Breaking News

ಯಲ್ಲಾಪುರ ತಾಲೂಕಿನ ಆನಗೋಡು ನಲ್ಲಿದೆ ಪುರಾತನ ಪ್ರಸಿದ್ಧ ಶಕ್ತಿ ಕ್ಷೇತ್ರ “ಶ್ರೀ ಗೋಪಾಲಕೃಷ್ಣ ದೇವಸ್ಥಾನ”


ಕೇಬಲ್ ನಾಗೇಶ್, ಯಲ್ಲಾಪುರ
ಪ್ರತಿಧ್ವನಿ ಯಲ್ಲಾಪುರ : ತಾಲ್ಲೂಕಿನ ಆನಗೋಡಿನಲ್ಲಿ ನೆಲೆ ನಿಂತ ಶ್ರೀ ಗೋಪಾಲಕೃಷ್ಣ ಸನ್ನಿಧಿ 800 ವರ್ಷ ಪುರಾತನ ಕದಂಬರ ಕಾಲದ ಇತಿಹಾಸವುಳ್ಳ ಶಕ್ತಿ ಕ್ಷೇತ್ರವಾಗಿದೆ. ಬೇಡಿ ಬಂದ ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುತ್ತಾ, ರೋಗ ರುಜಿನಗಳನ್ನು ಪರಿಹರಿಸುತ್ತಾ ಪಾವನ ಕ್ಷೇತ್ರವಾಗಿದೆ.

ಯಲ್ಲಾಪುರ ತಾಲೂಕಿನ ಆನಗೋಡು ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಮಹತ್ವ ಮತ್ತು ಮಾಹಿತಿ ವಿಡಿಯೋ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ


ಯಲ್ಲಾಪುರ ಪಟ್ಟಣದಿಂದ ಸರಿಸುಮಾರು 8 ಕಿಲೋಮೀಟರ್ ಅಂಂತರವಿರುವ  ಆನಗೋಡು ಶ್ರೀ ಗೋಪಾಲಕೃಷ್ಣ ದೇವಸ್ಥಾನ ಹಚ್ಚಹಸಿರಿನ ಪ್ರಕೃತಿ ಮಡಿಲಲ್ಲಿ‌ ಕಂಗೊಳಿಸುತ್ತಿದೆ. ಬಡ ಮದ್ಯಮವರ್ಗದವರ ವಿಶೇಷ ಧಾರ್ಮಿಕ ಸಂಸ್ಕಾರಗಳು,ಮದುವೆ,ಮುಂಜಿ ಇನ್ನಿತರ ಸಾತ್ವಿಕ ಕಾರ್ಯಕ್ರಮಗಳಿಗಾಗಿ ತಕ್ಕಷ್ಟು ಮಟ್ಟಿನ ಸುದರ್ಶನ ಸಭಾ ಭವನವಿದೆ. ಆವರಣದಲ್ಲಿನ ವೀರಭದ್ರ ಮತ್ತು ಮಾರುತಿ ದೇವರ ಪುನಪ್ರತಿಷ್ಟಾಪನೆ ಜರುಗುತ್ತಿದೆ.
ಕಠಿಣ ದೀರ್ಘ ಕಾಲದ ತಪ್ಪಸ್ಸಿನೊಂದಿಗೆ ಸಾಧನೆಗೈದ ಸಾಧಕರ ಸಮಾದಿಯು ಇಲ್ಲಿದೆ. ಕಾಲಕಾಲಕ್ಕೆ ಮಳೆ,ಬೆಳೆ,ರೋಗ ರುಜಿನಗಳ ಪರಿಹಾರ ಎಲ್ಲವು ಭಗವಂತನಾದ ಗೋಪಾಲಕೃಷ್ಣನ ಸನ್ನಿದಿಯಲ್ಲಿ ನೆರವೇರುತ್ತಿದೆ.


ಧರ್ಮಕ್ಷೇತ್ರಗಳಿಗೆ ಛತ್ರಛಾಯೆಯಾಗಿ ನೆಲೆ ನಿಂತ ಪುಣ್ಯಕ್ಷೇತ್ರ ಧರ್ಮಸ್ಥಳ ಶ್ರೀ ಮಂಜುನಾಥೇಶ್ವರ ಸನ್ನಿದಿಯ ಪೂಜ್ಯ ಖಾವಂದರಾದ ಶ್ರೀ ವೀರೇಂದ್ರ ಹೆಗ್ಗಡೆಯವರ ಸಲಹೆ,ಸಹಕಾರ,ಮಾರ್ಗದರ್ಶನ ದೇವಸ್ಥಾನ ಅಭಿವೃದ್ಧಿ ಪಥಕ್ಕೆ ದಾರಿದೀಪವಾಗಿದೆ.


ಸ್ವರ್ಣವಲ್ಲಿ ಶ್ರೀ ಗಂಗಾಧರೇಂದ್ರ ಸರಸ್ವತಿ ಮಹಾಸ್ವಾಮಿಗಳು ಮತ್ತು ಕಿರಿಯ ಸ್ವಾಮಿಗಳ ಅನುಗ್ರಹವಿದ್ದು ಆನಗೋಡು ಶ್ರೀ ಗೋಪಾಲಕೃಷ್ಣ ಸಾನಿದ್ಯ ಪ್ರಖ್ಯಾತಿ ಹೊಂದಲಿದೆ.


ಇಂತಹ ಪುಣ್ಯ ಕ್ಷೇತ್ರದ ಅಭಿವೃದ್ಧಿಗೆ ಪಣತೊಟ್ಟ ಮೊಕ್ತೇಸರ ರಾದ ಗಣಪತಿ ಮಾನಿಗದ್ದೆ ಮತ್ತು ದೇವದುರ್ಲಬ ಪದಾಧಿಕಾರಿ ಆಡಳಿತ ಮಂಡಳಿಯು ದೇಗುಲದ ಏಳಿಗೆಗೆ ಶ್ರಮಿಸುತ್ತಿದೆ.


ಸದ್ಯ ಪರಮ ಪೂಜ್ಯರ ಮತ್ತು ಭಗವಂತನ ಆಶಿರ್ವಾದದಿಂದ ಏಪ್ರಿಲ್ 8 ರಿಂದ 11 ರ ವರೆಗೆ ” ಅಷ್ಟಬಂಧ ಮಹೋತ್ಸವ ” ಶ್ರದ್ದಾ ಭಕ್ತಿಯಿಂದ ಜರುಗುತ್ತಿದ್ದು ನಾಡಿನ ಸಮಸ್ತರನ್ನು ಕೈ ಬೀಸಿ ತನ್ನತ್ತ ಕರೆಯುತ್ತಿದೆ.


ದೇಗುಲದ ಅಭಿವೃದ್ಧಿ ಕಾರ್ಯಗಳು ಸಮರೋಪಾದಿಯಲ್ಲಿ ಜರುಗುತ್ತಿದ್ದು ಧಾರ್ಮಿಕ ಸೇವಾ ಕಾರ್ಯಕ್ಕೆ ಸಹಕರಿಸುವವರು ದೇಗುಲದ ಪ್ರಮುಖರನ್ನು ಸಂಪರ್ಕಿಸಬಹುದಾಗಿದೆ.

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ಬಿಜೆಪಿ ವತಿಯಿಂದ ಸಂವಿಧಾನ ಶಿಲ್ಪಿ ಡಾ,ಬಾಬಾ ಸಾಹೇಬ್ ಅಂಬೇಡ್ಕರ್ ಜಯಂತಿ ಆಚರಣೆ..

ಪ್ರತಿಧ್ವನಿ ಯಲ್ಲಾಪುರ: ಭಾರತದ ಸಂವಿಧಾನ ಶಿಲ್ಪಿ,ಸಾಮಾಜಿಕ ನ್ಯಾಯದ ಹರಿಕಾರರು,ಶೋಷಿತರ ದ್ವನಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಜಯಂತಿ ನಿಮಿತ್ತ ಭಾರತೀಯ ಜನತಾ ಪಾರ್ಟಿ …

Leave a Reply

Your email address will not be published. Required fields are marked *