Breaking News

ದೇವರ ಕಲ್ಲಳ್ಲಿಯಲೊಂದು ಬುಡಕಟ್ಟು ಸಿದ್ದಿ ಸಮುದಾಯದ ಜಾನಪದ ಜಗತ್ತಿನ ಪರಿಚಯ.

ಕೇಬಲ್ ನಾಗೇಶ್, ಯಲ್ಲಾಪುರ.🖋


ಪ್ರತಿಧ್ವನಿ ಯಲ್ಲಾಪುರ : ನಶಿಸಿ ಹೋಗುತ್ತಿರುವ ಅನೇಕ ಸಂಸ್ಕೃತಿಗಳಲ್ಲಿ ಅರಣ್ಯ ವಾಸಿ ಬುಡಕಟ್ಟು ಸಿದ್ದಿ ಸಮುದಾಯದ ಜೀವನದೊಂದಿಗೆ ಬೆಸೆದುಕೊಂಡು ಬರುತ್ತಿರುವ ಸಂಪ್ರದಾಯ ಪರಂಪರೆ ಕಲೆ ಸಂಸ್ಕೃತಿ ಉಳಿವಿಗಾಗಿ ನಿರಂತರ ಪ್ರಯತ್ನ ಸಾಗಿದೆ.


ತಾಲ್ಲೂಕಿನ ಮಂಚಿಕೇರಿ ಸಮೀಪ ದೇವರ ಕಲ್ಲಳ್ಳಿಯಲ್ಲಿ ಸಿದ್ದಿ ಸಮುದಾಯದವರೆ ಸ್ವತಃ ನಿರ್ಮಿಸಿ ಬೆಳೆಸಿಕೊಂಡು ಬರುತ್ತಿರುವ “ಸಿದ್ದಿ ಟ್ರಸ್ಟ್” ಅಡಿಯಲ್ಲಿ 1985 ರಲ್ಲಿ ಖ್ಯಾತ ರಂಗಕರ್ಮಿ ಚಿದಂಬರರಾವ್ ಜಂಬೆ ನಿರ್ದೇಶಿತ  “ಕಪ್ಪು ಜನ ಕೆಂಪು ನೆರಳು” ಎಂಬ ನಾಟಕದೊಂದಿಗೆ ರಂಗ ಪ್ರವೇಶಿಸಿದ ಈ ತಂಡ ಹಲವು ಖ್ಯಾತನಾಮರ ನಾಟಕಗಳಲ್ಲಿ ತೊಡಗಿಸಿಕೊಂಡರು.
ಸಾಗರದ ಹೆಗ್ಗೋಡಿನ ನೀನಾಸಂ ತಂಡದೊಂದಿಗೆ ಬೆಸೆದುಕೊಂಡು ಸಾಗುತ್ತಿರುವ  ಸಿದ್ದಿ ಸಮುದಾಯದ ಪ್ರತಿಭೆಗಳು ಹೊರ ಜಗತ್ತಲ್ಲಿ ಮಿ‌ಉಗುತ್ತಿವೆ.


ಬುಡಕಟ್ಟು ಸಮುದಾಯದಲ್ಲಿ ವಿಶೇಷವಾಗಿ ಸುದ್ದಿ ಸಮುದಾಯದಲ್ಲಿ ಕಲೆ,ಸಂಪ್ರದಾಯ,ಆಚರಣೆಗಳು ವೈಶಿಷ್ಟ್ಯಪೂರ್ಣವಾಗಿದ್ದು ಪ್ರತಿಯೊಂದು ಪ್ರಕಾರಗಳು ಅಪ್ಪಟ ಜಾನಪದ ಸೊಗಡು ಹೊಂದಿದೆ. ಡಮಾಮಿ,ಪುಗಡಿ, ಇನ್ನಿತರ ಗ್ರಾಮೀಣ ಮತ್ತು  ತಮ್ಮದೆ ಬುಡಕಟ್ಟು ಸಂಪ್ರದಾಯದ ತಳಹದಿಯ ಮೇಲೆ ಈ ಸಂಘಟನೆ ಮುಂದುವರೆಯುತ್ತಿದೆ.


ಸದ್ಯ ದೇವರ ಕಲ್ಲಹಳ್ಳಿಯಲ್ಲಿ ಸಿದ್ದಿ ಟ್ರಸ್ಟ್ ಅಡಿಯಲ್ಲಿ  ವಿಭಿನ್ನ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ತಮ್ಮ ಸಮುದಾಯದ ವಿಶೇಷತೆಯನ್ನು ಜಗತ್ತಿಗೆ ಪಸರಿಸುತ್ತಿದೆ. ಸಂಘದ ಹಿರಿಯರು ಮತ್ತು ಅಧ್ಯಕ್ಷರಾಗಿರುವ ಪರಶುರಾಮ ಗಿರಿಗೋಳಲಿ ಸಿದ್ದಿ ಅವರಿಗೆ ಕೊಂಕಣಿ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಲಭಿಸಿರುವದು ಸಂಘಟನೆಗೊಂದು ಹೆಮ್ಮೆಯ ಸಂಗತಿ. ಇದೇ ಸಮುದಾಯದಿಂದ ಪ್ರಚಲಿತಕ್ಕೆ ಬಂದ ಗಿರಿಜಾ ಸಿದ್ದಿ,ಡಾ,ಗೀತಾ ಸಿದ್ದಿ, ರೇಣುಕಾ ಸಿದ್ದಿ ಹಾಗು ಚಿತ್ರ ರಂಗದಲ್ಲಿ ಹೆಸರಾದ‌ ಪ್ರಶಾಂತ ಸಿದ್ದಿ ದ್ರಾಕ್ಷಾಯಿಣಿ ಸಿದ್ದಿ ಸಮುದಾಯದಲ್ಲಿನ ಕಲಾ ಸತ್ವಕ್ಕೆ ನಿದರ್ಶನರಾಗಿದ್ದಾರೆ


2006 ರಲ್ಲಿ ಕರ್ನಾಟಕ ರಂಗಭೂಮಿ ಕ್ರಿಯಾಶೀಲ ನಿರ್ದೇಶಕ  ಎಂದೇ ಖ್ಯಾತಿ ಪಡೆದ ಚನ್ನಕೇಶವ ಅವರು  ಸಿದ್ದಿ ಸಮುದಾಯದವರಿಗಾಗಿ ಟ್ರಸ್ಟ್ ಸ್ಥಾಪಿಸಿ ಅದರ ಅಡಿಯಲ್ಲಿ ಕುಣಿಯೋಣು ಬಾರ ಎಂಬ ಮಕ್ಕಳ ನಾಟಕ ಶಿಭಿರ, ಸಿದ್ದಿ ರಂಗ ಶಿಭಿರ, ಮಾಡುತ್ತಲೆ ಅನೇಕ ಯುವ ಪ್ರತಿಭೆಗಳನ್ನು ಮುನ್ನೆಲೆಗೆ ತಂದಿದ್ದರು ಅವರ ಅಗಲಿಕೆ ನಂತರ ತಮ್ಮ ಪ್ರಯತ್ನಗಳು ನಿರಂತರವಾಗಿ ಸಾಗಿಸುತ್ತ ಅವರ ಆಶಯಗಳನ್ನು ನೆರವೇರಿಸುವುದರೊಂದಿಗೆ ಹೊಸ ದಿಕ್ಕಿನೆಡೆಗೆ ಬುಡಕಟ್ಟು ಕಲೆಯನ್ನು ಜಗತ್ತಿಗೆ ಪರಿಚಯಿಸುವ ಕಾರ್ಯ ವಾಗುತ್ತಿದೆ.


ಕುಣಿಯೋಣು ಬಾರ ಎಂಬ ಮಕ್ಕಳ ನಾಟಕ ಶಿಭಿರ ಪ್ರತಿ ವರ್ಷ ಏಪ್ರಿಲ್ ತಿಂಗಳಲ್ಲಿ ನಡೆಸುತ್ತಾ  ಹಿಡಿದುಬಂದಿದ್ದು ಉತ್ತಮ ಫಲಿತಾಂಶ ಬರುತ್ತಿದೆ. ಆಟ,ಪಾಠ,ನೃತ್ಯ, ಹಾಡುಗಾರಿಕೆ,ಮಾತುಗಾರಿಕೆ ಮುಂತಾದ ಕಲೆಗಳನ್ನು ಕರಗತ ಮಾಡಿಸಲಾಗುತ್ತದೆ. ಈ ಶಿಭಿರದಲ್ಲಿ ಎಂಟು ವರ್ಷದ ಶಾಲಾ ಮಕ್ಕಳಿಂದ ಹಿಡಿದು ಶಾಲೆಬಿಟ್ಟ ದೊಡ್ಡ ಮಕ್ಕಳಿಗು ಹೇಳಿಕೊಡಲಾಗುತ್ತಿದೆ. ಶಿಭಿರದಲ್ಲಿ ಕೇವಲ ನಾಟಕ ಮಾತ್ರವಲ್ಲದೆ, ಡಮಾಮಿ ನೃತ್ಯ, ಪುಗಡಿ, ಹಾಡು, ಹಸೆ ಚಿತ್ರಕಲೆ, ಮುಖವಾಡ ತಯಾರಿಕೆ ಮುಂತಾದ ಕಲೆಗಳ ಬಗ್ಗೆ ತಿಳಿಸಿ ಕೊಡಲಾಗುತ್ತದೆ.


ವಿಶೇಷ ಎಂದರೆ ಈ ಶಿಭಿರದಲ್ಲಿ ಭಾಗವಹಿಸಿದ 3 ವಿದ್ಯಾರ್ಥಿಗಳು ಹತ್ತನೆ ತರಗತಿ ಪರೀಕ್ಷೆಯಲ್ಲಿ ಡಿಸ್ಟೀಂಕ್ಷನ್ ಗಳಿಸುವ ಮೂಲಕ ಸಿದ್ದಿ ಟ್ರಸ್ಟ್ ಸ.ಘಟನೆಗೆ ಮತ್ತು ಶಿಭಿರಕ್ಕೆ ಹೆಮ್ಮ ತಂದಿದ್ದಾರೆ.


ಕಿರಣ್ ನಾಯ್ಕ್, ಗೋಪಾಲಕೃಷ್ಣ ದೇಶಪಾಂಡೆ, ರಾಮ ಶಿವಮೊಗ್ಗ, ಹೆಗ್ಗೋಡಿನ ಫಣಿಯಮ್ಮ, ಖ್ಯಾತ ಪರಿಸರ ತಜ್ಞ ದಿನೇಶ್ ಹೊಳ್ಳಾ, ಅಮೇರಿಕಾದ ಕ್ಯಾಥಿ ಫರ್ಕಿನ್ಸ್, ಡ್ಯಾನಿಯಲ್ ಶಿಭಿರದ ಮಕ್ಕಳೊಂದಿಗೆ ಬೆರೆತು ತೊಡಗಿಕೊಂಡಿದ್ದಾರೆ.
ಶಿಭಿರದ ಮಕ್ಕಳು ಜಾನಪದ ನೃತ್ಯ, ಗೀತೆ,ಅಭಿನಯದ .ಊಲಕ ರಾಷ್ಟ್ರಮಟ್ಟದಲ್ಲಿ ಗುರುತಿಸಿಕಡಿರುವುದು ಶಿಭಿರದ ಮಹತ್ವ ಸಾರುತ್ತದೆ. ಇಷ್ಟೆಲ್ಲಾ ವಿಶೇಷವಾದ ಶಿಭಿರ ಏ,10 ರಿಂದ ಪ್ರಾರಂಭವಾಗಿದ್ದು ಮೇ 4 ರವರೆಗೆ ನಡೆಯಲಿದೆ. ಇದು ಅತ್ಯಂತ ಹೆಚ್ಚಿನ ಆರ್ಥಿಕ ಹೊರೆ ಇರುವುದರಿಂದ ಸಹೃದಯ ಕಲಾ ಪ್ರೋತ್ಸಾಹಕರು ಆರ್ಥಿಕ ಸಹಾಯ ನೀಡಬೇಕೆಂದು ಸಂಘಟನೆ ಮನವಿ ಮಾಡುತ್ತಿದೆ. ಬರುವ ದಿನಗಳಲ್ಲಿ ರಂಗಭೂಮಿಯೊಂದಿಗೆ ಸಿದ್ದಿ ಸಮುದಾಯದ ಹಾಡುಗಳು, ಗಾದೆಮಾತು, ಕಥೆಗಳು ಮತ್ತು  ಅವರ ಭಾಷೆ ಹಾಗು ಬದುಕಿನ ಕುರಿತು ಸಂಶೋಧನೆಗೆ ಒಳಪಡಿಸುವ ಯೋಜನೆ ಹೊಂದಲಾಗಿದೆ.
ಗಿರೀಶ್ ಪರಶುರಾಮ ಸಿದ್ದಿ
ಅಧ್ಯಕ್ಷ
ಸಿದ್ಧಿ ಟ್ರಸ್ಟ್ (ರಿ)
ದೇವರಕಲ್ಲಳ್ಳಿ, ಯಲ್ಲಾಪುರ

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ತ್ಯಾಗ ಮತ್ತು ಸೇವೆ ಭಾರತಿಯ ಚಿಂತನೆಯ ಅಂತರಂಗ – ಅರುಣ್ ಕುಮಾರ್ ಜಿ..

ಪ್ರತಿಧ್ವನಿ ಯಲ್ಲಾಪುರ:ಭಾರತೀಯ ಜೀವನ ಪದ್ಧತಿಯ ತಿರುಳು ತ್ಯಾಗ ಮತ್ತು ಸೇವೆ. ನಮ್ಮ ಜೀವನ ಅದಕ್ಕಾಗಿ ಮುಡಿಪಿರಬೇಕು ಎಂದು ರಾಷ್ಟ್ರೀಯ ಸವಯಂಸೇವಕ …

Leave a Reply

Your email address will not be published. Required fields are marked *