Breaking News

“ನೂತನ ಹೈಕೋರ್ಟ್ ಪೀಠ ಸ್ಥಾಪನೆಯಾಗುವದಿದ್ದರೆ ಅದು ಉತ್ತರ ಕನ್ನಡ ಜಿಲ್ಲೆಯಲ್ಲಿಯೇ ಆಗಲಿ – ರಾಮು ನಾಯ್ಕ್.

ಪ್ರತಿಧ್ವನಿ ಯಲ್ಲಾಪುರ : ಉತ್ತರ ಕನ್ನಡ ಜಿಲ್ಲೆಯನ್ನು ಮಂಗಳೂರು ಸಂಚಾರಿ ಪೀಠದ ವ್ಯಾಪ್ತಿಗೆ ಸೇರಿಸಬಾರದೆಂದು ಮೂರು ತಿಂಗಳು ಮೊದಲೇ ಧ್ವನಿ ಎತ್ತಿದ್ದೆವು. ನಾಗರಿಕ ವೇದಿಕೆಯ ಮೂಲಕ ತಹಶೀಲದಾರರಿಂದ ಜಿಲ್ಲಾಧಿಕಾರಿಗಳವರೆಗೆ, ಸ್ಥಳೀಯ ಶಾಸಕರಿಂದ ಜಿಲ್ಲಾ ಉಸ್ತುವಾರಿ ಸಚಿವರವರೆಗೆ, ಸಂಸದರು ಹಾಗೂ ವಕೀಲರ ಸಂಘಗಳಿಗೂ ಅಂಕೆ ಸಂಖ್ಯೆಗಳ ಸಹಿತ ಮನವಿ ಸಲ್ಲಿಸಿದ್ದೆವು. ಮೇ ಕೊನೆಯ ವಾರದಲ್ಲಿ, ಜಿಲ್ಲೆಯ ಆಗು ಹೋಗುಗಳ ಬಗ್ಗೆ ಕಳಕಳಿಯನ್ನು ಹೊಂದಿರುವ, ಜಿಲ್ಲೆಯ ನೂರಕ್ಕೂ ಹೆಚ್ಚು ಚಿಂತಕರಿಗೆ ವಾಟ್ಸಪ್ ಮೂಲಕ ಗಮನ ಸೆಳೆದಿದ್ದೆವು. ಜೂನ್ ತಿಂಗಳಲ್ಲಿ ಕರಪತ್ರ ಹಾಗೂ ಪತ್ರಿಕಾಗೋಷ್ಟಿ ಮೂಲಕ ಜನಸಾಮಾನ್ಯರಿಗೂ ಮಾಹಿತಿ ತಲುಪುವಂತೆ ಮಾಡಲಾಗಿತ್ತು. ಈ ನಮ್ಮ ಅಳಿಲು ಸೇವೆಯ ಜೊತೆಗೆ, ಕಳೆದ ಒಂದೆರಡು ತಿಂಗಳ ಅವಧಿಯಲ್ಲಿ ಜಿಲ್ಲೆಯ ಅನೇಕ ಸಾಧಕರ ಪರಿಶ್ರಮವೂ ಕಾರಣವಾಗಿ, ಸಧ್ಯ ನಮ್ಮ ಜಿಲ್ಲೆಯ ಧ್ವನಿ ರಾಜ್ಯಕ್ಕೆ ತಲುಪಿದೆ. ಜನಪ್ರತಿನಿಧಿಗಳೂ ಎಚ್ಚರಗೊಳ್ಳುವಂತೆ ಮಾಡಿದೆ. ಎಲ್ಲರ ಅಪೇಕ್ಷೆ ಹಾಗೂ ಪ್ರಯತ್ನದ ಫಲವಾಗಿ, “ನೂತನ ಹೈಕೋರ್ಟ್ ಪೀಠ ಸ್ಥಾಪನೆಯಾಗುವದಿದ್ದರೆ ಅದು ಉತ್ತರ ಕನ್ನಡ ಜಿಲ್ಲೆಯಲ್ಲಿಯೇ ಆಗಬೇಕು, ಅಲ್ಲಿಯವರೆಗೆ ನಮ್ಮನ್ನು ಈಗಿರುವಂತೆ ಧಾರವಾಡ ಪೀಠದಲ್ಲಿಯೇ ಮುಂದುವರೆಸಬೇಕು ಎಂದು ಯಲ್ಲಾಪುರ ನಾಗರಿಕ ವೇದಿಕೆ ಅಧ್ಯಕ್ಷ ರಾಮು ನಾಯ್ಕ್ ಆಗ್ರಹಿಸಿದ್ದಾರೆ.

ಅವರು ಗುರುವಾರ ಮಾದ್ಯಮ ಪ್ರಕಟಣೆ ಹೊರಡಿಸಿದ್ದು ಉತ್ತರ ಕನ್ನಡ ಜಿಲ್ಲೆಯನ್ನು ಮಂಗಳೂರು ಪೀಠದ ವ್ಯಾಪ್ತಿಯಲ್ಲಿ ಸೇರಿಸಬಾರದು.” ಎಂಬ ಜಿಲ್ಲೆಯ ಜನಸಾಮಾನ್ಯರ ಕೂಗು ಸರಕಾರದ ಗಮನ ಸೆಳೆಯುತ್ತಿದೆ. ಇಷ್ಟರಿಂದಲೇ ನಮ್ಮ ಬೇಡಿಕೆ ಈಡೇರಲಾರದು. ನಮ್ಮ ಪಕ್ಕದ ಜಿಲ್ಲೆಯಂತೆ ನಾವೂ ಒಟ್ಟಾಗಬೇಕು. ನಮ್ಮಲ್ಲಿರುವ ಇನ್ನಿತರ ಸಂಘಟನೆಗಳು,ಯುವ ಮಂಡಳಿಗಳು, ಸಾರ್ವಜನಿಕರು, ಮಾಧ್ಯಮಗಳು ಒಟ್ಟಿಗೇ ಕೈ ಜೋಡಿಸಿ, ಪಕ್ಷಾತೀತವಾಗಿ ಧ್ವನಿಯೆತ್ತುವ ಅವಶ್ಯಕತೆ ಇದೆ.

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ದೇಶದ ಪ್ರಧಾನಿ,ಅರಣ್ಯ ಸಚಿವರು ಮತ್ತು ಸಚಿವಾಲಯದ ಕಾರ್ಯದರ್ಶಿಯವರಿಗೆ ಪಶ್ಚಿಮ ಘಟ್ಟಗಳ ವಿಚಾರದಲ್ಲಿ ಮದ್ಯ ಪ್ರವೇಶಿಸುವಂತೆ ಚಂದ್ರಕಾಂತ ಕೊಚರೇಕರ್ ಮನವಿ

ಪ್ರತಿಧ್ವನಿ ಯಲ್ಲಾಪುರ :  ಕರ್ನಾಟಕದ ಪಶ್ಚಿಮ ಘಟ್ಟ ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶ (ESA) ಎಂದು ಘೋಷಿಸುವ ಸಂಬಂಧ 27-07-2026ರಂದು …

Leave a Reply

Your email address will not be published. Required fields are marked *