
ಪ್ರತಿಧ್ವನಿ ಯಲ್ಲಾಪುರ : ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘ( ರಿ)ಯಲ್ಲಾಪುರ ಸಮಿತಿಯಲ್ಲಿ 80ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಧ್ವಜಾರೋಹಣ ವನ್ನು ಸಂಘದ ಅಧ್ಯಕ್ಷರಾದ ವೇಣುಗೋಪಾಲ ಮದ್ಗುಣಿಯವರು ನೆರವೇರಿಸಿ ಮಾತನಾಡಿ ನಮ್ಮೇಲ್ಲರ ಹಿರಿಯರ ಬಲಿದಾನದಿಂದ ಅನೇಕ ವರ್ಷಗಳ ಹೋರಾಟದಿಂದ ನಮಗೆ ಸ್ವಾತಂತ್ರ್ಯ ಸಿಕ್ಕಿದ್ದು ಅದನ್ನು ನಾವೇಲ್ಲರೂ ನೆನೆಯ ಬೇಕು.ಇಂದಿನ ಯುವ ಪೀಳಿಗೆ ಅದರ ಮಹತ್ವವನ್ನು ಅರಿಯಬೇಕೆಂದರು.

ಮಲೆನಾಡು ಸೊಸೈಟಿ ಅಧ್ಯಕ್ಷರಾದ ಎಂ.ಆರ್.ಹೆಗಡೆ,ಕುಂಬ್ರಿಗುಡ್ಡೆ, ಹೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ರಮಾಕಾಂತ ನಾಯ್ಕ, ನಿವೃತ್ತ ಶಿಕ್ಷಕರಾದ ಎಸ್.ಎಲ್.ಜಾಲಿಸತ್ಗಿಯವರು ಮಾತನಾಡಿದರು.ಈ ಸಂದರ್ಭದಲ್ಲಿ ಶಾಖಾಧಿಕಾರಿ ಗಳಾದ ನಾಗರಾಜ ಆಚಾರಿ,ಲಕ್ಷ್ಮಣ ಜೋಗಳೇಕರ,ಕನಕಪ್ಪ,ಛಾಯಪ್ಪ ಮುರಡಿ,ಲೇಕ್ಕಾದಿಕಾರಿ ವಿನಾಯಕ ಶೇಟ, ಸದಾಶಿವ ಭಟ್ಟ, ಕೃಷ್ಣ ಭಟ್ಟಮೊಠಾರಿ,ಗುತ್ತಿಗೆದಾರರ ಶಾಂತಾರಾಮ ಹೆಗಡೆ,ರಿಗನ್ ಡಿಸೋಜಾ, ಮಕ್ಬೂಲ್ ಸೈಯದ ಅಲಿ,ದಾದಾಪೀರ್, ಶ್ರೀನಿವಾಸ ಪಟಗಾರ, ಪ್ರಶಾಂತ ಮಹೇಕರ,ಮಾರುತಿ ಗೋವೆಕರ,ಜಾಫರ್, ನಾಗರಾಜ ಕೊರನಳ್ಳಿ,ಶಾಬಾದ್ ಶೇಖ್,ಹಸೇನಸಾಬ ಕಾನಳ್ಳಿ ಮುಂತಾದವರು ಪಾಲ್ಗೊಂಡಿದ್ದರು.


















Prathidvani Yellapura