
ಪ್ರತಿಧ್ವನಿ ಯಲ್ಲಾಪುರ : ಜಗತ್ತು ಚಂದ್ರನ ಮೇಲೆ ಮನೆ ಕಟ್ಟುವ ಯೋಜನೆ ಮತ್ತು ಯೋಚನೆಯಲ್ಲಿರುವಷ್ಟರ ಮಟ್ಟಿಗೆ ಮುಂದುವರೆಯುತ್ತಿದ್ದರೆ ಅದೇಕೊ ನಮ್ಮ ಗ್ರಾಮೀಣ ಭಾಗದಲ್ಲಿ ಜನರ ಮೂಲಭೂತ ಸೌಕರ್ಯಗಳ ಸಮರ್ಪಕ ಅನುಷ್ಟಾನವೆ ಆಗದಿರುವುದು ದುರಂತವೆ ಸರಿ
ತಾಲೂಕಿನ ದೇಹಳ್ಳಿ ಕ್ರಾಸ್ ದಿಂದ ಬಿಸಗೋಡಕ್ಕೆ ಹೋಗುವ ರಸ್ತೆಯಾಗಿದ್ದು( ಸುಮಾರು ಎರಡು ಕಿ ಮಿ) ಯಥಾವತ್ ದುರವಸ್ಥೆ ಯಾಗಿದೆ. ಹಿ.ಪ್ರಾ.ಶಾಲೆ, ಮತ್ತು ಪ್ರತಿಷ್ಠಿತ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು, ಸಾರ್ವಜನಿಕರು ಓಡಾಡುವ ಈ ರಸ್ತೆ ಸಂಪೂರ್ಣ ಹಾಳಾಗಿದ್ದು , ಇದರಿಂದ ಬಸ್ ವ್ಯವಸ್ಥೆಯೂ ಇಲ್ಲದಂತಾಗುತ್ತಿದೆ. ಅನೇಕ ಬಾರಿ ವಾರ್ಡ್ ಮತ್ತು ಗ್ರಾಮ ಸಭೆ ,ಜನ ಸಂಪರ್ಕ ಸಭೆಗಳಲ್ಲಿ,ಮತ್ತು ಜನ ಪ್ರತಿನಿಧಿಗಲ್ಲಿ ಈ ರಸ್ತೆಯ ವಿಷಯ ಪ್ರಸ್ತಾಪಿಸಿದ್ದರೂ, ಆಡಳಿತ ವ್ಯವಸ್ಥೆ ಸಮಸ್ಯೆಗೆ ಸ್ಪಂದಿಸಿಲ್ಲ. ಸುಮಾರು 6 – 7 ಗ್ರಾಮಗಳನ್ನು ಸಂಪರ್ಕಿಸುವ ಈ ರಸ್ತೆ ಸಂಪೂರ್ಣ ಹಾಳಾಗಿದ್ದು ಇದನ್ನು ರಿಪೇರಿ ಮಾಡಿಕೊಡಲು ಕಳೆದ ಎರಡು ವರ್ಷಗಳಿಂದ ಎಲ್ಲ ಸ್ಥರದ ಜನಪ್ರತಿನಿಧಿಗಳಿಗೆ ಮನವಿ ಮಾಡಿಕೊಂಡರು ಯಾವುದೇ ಪ್ರಯೋಜನವಾಗಿಲ್ಲ.
ಕಳೆದ ವರ್ಷ ಇದೇ ರಸ್ತೆಗೆ ಸಾರ್ವಜನಿಕರು ಜೋಳಿಗೆ ಅಭಿಯಾನ ಮಾಡಿ ಹಣ ಸಂಗ್ರಹಿಸಿ ಸ್ವಲ್ಪ ಮಟ್ಟಿಗೆ ಮೋರಂ ಮಣ್ಣು ಹಾಕಿಕೋಂಡು ತಿರುಗಾಡುವ ಹಾಗೆ ಮಾಡಿ ಕೊಂಡಿದ್ದರು .ಜನ ಪ್ರತಿನಿಧಿಗಳು, ಅಧಿಕಾರಿಗಳು ಈ ಕೂಡಲೇ ಇದರ ಬಗ್ಗೆ ವಿಶೇಷವಾಗಿ ಮುತುವರ್ಜಿ ವಹಿಸಿ ರಸ್ತೆಯನ್ನು ಸಿಮೆಂಟ್ ರಸ್ತೆ ಅಥವಾ ಡಾಂಬರ್ ರಸ್ತೆಯನ್ನಾಗಿ ಮಾಡಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕಾಗಿ ಆ ಭಾಗದ ಸಾರ್ವಜನಿಕರು ಮಾದ್ಯಮ ಪ್ರಕಟಣೆ ಹೊರಡಿಸಿದ್ದಾರೆ.

ಸ್ವಾತಂತ್ರ್ಯ ನಂತರ ಆಡಳಿತ ನಡೆಸಿದ ಎಲ್ಲಾ ಸರ್ಕಾರದ ನಡೆಯು ಇದೇ ಆಗಿದೆ. ಜನರು ತಮ್ಮ ಬೆವರಿನ ಹಣದಲ್ಲಿ ತೆರಿಗೆ ಭರಣ ಮಾಡಿ ತಮಗೆ ಬೇಕಾದ ಮೂಲಭೂತ ಸೌಕರ್ಯಗಳಾದ ರಸ್ತೆ,ನೀರು,ವಿದ್ಯುತ್, ಶಿಕ್ಷಣ,ಆರೋಗ್ಯ ಇತರೆ ವ್ಯವಸ್ಥೆ ಕಲ್ಪಿಸಿ ಎಂದು ಅದರ ವ್ಯವಸ್ಥೆ ಕಲ್ಪಿಸಲು ಒಂದು ಸರ್ಕಾರ ಅಸ್ತಿತ್ವಕ್ಕೆ ತರಲು ಮತದಾನ ಮಾಡುತ್ತಾರೆ ಇಷ್ಟೆಲ್ಲಾ ವ್ಯವಸ್ಥೆ ಕಲ್ಪಿಸುವ ಜನರಿಗೆ ಇದೇನು ಕರ್ಮ ಸ್ವಾತಂತ್ರ್ಯ ಬಂದು 80 ವರ್ಷ ಆದರು ಗ್ರಾಮೀಣ ಭಾಗದಲ್ಲಿ ಕೆಲವು ಸೌರ್ಕಗಳಿಗೆ ಈಗಲು ಅಂಗಲಾಚಬೇಕಿರುವುದು ಪ್ರಜಾಪ್ರಭುತ್ವದ ಅಣಕವಾಗಿದೆ.
ಜಾಗೋ…ನಾಗರಿಕ್..ಜಾಗೋ.. ಕಾಂಗ್ರೆಸ್, ಬಿಜೆಪಿ, ಜನತಾದಳ, ಎಂಬ ಅಂಧ ಭಕ್ತಿಯನ್ನು ಬಿಟ್ಟು ನಿಮ್ಮ ತೆರಿಗೆ ಹಣದ ಸಮರ್ಪಕ ಲೆಕ್ಕಕೇಳಿ, ಪ್ರತಿ ನಾಗರಿಕರಿಗು ಸಿಗಬೇಕಾದ ಮೂಲಭೂತ ಸೌಕರ್ಯಗಳ ಪ್ರಶ್ನೆ ಮಾಡಿ, ಇದಕ್ಕೆ ಯಾವ ಪಕ್ಷದ,ಧರ್ಮದ, ಅಂತಸ್ತಿನ, ಜಾತಿಯ ಅವಶ್ಯಕತೆ ಇಲ್ಲ ಜನರ ತೆರಿಗೆ ಜನರಿಗೆ ಸಮರ್ಪಿತ ಪ್ರಶ್ನಿಸುವುದು ನಿಮ್ಮ ಹಕ್ಕು ಜಾಗೋ..ನಾಗರಿಕ್…ಜಾಗೋ….!!







Prathidvani Yellapura