
ಪ್ರತಿಧ್ವನಿ ಯಲ್ಲಾಪುರ :ಭವ್ಯ ಭಾರತದ ಬೃಹತ್ ಪ್ರಜಾಪ್ರಭುತ್ವಕ್ಕೆ ಸಂವಿಧಾನ ನೀಡಿದ ಮಹಾ ಚೇತನ, ಜಗತ್ತಿನ ಎಲ್ಲಾ ದೇಶಗಳ ಒಳಿತನ್ನು ಆರಿಸಿ ಭಾರತ ನೆಲದ ಜೀವನ ಪದ್ದತಿಗೆ ಅನುಕೂಲ ಆಗುವಂತಹ ಮತ್ತು ದಮನಿತರ ಬದುಕು ಹಸನಾಗಿಸಲು ಸಂವಿಧಾನ ನೀಡಿದ ಮಹಾ ನಾಯಕ ಡಾ,ಬಾಬಾ ಸಾಹೇಬ್ ಅಂಬೇಡ್ಕರ್ ಅವರು. ಅವರ ಜೀವನ ಶ್ರದ್ದೆ ಬದುಕಿನ ಪಥ ಅನುಕರಣೀಯ ಹಾಗು ಪ್ರಸ್ತುತ ಪೀಳಿಗೆಗೆ ಪ್ರೇರಣಾದಾಯಕ ವ್ಯಕ್ತಿತ್ವ. ಅಂತಹ ಮಹನೀಯರ ಜಯಂತಿ ಆಚರಣೆ ಅರ್ಥಪೂರ್ಣ ಎಂದು ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಶಿವರಾಮ ಹೆಬ್ಬಾರ್ ಹೇಳಿದರು.

ಅವರು ಏ,14 ರ ಮಂಗಳವಾರ ದಂದು ಭಾರತ ರತ್ನ, ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಜಯಂತಿ ಅಂಗವಾಗಿ ತಾಲೂಕು ಆಡಳಿತ ಹಾಗೂ ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಪಟ್ಟಣದ ಗಾಂಧಿ ಕುಟೀರದಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಪೂಜಿಸಿ ಮೆರವಣಿಗೆಗೆ ಹಸಿರು ನಿಶಾನೆ ತೋರಿ ಚಾಲನೆ ನೀಡಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಕೆಪಿಸಿಸಿ ಸದಸ್ಯ ವಿವೇಕ್ ಹೆಬ್ಬಾರ್, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎನ್. ಕೆ. ಭಟ್, ತಹಶೀಲ್ದಾರರಾದ ಚಂದ್ರಶೇಖರ ಹೊಸಮನಿ, ತಾಲ್ಲೂಕು ಪಂಚಾಯತ ಇಒ ರಾಜೇಶ್ ಧನವಾಡಕರ್,ಅಂಬೇಡ್ಕರ್ ಸೇವಾ ಸಮಿತಿ ಅಧ್ಯಕ್ಷ ಲೋಕೇಶ್ ಪಾಟಣಕರ್, ತೊಗಲು ಹರಳಯ್ಯ ಟ್ರಸ್ಟ್ ಅಧ್ಯಕ್ಷ ಜಗನ್ನಾಥ ರೇವಣಕರ್ ಪ್ರಮುಖರಾದ ಶಾಮಲಿ ಪಾಟಣಕರ್, ಮಾರುತಿ ಬೋವಿ ವಡ್ಡರ್, ಕಲ್ಲಪ್ಪ ಹೊಳಿ, ರವಿ ಪಾಟಣಕರ್, ಗಣೇಶ ಪಾಟಣಕರ್, ಅನಿಲ್ ಮರಾಠಿ, ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಸಾರ್ವಜನಿಕರು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.









Prathidvani Yellapura