Breaking News

ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ “ತಿಂಗಳ ಕವನ” ಕಾರ್ಮಿಕ ದಿನಾಚರಣೆ

ಪ್ರತಿಧ್ವನಿ,ಯಲ್ಲಾಪುರ : ಸಾಹಿತ್ಯ ಮತ್ತು ಕಲೆ ಒಂದೇ ನಾಣ್ಯದ ಎರಡು ಮುಖಗಳು. ಎರಡಕ್ಕೂ ಶ್ರದ್ಧೆ ಮತ್ತು ಶ್ರಮ ಸಂಸ್ಕೃತಿ ಅತಿ ಮುಖ್ಯವಾಗಿದೆ. ಯಾವುದೇ ಸಾಧನೆಯ ಹಿಂದೆ ಧೀರ್ಘಕಾಲದ ತಪಸ್ಸು, ಮಾಡಿಯೇ ತೀರುತ್ತೇನೆಂಬ ಛಲ ಸಾಧಕನನ್ನಾಗಿಸುತ್ತದೆ. ಪ್ರತಿಯೊಬ್ಬರಲ್ಲೂ ದೇವರ ವರವೆಂಬAತೆ ಏನಾದರೊಂದು ಸಾಧಿಸುವ ಶ್ರೇಷ್ಠ ಗುಣ ಇದ್ದೇ ಇರುತ್ತದೆ. ಅದನ್ನು ಜಾಗೃತಗೊಳಿಸಿ ಸಮಾಜಕ್ಕೆ ಸೇವೆಯ ರೂಪದಲ್ಲಿ ತನಗೆ ಶ್ರಮದ ರೂಪದಲ್ಲಿ ಸಾಧಿಸಿ ಸಾರ್ಥಕಪಡಿಸಿಕೊಳ್ಳಬೇಕಿದೆ ಎಂದು ಖ್ಯಾತ ಕೆತ್ತನೆ ಶಿಲ್ಪಿ ಸಂತೋಷ ಗುಡಿಗಾರ …

Read More »

ಯಲ್ಲಾಪುರದಲ್ಲಿ ಮತ್ತೆ ಕಾಣಿಸಿಕೊಂಡ ಹೆಮ್ಮಾರಿ ಕೊರೊನಾ

ಪ್ರತಿಧ್ವನಿ,ಯಲ್ಲಾಪುರ : ವರ್ಷದ ನಂತರ ಮತ್ತೆ ಓರ್ವ ವ್ಯಕ್ತಿಯಲ್ಲಿ ಕೊರೋನಾ ಸೋಂಕು ದೃಡಪಟ್ಟಿದ್ದು ಯಲ್ಲಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮೇ 10 ರಂದು ನಡೆಯಲಿರುವ ವಿಧಾನಸಭಾ ಚುನಾವಣೆಯ ಹಿನ್ನಲೆಯಲ್ಲಿ ಶಾಂತಿ ಸುವ್ಯವಸ್ಥೆ ಮತ್ತು ಭದ್ರತೆ ಕಲ್ಪಿಸುವ ಸಲುವಾಗಿ ದೇಶದ ವಿವಿದ ರಾಜ್ಯಗಳಿಂದ ಯೋಧರನ್ನು ಚುನಾವಣಾ ಕರ್ತವ್ಯಕ್ಕೆ ನೇಮಿಸಿದ್ದು ರಾಜಸ್ಥಾನದಿಂದ ಬಂದ 34 ವರ್ಷ ಪ್ರಾಯದ ಯುವಕನೋರ್ವನಲ್ಲಿ ಕೋವಿಡ್ ಸೋಂಕು ಕಾಣಿಸಿಕೊಂಡಿದ್ದು ಚಿಕಿತ್ಸೆ ಮುಂದುವರೆಸಲಾಗಿದೆ. ಆರೋಗ್ಯದಲ್ಲಿ ವ್ಯತ್ಯಯವಾದ ಕಾರಣ ಚಿಕಿತ್ಸೆಗಾಗಿ …

Read More »

ಕನ್ನಡ ಸಾಹಿತ್ಯ ಪರಿಷತ್ತಿನ ೧೦೯ ನೆ ಸಂಸ್ಥಾಪನ ದಿನಾಚರಣೆ

ಪ್ರತಿಧ್ವನಿ,ಯಲ್ಲಾಪುರ : ಶತಮಾನಗಳ ಹಿಂದೆ ಅನೇಕ ಮಹನೀಯರ ಪ್ರಯತ್ನದ ಫಲವಾಗಿ ಸ್ಥಾಪನೆಗೊಂಡ ಕನ್ನಡ ಸಾಹಿತ್ಯ ಪರಿಷತ್ ಅನೇಕ ಕನ್ನಡಪರ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸಾಹಿತ್ಯ ಕ್ಷೇತ್ರದ ಕೃಷಿಯನ್ನು ಮುಂದುವರೆಸಿಕೊಂಡು ಬಂದಿದ್ದು ಅದರ ಅಡಿಯಲ್ಲಿ ಪ್ರಕಟಗೊಳ್ಳುತ್ತಿದ್ದ ಅಖಂಡ ಪತ್ರಿಕೆಯು ಕರ್ನಾಟಕದ ಕಲ್ಪನೆಯನ್ನು ನಾಡಿನಲ್ಲಿ ಬಿಂಬಿಸಿತು. ಇದೀಗ ಸಾಹಿತ್ಯ ಪರಿಷತ್ ಕನ್ನಡ ಬೆಳೆಸಿ ಉಳಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ರಾಜ್ಯದಲ್ಲಿ ಕನ್ನಡಕ್ಕೆ ಧಕ್ಕೆ ತರುವಂತಹ ಸವಾಲುಗಳಿದ್ದು ಪರಿಹರಿಸುವತ್ತ ಎಲ್ಲರ ಪ್ರಯತ್ನ ಸಾಗಬೇಕಿದೆ. ಇತ್ತೀಚಿಗೆ ಬಿಡುಗಡೆಗೊಳ್ಳುತ್ತಿರುವ ಕನ್ನಡ …

Read More »

ರಾಜ್ಯದಲ್ಲಿ ಕುಮಾರಸ್ವಾಮಿ ಆಡಳಿತದ ಸುವರ್ಣಕಾಲ ಮತ್ತೆ ಬರಲಿದೆ- ನಾಗೇಶ್ ನಾಯ್ಕ್ ಕಾಗಲ

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ,ಯಲ್ಲಾಪುರ : ರಾಜ್ಯದ ಬಿಜೆಪಿ ಸರ್ಕಾರದ ನಿರಂತರ ಪ್ರಗತಿ ಶೂನ್ಯತೆಗೆ ಬೇಸತ್ತಿರುವ ಜನ ಈ ಬಾರಿ ಬದಲಾವಣೆ ಬಯಸಿದ್ದಾರೆ ರಾಜ್ಯದ ಜನತೆ ಹೆಚ್‌ಡಿ.ಕುಮಾರಸ್ವಾಮಿ ಆಡಳಿತದ ಸುವರ್ಣ ಕಾಲ ಮತ್ತೆ ಬಯಸುತ್ತಿದ್ದಾರೆ ಜಾತ್ಯಾತೀತ ಜನತಾ ದಳ ಮತ್ತೊಮ್ಮೆ ಪೂರ್ಣ ಬಹುಮತದೊಂದಿಗೆ ಎಂದು ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ನಾಗೇಶ್ ನಾಯ್ಕ ಕಾಗಾಲ ಹೇಳಿದರು. ಅವರು ಪಟ್ಟಣದ ಜೆಡಿಎಸ್ ಕಾರ್ಯಾಲಯದಲ್ಲಿ ಮೇ ೪ರಂದು …

Read More »

ಎಂ.ಎಲ್.ಸಿ ಶಾಂತರಾಮ್ ಸಿದ್ದಿ ಹೆಬ್ಬಾರ್ ಪರ ಬಿರುಸಿನ ಪ್ರಚಾರ

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ,ಯಲ್ಲಾಪುರ : ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶಿವರಾಮ ಹೆಬ್ಬಾರರ ಪರವಾಗಿ ವಿಧಾನಸಭಾ ಸದಸ್ಯ ಶಾಂತಾರಾಂ ಸಿದ್ದಿ ತಾಲೂಕಿನ ಹಿತ್ಲಳ್ಳಿಯ ವಿವಿಧ ಭಾಗಗಳಲ್ಲಿ ಮತ ಯಾಚನೆ ಮಾಡಿದರು.ಈ ಸಂದರ್ಭದಲ್ಲಿ ಗ್ರಾ.ಪಂ ಅಧ್ಯಕ್ಷ ಪ್ರಸನ್ನ ಭಟ್ಟ, ಬೂತ್ ಅಧ್ಯಕ್ಷ ರಾಜೇಶ್ ಉಪ್ಪಾರ್ ಪ್ರಮುಖರಾದ ರಾಘವ ಭಟ್ಟ, ವಿಘ್ನೇಶ್ವರ ಹೆಗಡೆ , ನಾಗೇಂದ್ರ ಹೆಗಡೆ ಮತ್ತಿತರರು ಉಪಸ್ಥಿತರಿದ್ದರು.

Read More »

ವಿಜಯ್ ಮಿರಾಶಿ ನೇತೃತ್ವದಲ್ಲಿ ಕಿರವತ್ತಿಯಲ್ಲಿ 2000 ಕ್ಕೂ ಅಧಿಕ ಕಾರ್ಯಕರ್ತರ ಬೃಹತ್ ಸಭೆ ಹೆಬ್ಬಾರ್ ರೋಡ್ ಷೋ

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ, ಯಲ್ಲಪುರ-ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಯಲ್ಲಾಪುರ ತಾಲೂಕಿನ ಕಿರವತ್ತಿಯಲ್ಲಿ ವಿಜಯ್ ಮಿರಾಶಿ ನೇತೃತ್ವದಲ್ಲಿ ಆಯೋಜಿಸಿದ 2000 ಕ್ಕು ಅಧಿಕ ಮತದಾರರು ಕಾರ್ಯಕರ್ತರ ಸಭೆ ನಡೆಸಿ ಮತಯಾಚಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಶಿವರಾಮ ಹೆಬ್ಬಾರ್ ಮಾತನಾಡಿ ಇಷ್ಟೊಂದು ಸಂಖ್ಯೆಯ ಮತದಾರರ ಕಾರ್ಯಕರ್ತರ ಬೆಂಬಲ ಕಂಡು ಸಂತಸವಾಗಿದೆ. ಈ ಭಾಗದಲ್ಲಿರುವ ದನಗರಗೌಳಿ ಸಮುದಾಯದ ಅಭಿವೃದ್ಧಿಗೆ …

Read More »

ಬಿಜೆಪಿ ತತ್ವ ಸಿದ್ದಾಂತ ಮತ್ತು ಸಚಿವ ಹೆಬ್ಬಾರ್ ಅವರನ್ನು ಒಪ್ಪಿ ಕಂಪ್ಲಿ ಪಂಚಾಯತ್ ವ್ಯಾಪ್ತಿ ಕಾಂಗ್ರೆಸ್‌ ಕೆಲವು ಕಾರ್ಯಕರ್ತರು ಬಿಜೆಪಿ ಸೇರ್ಪಡೆ

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ,ಯಲ್ಲಾಪುರ : ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಅವರ ಅಭಿವೃದ್ಧಿಪರ ಕಾರ್ಯಕ್ರಮ ಹಾಗೂ ಬಿಜೆಪಿಯ ತತ್ವ ಸಿದ್ದಾಂತಗಳನ್ನು ಮೆಚ್ಚಿ ತಾಲೂಕಿನ ಕಂಪ್ಲಿ ಗ್ರಾಮ ಪಂಚಾಯತ ವ್ಯಾಪ್ತಿಯ ಜನತಾ ಕಾಲೋನಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿಗೆ ಸೇರ್ಪಡೆಯಾದರು.ಕಾಂಗ್ರೆಸ್ ತೊರೆದ ಕಾರ್ಯಕರ್ತರಿಗೆ ಸಚಿವರು ಭಾರತೀಯ ಜನತಾ ಪಕ್ಷದ ಶಾಲು ಹಾಕಿ ಪಕ್ಷಕ್ಕೆ ಸ್ವಾಗತಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, ಕ್ಷೇತ್ರದಾದ್ಯಂತ ಇತರೆ ಪಕ್ಷದ ಕಾರ್ಯಕರ್ತರು ಭಾರತೀಯ ಜನತಾ …

Read More »

ಆರೋಪದಲ್ಲಿ ಹುರುಳಿಲ್ಲ ಹೆಬ್ಬಾರ್ ಜನಪ್ರಿಯತೆ ತಡೆಯಲು ಸಾದ್ಯವಿಲ್ಲ ಹಕ್ಕು ಪತ್ರ ವಿತರಣೆ ಕ್ರಮಬದ್ದವಾಗಿದೆ – ಜಿ.ಎನ್.ಜಿ….

ಪ್ರತಿಧ್ವನಿ,ಯಲ್ಲಾಪುರ : ಸಮಾಜದಲ್ಲಿ ಕ್ರಿಮಿನಲ್ ಪಟ್ಟ ಕಟ್ಟಿಕೊಂಡು ಅಪರಾಧ ಹಿನ್ನೆಲೆಯುಳ್ಳ ಕೆಲವು ಕುಚೋದ್ಯ ವ್ಯಕ್ತಿಗಳ ಆರೋಪಿಸುತ್ತಿರುವುದು ಸತ್ಯಕ್ಕೆ ದೂರವಾಗಿದೆ. ಸೋಲಿನ ಹತಾಶೆ ಕಾಂಗ್ರೆಸ್ ಕುಮ್ಮಕ್ಕಿನಿಂದ ಆದಾರರಹಿತ ಆರೋಪ ಮಾಡಲಾಗುತ್ತಿದೆ.ಬಡ ಮಧ್ಯಮ ವರ್ಗದವರ ಮನೆದೇವರಂತೆ ಸಚಿವ ಹೆಬ್ಬಾರ್ ಅವರನ್ನು ಕ್ಷೇತ್ರದ ಜನತೆ ಅಭಿಮಾನದಿಂದ ಕಾಣುತ್ತಿದ್ದು ಚುನಾವಣೆಯಲ್ಲಿ ಪ್ರಚಂಡ ಗೆಲುವು ಸಾಧಿಸಲಿದ್ದಾರೆಂಬ ಮಾಹಿತಿ ವಿರೋಧಿ ಪಾಳಯಕ್ಕೆ ಲಭಿಸಿದ ಹಿನ್ನೆಲೆಯಲ್ಲಿ ಇಲ್ಲಸಲ್ಲದ ಆರೋಪ ಮಾಡಿ ಜನರಲ್ಲಿ ಗೊಂದಲ ಸೃಷ್ಟಿಸಲು ಹೊರಟಿದ್ದಾರೆ ಕೆಲವು ಸಮಾಜ ಘಾತುಕ …

Read More »

ಶತಾಯುಷಿ ಹಾಗು ಹಿರಿಯರು ಮನೆಯಿಂದಲೇ ಮತಚಲಾಯಿಸಿ ಪ್ರಜಾಪ್ರಭುತ್ವದ ಬದ್ದತೆ ತೋರಿದ್ದಾರೆ

ಯಲ್ಲಾಪುರ : ಕಳೆದೆರಡು ದಿನಗಳ ಹಿಂದೆ ಮನೆಯಿಂದಲೇ ಮತದಾನ ಮಾಡಿದ್ದ ತಾಲೂಕಿನ ಹಿತ್ಲಳ್ಳಿ ಮತದಾನ ಕೇಂದ್ರದ ವ್ಯಾಪ್ತಿಯ ಗೋಪಾಲಕೃಷ್ಣ ಹೆಗಡೆಯವರ 104 ವರ್ಷದ ಸುಬ್ಬಿ ಹೆಗಡೆ ಹಾಗೂ ಇವರ ಸಹೋದರಿ 94 ವರ್ಷದ ಗೌರಿ ಹೆಗಡೆ ಇವರ ಇನ್ನೋರ್ವ ಸಹೋದರಿ 92 ವರ್ಷದ ಭಟ್ ಸಾಕಿನ್ ಕಾನಗೊಡ್ ರವರು ತಮ್ಮ ಮಗನ ಸಹಾಯದಿಂದ ಮೇ 3 ರಂದು ರಂದು ಮತಚಲಾಯಿಸಿದರು.ಈ ಸಂದರ್ಭದಲ್ಲಿ ಸೆಕ್ಟರ್ -11 ರ ಅಧಿಕಾರಿ ಎನ್.ಆರ್ ಹೆಗಡೆ …

Read More »

ಬೈಕ್ ಅಪಘಾತ ; ಜರ್ಮನ್ ದೇಶದ ಪ್ರವಾಸಿಗನ ಸಾವು

ಪ್ರತಿಧ್ವನಿ,ಯಲ್ಲಾಪುರ : ಪಟ್ಟಣದ ಹುಬ್ಬಳ್ಳಿ ರಸ್ತೆಯ ಹೊರವಲಯದಲ್ಲಿ ಬೈಕ್ ಚಲಾಯಿಸುತ್ತಿದ್ದ ಜರ್ಮನ್ ದೇಶದ ಪ್ರವಾಸಿಗನ ಚಾಲನೆಯ ನಿಯಂತ್ರಣ ತಪ್ಪಿ ತಗ್ಗಿನಲಿದ್ದ ಮರಕ್ಕೆ ಡಿಕ್ಕಿ ಹೊಡೆದು ಗಂಭಿರ ಸ್ವರೂಪದ ಗಾಯಗಳಾಗಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ ಘಟನೆ ನಡೆದಿದೆ. ಕ್ರಿಸ್ಟಿಯನ್ (43) ಎಂ¨ ಜರ್ಮನ್ ದೇಶದ ಪ್ರಜೆಯು ಗುಜರಾತ್ ನೋಂದಣಿಯ ಮೋಟಾರ್‌ಬೈಕಿನಲ್ಲಿ ಯಲ್ಲಾಪುರ ಕಡೆಯಿಂದ ಹುಬ್ಬಳ್ಳಿ ಕಡೆಗೆ ಸವಾರಿ ಹೊರಟವನು ಪಟ್ಟಣದ ನವದುರ್ಗ ಗ್ಯಾರೇಜ್ ಪಕ್ಕದ ತಗ್ಗಿನಲ್ಲಿ ಮರವೊಂದಕ್ಕೆ ಡಿಕ್ಕಿ ಹೊಡೆದು ತನ್ನ …

Read More »