೊಸೈಟಿಯ ಅಧ್ಯಕ್ಷರಾಗಿ ಆಯ್ಕೆಯಾಗಿ ಸೇವೆ ಸಲ್ಲಿಸುತ್ತಿರುವ ‘ಶ್ರೀ ರಾಜೇಶ್ ನಾಯ್ಕ ಕಂಡ್ರಾಜಿ’ ಇವರನ್ನು ಆಹ್ವಾನಿಸಿ ಸನ್ಮಾನಿಸಲಾಯಿತು.

ಅನ್ನಸಂತರ್ಪಣೆ ವಹಿಸಿಕೊಂಡಿದ್ದ ಶ್ರೀಮತಿ ಭುವನೇಶ್ವರಿ ಮತ್ತು ಶ್ರೀ ಮಹಾಬಲೇಶ್ವರ ನಾಯ್ಕ ಬೆಳಲೆ ದಂಪತಿಗಳನ್ನು ಗೌರವಿಸಲಾಯಿತು. ವೇದಿಕೆಯಲ್ಲಿ ಶ್ರೀ ಸದಾನಂದ ನಾಯ್ಕ (ದೈ.ಶಿಕ್ಷಕರು, ಮಂಚಿಕೆರಿ), ಶ್ರೀ ತುಕಾರಾಂ ನಾಯ್ಕ (ಭಜನಾ ಮಂಡಳಿ ಅಧ್ಯಕ್ಷರು), ಶ್ರೀ ಮಂಜುನಾಥ ನಾಯ್ಕ ಹೆಗ್ಗರಣಿ, ಶ್ರೀ ಗೋಪಾಲ ನಾಯ್ಕ ಕಾನಗೋಡು, ಮತ್ತು ಶ್ರೀ ರವಿ ಪೂಜಾರಿ ಉಪಸ್ಥಿತರಿದ್ದರು. ಭಕ್ತರೆಲ್ಲರಿಗೂ ಭಗವಂತನ ಅನುಗ್ರಹವಾಗಲಿ ಎಂದು ಧರ್ಮದರ್ಶಿಗಳಾದ ಶ್ರೀ ಎ ಜಿ ನಾಯ್ಕ ಭರಣಿ ಪ್ರಾರ್ಥಿಸಿದರು. ನಂತರ ಅನ್ನಸಂತರ್ಪಣೆ ನಡೆಯಿತು.







Prathidvani Yellapura