Breaking News

ಆಡಳಿತ ಸುಧಾರಣ ಆಯೋಗದ ಅಧ್ಯಕ್ಷರಾಗಿ ಆರ್.ವಿ‌.ದೇಶಪಾಂಡೆ ನಮಗೆ ತೃಪ್ತಿ ಇದೆ – ಬಾಬು ಸಿದ್ದಿ, ಯಲ್ಲಾಪುರ.


ಪ್ರತಿಧ್ವನಿ ಯಲ್ಲಾಪುರ : ರಾಜ್ಯ ರಾಜಕಾರಣದಲ್ಲಿ ಹಿರಿಯ ಮುತ್ಸದ್ದಿ ಮತ್ತು ಮುಖ್ಯಮಂತ್ರಿ ಸ್ಥಾನಕ್ಕೆ ಅರ್ಹರಾದವರು ಹಳಿಯಾಳ ಕ್ಷೇತ್ರದ ಶಾಸಕ ಆರ್.ವಿ‌ದೇಶಪಾಂಡೆಯವರು ಆದರು ಎಂದಿಗು ಪಜ್ಷದ ತತ್ವ ಮತ್ತು ಸಿದ್ದಾಂತಕ್ಕೆ ಎದುರಾಡಿದವರಲ್ಲ ಮಂತ್ರಿ ಸ್ಥಾನಕ್ಕಾಗಿ ಲಾಭಿ ಮಾಡಿದವರಲ್ಲ ವಿಶೇಷವಾಗಿ ಬ್ಲಾಕ್ ಮೇಲ್ ರಾಜಕಾರಣದಲ್ಲಿ ಬಂದವರಲ್ಲ. ಪಕ್ಷದ ಹೈ ಕಮಾಂಡ್ ನೀಡಿದ ಜವಾಬ್ದಾರಿಯನ್ನು ಅತ್ಯಂತ ಶಿಸ್ತಿನಿಂದ ನಿಭಾಯಿಸಬಲ್ಲ ಅಜಾತ ಶತೃ. ಆರ್‌.ವಿ.ಡಿ, ಸದ್ಯ ಮುಖ್ಯ ಮಂತ್ರಿ ಡಿ.ಕೆ.ಶಿವಕುಮಾರ್ ಸರ್ಕಾರದಲ್ಲಿ ಪುನಃ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರಾಗಿ ಕ್ಯಾಬಿನೆಟ್ ದರ್ಜೆ ಸ್ಥಾನ ಮಾನ ನೀಡಿ ಮುಂದುವರೆಸಿರುವುದು ಅತ್ಯಂತ ಸಂತಸ ತಂದಿದೆ ಎಂದು ಆರ್.ವಿ‌ದೇಶಪಾಂಡೆ ಅತ್ಯಾಪ್ತ,ಉತ್ತರ ಕನ್ನಡ ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಕಿರವತ್ತಿಯ ಬಾಬು ಸಿದ್ದಿ ಪ್ರತಿಧ್ವನಿ ಯೊಂದಿಗೆ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ.


ಪಕ್ಷ ಸಂಕಷ್ಟದಲಿದ್ದಾಗ ದೂರಾಗುವುದು ಅಧಿಕಾರದಲಿದ್ದಾಗ ಹತ್ತಿರವಾಗುವ ದ್ವಂದ್ವ ನಿಲುವು ತೆಗೆದುಕೊಳ್ಳದೆ ಪಕ್ಷದ ತತ್ವ ಸಿದ್ದಾಂತಗಳೊಂದಿಗೆ ತಮ್ಮ ಅನುಯಾಯಿಗಳಿಗು ಶಿಸ್ತಿನ ಪಾಠ ಹೇಳಿಕೊಟ್ಟು ಜೊತೆಯಲ್ಲಿ ಸಾಗಿದವರು ಆರ್.ವಿ.ದೇಶಪಾಂಡೆ ಅವರು. ಅವರು ಹಾಕಿಕೊಟ್ಟ ಮಾರ್ಗದಲ್ಲಿ ಇಂದಿಗು ನಡೆಯುತ್ತ ಕಾಂಗ್ರೆಸ್ ಪಕ್ಷದ ಕಟ್ಟಾಳು ಕಾರ್ಯಕರ್ತರಾಗಿ ಮುಂದುವರೆಯುತ್ತಿದ್ದೇವೆ.


ಮೊದಲಿಗೆ ಮಂತ್ರಿ ಸ್ಥಾನ ನೀಡದ ಸಂದರ್ಭದಲ್ಲಿ ಮುಖ್ಯ ಮಂತ್ರಿ ಡಿ.ಕೆ.ಶಿವಕುಮಾರ್ ಎದುರು ಸಾವಿರಾರು ಸಂಖ್ಯೆಯಲ್ಲಿ ಆರ್.ವಿ.ಡಿ ಅಭಿಮಾನಿಗಳು ಪ್ರತಿಭಟಿಸಲು ಮುಂದಾಗಿದ್ದೆವು ಆದರೆ ಅದಕ್ಕೆ ಸುತಾರಾಂ ಒಪ್ಪದ ದೇಶಪಾಂಡೆ ಅವರು ಪಕ್ಷದ ವಿರುದ್ಧ ಮಾತನಾಡುವುದಾಗಲಿ,ಹೈ ಕಮಾಂಡ್ ವಿರುದ್ದ ಅಸಹನೆ ತೋರಿಸುವುದಾಗಲಿ ಶಿಸ್ತಿನ ರೀತಿಯಲ್ಲ ಹೈ ಕಮಾಂಡ್ ಮೀರಿ ಯಾರು ನಡೆದುಕೊಳ್ಳಬಾರದು ಎಂದು ಶಿಸ್ತಿನ ಪಾಠ ಮಾಡಿ ತಡೆದಿದ್ದರು.
ಸದ್ಯ ಪಕ್ಷದ ಹೈ ಕಮಾಂಡ್ ಜವಾಬ್ದಾರಿಯುತ ಸ್ಥಾನ ಮಾನ ನೀಡಿ ಸಚಿವ ಸ್ಥಾನದ ಸಮಾನ ಗೌರವ ನೀಡಿರುವುದು ಅವರ ಅಭಿಮಾನಿಗಳಾದ ನಮಗೆಲ್ಲ ಹರ್ಷ ತಂದಿದೆ. ಮುಂದೆಯು ಅವರ ಬೆನ್ನಿಗೆ ನಿಂತು ಜಿಲ್ಲೆಯಲ್ಲಿ ಪಕ್ಷ ಬಲಪಡಿಸುವತ್ತ ಮುಂದಾಗಲಿದ್ದೇವೆ.
ಬಾಬು ಸಿದ್ದಿ
ಕಾರ್ಯದರ್ಶಿ
ಜಿಲ್ಲಾ ಕಾಂಗ್ರೆಸ್ ಸಮಿತಿ.
ಯಲ್ಲಾಪುರ

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ಬಸ್ ಅಪಘಾತದಲ್ಲಿ ಗಾಯಗೊಂಡವರಿಗೆ ಸಾಂತ್ವನ ಹೇಳಿದ ಶಾಸಕ ಹೆಬ್ಬಾರ್ ಮತ್ತು ಪುತ್ರ ವಿವೇಕ್ ಹೆಬ್ಬಾರ್.

ಪ್ರತಿಧ್ವನಿ ಯಲ್ಲಾಪುರ : ಮುಂಡಗೋಡ ತಾಲ್ಲೂಕಿನ ಶಿಡ್ಲಗುಂಡಿ ಗ್ರಾಮದಲ್ಲಿ ಬುಧವಾರ ಎರಡು ಸಾರಿಗೆ ಬಸ್‌ಗಳು ಮುಖಾಮುಖಿ ಡಿಕ್ಕಿಯಾಗಿ, ಬಸ್ ಚಾಲಕ …

Leave a Reply

Your email address will not be published. Required fields are marked *