Breaking News

ಯಲ್ಲಾಪುರದ ಲಯನ್ಸ್ ಕ್ಲಬ್ ವತಿಯಿಂದ ಸಾಮಾಜಿಕ ಕಳಕಳಿಯ ಸೇವಾ ಕಾರ್ಯ

ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ

ಪ್ರತಿಧ್ವನಿ,ಯಲ್ಲಾಪುರ : ಲಯನ್ಸ್ ಕ್ಲಬ್ ಯಲ್ಲಾಪುರ ಸಂಸ್ಥೆಯ ವತಿಯಿಂದ ಸಾಮಾಜಿಕ ಸೇವಾ ಕಾರ್ಯದ ನಿಮಿತ್ತ ಪಟ್ಟಣದ ನಾಯ್ಕನ ಕೆರೆಯ ಬಳಿಯ ಶ್ರೀ ಮಲ್ಲಿಕಾರ್ಜುನ ವೃದ್ದಾಶ್ರಮದ 25 ಅಂಗವಿಕಲ ಮಕ್ಕಳಿಗೆ ಹಾಗೂ 20 ವೃದ್ದರಿಗೆ ಬೆಡ್ ಶೀಟ್ ಹಾಗೂ 50 ಜನರಿಗೆ ಮಧ್ಯಾಹ್ನದ ಊಟವನ್ನ ನೀಡಲಾಯಿತು.


ಈ ಸಂದರ್ಭದಲ್ಲಿ ಲಯನ್ಸ್ ಕ್ಲಬ್ ಯಲ್ಲಾಪುರ ಸಂಸ್ಥೆಯ ಅಧ್ಯಕ್ಷ ಲಯನ್ ಎಸ್ ಎನ್ ನಾಯ್ಕ, ಕಾರ್ಯದರ್ಶಿ ಲಯನ್ ಮಂಜುನಾಥ ನಾಯ್ಕ, ಖಜಾಂಚಿ ಲಯನ್ ಸುರೇಶ ಬೋರ‍್ಕರ್, ಲಯನ್ ಎಸ್ ಎಲ್ ಭಟ್, ಲಯನ್ ಶಾಂತಾರಾಮ ಹೆಗಡೆ, ಲಯನ್ ನಂದನ ಬಾಳಗಿ, ಲಯನ್ ಶೇ಼ಷಗಿರಿ ಪ್ರಭು, ಲಯನ್ ರಮಾಕಾಂತ ನಾಯ್ಕ , ವೃದ್ದಾಶ್ರಮದ ಮೇಲ್ವಿಚಾರಕ ಚಂದ್ರಪ್ಪ ಹಾಗೂ ಇತರ ಸಿಬ್ಬಂದಿಗಳು ಇದ್ದರು.

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ದೇಶದ ಪ್ರಧಾನಿ,ಅರಣ್ಯ ಸಚಿವರು ಮತ್ತು ಸಚಿವಾಲಯದ ಕಾರ್ಯದರ್ಶಿಯವರಿಗೆ ಪಶ್ಚಿಮ ಘಟ್ಟಗಳ ವಿಚಾರದಲ್ಲಿ ಮದ್ಯ ಪ್ರವೇಶಿಸುವಂತೆ ಚಂದ್ರಕಾಂತ ಕೊಚರೇಕರ್ ಮನವಿ

ಪ್ರತಿಧ್ವನಿ ಯಲ್ಲಾಪುರ :  ಕರ್ನಾಟಕದ ಪಶ್ಚಿಮ ಘಟ್ಟ ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶ (ESA) ಎಂದು ಘೋಷಿಸುವ ಸಂಬಂಧ 27-07-2026ರಂದು …

Leave a Reply

Your email address will not be published. Required fields are marked *