Breaking News

ಸ್ವಾತಂತ್ರ್ಯಕ್ಕೂ ಸ್ವೇಚ್ಛಾಚಾರಕ್ಕೂ ಇರುವ ವ್ಯತ್ಯಾಸವನ್ನು ಅರಿತು ನಾವು ದೇಶವನ್ನು ಕಟ್ಟಬೇಕಾಗಿದೆ – ರಾಜಶೇಖರ್..

ಪ್ರತಿಧ್ವನಿ ಯಲ್ಲಾಪುರ : ನಮ್ಮ ದೇಶ, ಸಂಸ್ಕಾರ ಸಂಸ್ಕೃತಿ, ಇವೆಲ್ಲವೂ ನಮಗೆ ಹಿರಿಯರು ನೀಡಿದ ಬದುಕಿನ ಕ್ರಮವಾಗಿದೆ. ಸ್ವಾತಂತ್ರ್ಯ ಎಂದರೆ ಗುಲಾಮಗಿರಿಯಿಂದ ಇಂದಿನ ಸ್ವತಂತ್ರವನ್ನು ಕೊಡಿಸಿದ ಕ್ಷಣ. ಈ ಬದುಕನ್ನು ನೀಡಿದ ಮಹನೀಯರು ಪ್ರಾತಸ್ಮರಣೀಯರು. ಅಂದಿನ ಹಿರಿಯ ತಲೆಮಾರಿನ ಜನ ಒಗ್ಗಟ್ಟಿನಿಂದ ನೀಡಿರುವ ಸ್ವಾತಂತ್ರ್ಯವನ್ನು ನಾವಿಂದು ಅನುಭವಿಸುತ್ತೇವೆ. ಈ ಸ್ವಾತಂತ್ರ್ಯದ ಸವಿ ಅತ್ಯಂತ ಅಮೂಲ್ಯ ಅದನ್ನ ಪಡೆಯಬೇಕಾದರೆ ನಡೆಸಿದ ಹೋರಾಟಗಳ ಅರಿವಿಲ್ಲದೆ ನಾವಿಂದು ದೇಶದ ಬಗ್ಗೆ ದೇಶದ ಕುರಿತು ಚಿಂತನೆ ಮಾಡುವಲ್ಲಿ ಎಡವುತ್ತಿದ್ದೇವೆ ಎಂದು ಹೋಲಿ ರೋಜರಿ ಪ್ರೌಢಶಾಲಾ ಮುಖ್ಯೋಪಾಧ್ಯಾಯ ಎಂ. ರಾಜಶೇಖರ್ ಹೇಳಿದರು.

ಅವರು 80 ನೆ ಸ್ವಾತಂತ್ರೋತ್ಸವದ ನಿಮಿತ್ತ  ಹೋಲಿರೋಜರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಪ್ರೌಢಶಾಲೆಯ ಜಂಟಿ ಧ್ವಜಾರೋಹಣವನ್ನು ನೆರವೇರಿಸಿ ಮಾತನಾಡಿದರು. 

                                         

ಎಳೆಯ ಮನಸ್ಸಿನ ಮಕ್ಕಳಲ್ಲಿ ಸುಭದ್ರ ಸಮಷ್ಟಿ ಭಾವದ ರಾಷ್ಟ್ರದ ಕಲ್ಪನೆ ಅತ್ಯಂತ ಅಮೂಲ್ಯ. ನನ್ನ ದೇಶ ನನಗೇನು ನೀಡಿದೆ ಎನ್ನುವುದನ್ನು ಯೋಚಿಸುವುದಕ್ಕಿಂತ ದೇಶಕ್ಕಾಗಿ ನಾನೇನು ಮಾಡಬಲ್ಲೆ, ಎನ್ನುವುದನ್ನು ಯೋಚಿಸಿಸುವ ಸ್ಥಿತಿ ಇಂದು ನಮ್ಮ ಮುಂದಿದೆ ಎಂದರು.
ಸ್ವಾತಂತ್ರ್ಯಕ್ಕೂ ಸ್ವೇಚ್ಛಾಚಾರಕ್ಕೂ ಇರುವ ವ್ಯತ್ಯಾಸವನ್ನು ಅರಿತು ನಾವು ದೇಶವನ್ನು ಕಟ್ಟಬೇಕಾಗಿದೆ. 

ಈ ಸಂದರ್ಭದಲ್ಲಿ ಎರಡು ಶಿಕ್ಷಣ ಸಂಸ್ಥೆಗಳ ಶಿಕ್ಷಕರು ಶಿಕ್ಷಕೇತರ ಸಿಬ್ಬಂದಿಗಳು ಹಾಜರಿದ್ದು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಹಿರಿಯ ನಿವೃತ್ತ ಶಿಕ್ಷಕರಾದ ದಾಸಿಂತ್ ಫರ್ನಾಂಡಿಸ್ ಚಂದ್ರಶೇಖರ್ ರವರು ಆಗಮಿಸಿ ಧ್ವಜವಂದನೆಯಲ್ಲಿ ಭಾಗವಹಿಸಿದರು ಹಿರಿಯ ಪ್ರಾಥಮಿಕ ಶಾಲೆ ಮುಖ್ಯೋಪಾ ಕ ಆಗ್ನೇಯಲ್ ಫರ್ನಾಂಡಿಸ್ ವಂದಿಸಿದರು. ಸ್ವಾತಂತ್ರ್ಯೋತ್ಸವದ ನಿಮಿತ್ತ ನಡೆಸಿದ ದೇಶಭಕ್ತಿ ಗೀತೆ ಚಿತ್ರಕಲಾ ಸ್ಪರ್ಧೆ ಇನ್ನಿತರ ಹಲವು ಸ್ಪರ್ಧಿಗಳ ಬಹುಮಾನಗಳನ್ನ ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ನೀಡಲಾಯಿತು ವಿಶ್ವ ದರ್ಶನ ಶಿಕ್ಷಣ ಮಹಾವಿದ್ಯಾಲಯದ ಪ್ರಶಿಕ್ಷಣಾರ್ಥಿಗಳು ಸಹ ಉಪಸ್ಥಿತರಿದ್ದರು ಹಿರಿಯ ಶಿಕ್ಷಕರ ವೆಂಕಟರಮಣ ಭಟ್ಟ ಕಾರ್ಯಕ್ರಮ ನಿರ್ವಹಿಸಿದರು. ಶಿಕ್ಷಕ ನೆಲ್ಸನ್ ಗೋನ್ಸಾಲ್ವಿಸ ಮತ್ತು ಮಲ್ಲಿಕಾರ್ಜುನ ದೇಶಭಕ್ತಿ ಗೀತೆಗಳನ್ನು ನಿರ್ವಹಿಸಿದರು.

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ದೇಶದ ಪ್ರಧಾನಿ,ಅರಣ್ಯ ಸಚಿವರು ಮತ್ತು ಸಚಿವಾಲಯದ ಕಾರ್ಯದರ್ಶಿಯವರಿಗೆ ಪಶ್ಚಿಮ ಘಟ್ಟಗಳ ವಿಚಾರದಲ್ಲಿ ಮದ್ಯ ಪ್ರವೇಶಿಸುವಂತೆ ಚಂದ್ರಕಾಂತ ಕೊಚರೇಕರ್ ಮನವಿ

ಪ್ರತಿಧ್ವನಿ ಯಲ್ಲಾಪುರ :  ಕರ್ನಾಟಕದ ಪಶ್ಚಿಮ ಘಟ್ಟ ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶ (ESA) ಎಂದು ಘೋಷಿಸುವ ಸಂಬಂಧ 27-07-2026ರಂದು …

Leave a Reply

Your email address will not be published. Required fields are marked *