Breaking News

ಯಲ್ಲಾಪುರದ ವಿಶ್ವ ದರ್ಶನ ಶಿಕ್ಷಣ ಸಂಸ್ಥೆಯಲ್ಲಿ ಬಾನೆತ್ತರಕ್ಕೆ ಹಾರಿದ ತ್ರಿವರ್ಣ ಧ್ವಜ.

ಪ್ರತಿಧ್ವನಿ ಯಲ್ಲಾಪುರ : ಸ್ವಾತಂತ್ರ್ಯ ಬ್ರಿಟಿಷರ ಕೊಡುಗೆಯಲ್ಲ  ಅದರ ಹಿಂದೆ ನಮ್ಮ ಹೋರಾಟ ತ್ಯಾಗ ಬಲಿದಾನಗಳು ಇವೆ ಎಂದು ವಾಯು ಪಡೆಯ ನಿವೃತ್ತ ಯೋಧ ಮಹಾದೇವಚಂದ್ರ‌ ಪಂಡರಾಪುರ ಹೇಳಿದರು.


ಅವರು ವಿಶ್ವ ದರ್ಶನ ಶಿಕ್ಷಣ ಸಮೂಹದಲ್ಲಿ ಆಯೋಜಿಸಿದ್ದ ಸ್ವಾತಂತ್ರೋತ್ಸವದ ಸಂದರ್ಭದಲ್ಲಿ ಮಾತನಾಡಿದರು.

ಇಂದು ನೂರಾರು ವರ್ಷಗಳ ಪರಕೀಯರ ದಾಸ್ಯದ ಸಂಕೋಲೆ ಮುರಿದ ದಿನ. ಸ್ವಾತಂತ್ರ್ಯ ಬ್ರಿಟಿಷರ ಕೊಡುಗೆಯಲ್ಲ ಅದರ ಹಿಂದೆ ನಮ್ಮ ಹೋರಾಟ ತ್ಯಾಗ ಬಲಿದಾನಗಳು ಇವೆ. ಇಂದು ನಮ್ಮಲ್ಲಿರುವ ಭ್ರಷ್ಟಾಚಾರ ಆತಂಕವಾದಗಳು ಮೊದಲಾದವುಗಳನ್ನು ಎದುರಿಸಬೇಕಿದೆ. ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳಲ್ಲಿ ನಾವು ಅನೇಕ ವಿಜ್ಞಾನ ತಂತ್ರಜ್ಞಾನ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ಪ್ರಗತಿ ಸಾಧಿಸಿದ್ದೇವೆ. ದೇಶ ಸೇವೆ ಎಂದರೆ ನಮ್ಮಲ್ಲಿರುವ ಕೆಲಸಗಳನ್ನು ಶ್ರೇಷ್ಠವಾಗಿ ನಿರ್ವಹಿಸುವುದು. ನಾವು ಇಲ್ಲಿ ಕ್ಷೇಮವಾಗಿರಲು ಸೈನಿಕರು ಹಗಲು ರಾತ್ರಿ ಗಡಿಯಲ್ಲಿ ಶ್ರಮಿಸುತ್ತಾರೆ. ಇಂದು ಯುವಕರು ಸೇನೆಗೆ ಹೆಚ್ಚು ಸೇರಬೇಕಿದೆ. ತಂತ್ರಜ್ಞಾನ ಬೆಳೆದಿರುವುದರಿಂದ ಸುಲಭವಾಗಿ ಮಾಹಿತಿಗಳು ಸಿಗುತ್ತದೆ. ಇದನ್ನು ಸರಿಯಾಗಿ ಬಳಸಿಕೊಳ್ಳಬೇಕು ಎಂದರು.


ಧ್ವಜಾರೋಹಣ ನೆರವೇರಿಸಿ ಮಾತನಾಡಿದ ವಿಶ್ವದರ್ಶನ ಶಿಕ್ಷಣ ಸಮೂಹದ ಅಧ್ಯಕ್ಷ ಹರಿಪ್ರಕಾಶ್ ಕೋಣೆಮನೆ ದೇಶಕ್ಕೆ ಸ್ವಾತಂತ್ರ್ಯ ಬಂದು 80‌ವರ್ಷಗಳಾಗುತ್ತಿವೆ. ಸ್ವಾತಂತ್ರ್ಯ ಬಂದ ಸಂದರ್ಭದಲ್ಲಿ ಇದ್ದ 500 ಸಂಸ್ಥಾನಗಳ ಒಂದು ಗೂಡಿಸಿದ ಮಹಾನ್ ಚೇತನಗಳನ್ನು ಈ ಸಂರ್ಭದಲ್ಲಿ ಸ್ಮರಿಸಬೇಕು. ದೇಶಕ್ಕೆ ಸ್ವಾತಂತ್ರ್ಯ ಬಂದರೂ ನಮ್ಮಲ್ಲಿ ಎರಡು ಸಂವಿಧಾನದ ಎರಡು ಧ್ವಜಗಳಿದ್ದವು. 370 ವಿಧಿಯ ರದ್ದು ಪಡಿಸುವ ಮೂಲಕ ಕಾಶ್ಮೀರವನ್ನು ಸೇರಿಸಿ ಅಖಂಡ ಭಾರತ ರೂಪಿಸುವ ಕನಸು ಸಾಕಾರಗೊಂಡಿತು. ಸ್ವಾತಂತ್ರ್ಯ ಹೋರಾಟದಲ್ಲಿ ದೇಶವನ್ನು ಒಗ್ಗೂಡಿಸಿದ್ದು ವಂದೇಮಾತರಂ‌. ಇದು ಮಾತೃಭೂಮಿಯೊಟ್ಟಿಗೆ ಮಗು ಮತ್ತು ತಾಯಿಯ ಭಾವನಾತ್ಮಕ ಸಂಬಂಧ ಸೂಚಿಸುವ ಗೀತೆ. ಆದರೆ ನಾವು ಇಲ್ಲಿಯವರೆಗೆ ಭೌಗೋಳಿಕ ವಿಷಯ ಇರುವ ಚರಣ ಮಾತ್ರ ಗಾಯನವಾಗುತ್ತಿತ್ತು. ಈಗ ವಂದೇ ಮಾತರಂ‌150ನೇ ವರ್ಷಾಚರಣೆಯ ಸಂದರ್ಭದಲ್ಲಿ ಪೂರ್ಣ ಗೀತೆ ಗಾಯನವಾಗುತ್ತಿದೆ. ಈಗ ನಂತರ ಕೆಂಪುಕೋಟೆಯಲ್ಲಿ ಕೂಡಾ ಗಾಯವಾಗುತ್ತಿದೆ. ನಾವು ರಾಷ್ಟ್ರ ಧ್ವಜವನ್ನು ಸರ್ಕಾರಿ ಕಚೇರಿಗಳಲ್ಲಿ ಮಾತ್ರ ಕಾಣುತ್ತಿದ್ದೆವು ಈಗ ಹರ ಘರ ತಿರಂಗದ‌ ಮೂಲಕ ಮನೆಮನೆಗಳಲ್ಲೂ ಧ್ವಜಾರೋಹಣ ಮಾಡುವ ಮೂಲಕ ಜನರ ಭಾವನೆಗಳನ್ನು ಜಾಗೃತಗೊಳಿಸುವ ಕೆಲಸವಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಎಲ್ಲ ವಿಭಾಗಗಳುಮುಖ್ಯಸ್ಥರ ಶಿಕ್ಷಕರು, ಉಪನ್ಯಾಸಕರು, ಪಾಲಕರು, ವಿದ್ಯಾರ್ಥಿಗಳು, ಉಪಸ್ಥಿತರಿದ್ದರು.
ವಿಶ್ವದರ್ಶನ ಕೇಂದ್ರೀಯ ಶಾಲೆಯ ಪ್ರಾಂಶುಪಾಲೆ ಮಹಾದೇವಿ ಭಟ್ ಅವರು ಸ್ವಾಗತಿಸಿದರು. ಶಿವಪ್ರಸಾದ್ ಭಟ್ ಕಾರ್ಯಕ್ರಮ ನಿರ್ವಹಿಸಿದರು. ಶಿಕ್ಷಕಿ ಜಾಕಿರ ವಂದಿಸಿದರು.

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ದೇಶದ ಪ್ರಧಾನಿ,ಅರಣ್ಯ ಸಚಿವರು ಮತ್ತು ಸಚಿವಾಲಯದ ಕಾರ್ಯದರ್ಶಿಯವರಿಗೆ ಪಶ್ಚಿಮ ಘಟ್ಟಗಳ ವಿಚಾರದಲ್ಲಿ ಮದ್ಯ ಪ್ರವೇಶಿಸುವಂತೆ ಚಂದ್ರಕಾಂತ ಕೊಚರೇಕರ್ ಮನವಿ

ಪ್ರತಿಧ್ವನಿ ಯಲ್ಲಾಪುರ :  ಕರ್ನಾಟಕದ ಪಶ್ಚಿಮ ಘಟ್ಟ ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶ (ESA) ಎಂದು ಘೋಷಿಸುವ ಸಂಬಂಧ 27-07-2026ರಂದು …

Leave a Reply

Your email address will not be published. Required fields are marked *