Breaking News

2025 ನೆ ಸಾಲಿನ ಯಲ್ಲಾಪುರ ಗಣಪತಿಗಳ ದಿವ್ಯ ದರ್ಶನ

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ


ಯಲ್ಲಾಪುರ : ಪಟ್ಟಣದಲ್ಲಿ 20 ಕ್ಕು ಅಧಿಕ ಕಡೆಗಳಲ್ಲಿ ಚೌತಿ ಗಣಪನ ಪ್ರತಿಷ್ಟಾಪನೆಯಾಗಿದೆ.

https://youtu.be/EQW8cvAI1H0?si=tSh0buDDpyF-Z98s
✡️ ದೇಶ ವಿದೇಶದಲ್ಲಿರುವ ಯಲ್ಲಾಪುರದವರಿಗೆ ಕುಳಿತಲ್ಲೆ ತನ್ನೂರಿನ ಗಣಪತಿಗಳ ನೋಡುವ ಸೌಭಾಗ್ಯ
🛑 ಪ್ರತಿಧ್ವನಿ ಯೂಟ್ಯೂಬ್ ಚಾನಲ್ಗೆ ಸಬ್ ಸ್ಕ್ರೈಬ್ ಆಗಿ ಬೆಲ್ ಬಟನ್ ಒತ್ತಿ ಕಮೆಂಟ್ ಮಾಡಿ ಶೇರ್ ಮಾಡಿ.

ವೀಡಿಯೋ ವೀಕ್ಷಣೆಗೆ ☝ಕ್ಲಿಕ್ ಮಾಡಿ ಸಂಪೂರ್ಣ ವೀಕ್ಷಸಿ ಧನ್ಯರಾಗಿ


ಅತ್ಯಂತ ಹಳೆಯ ಸಮಿತಿಗಳಲ್ಲಿ ಒಂದಾದ ತಿಲಕ್ ಚೌಕ್ ನ ಪ್ರತಿಷ್ಠಿತ ಸಾರ್ವಜನಿಕ ಗಜಾನನೋತ್ಸವ ಸಮಿತಿ ಆವಾರದಲ್ಲಿ ಸುಂದರವಾದ ಬಂಗಾರದ ಅರಮನೆಯಲ್ಲಿ ವಿರಾಜಮಾನನಾದ ಗಣಪತಿಯ ಸೌಂದರ್ಯ ನೋಡುಗರನ್ನ ತನ್ನತ್ತ ಸೆಳೆಯುತ್ತಿದೆ‌. ಅಳಿವಿನಂಚಿಗೆ ತಲುಪದಂತೆ ಹೆಚ್ಚಿನ ಮುತುವರ್ಜಿ ವಹಿಸುತ್ತಿರುವ ಹಾನ್೯ಬಿಲ್ ಮರಿಗಳಿಗೆ ಆಹಾರ ಉಣಿಸುವ ರೀತಿ ಅಲಂಕರಿಸಿರುವ ಅರಣ್ಯ ಇಲಾಖೆಯ ಪರಿಸರ ಸ್ನೇಹಿ ಗಣಪತಿ ಜಾಗೃತಿಯ ಸಂದೇಶ ಸಾರುತ್ತಿರುವುದು ವಿಶೇಷವಾಗಿದೆ. ಕಾಳಮ್ಮ ನಗರದಲ್ಲಿ ಶಿಲ್ಪ ಕಲಾಕೃತಿಗಳ ವೈಭವದೊಳಗೆ ಗಣೇಶನ ನೋಡುವುದೆ ಸ್ವರ್ಗದಂತಿದೆ, ಅಂಬೇಡ್ಕರ್ ಗಲ್ಲಿ ಶ್ವೇತ ಗಣಪ,ಮಂಜುನಾಥ ನಗರದ ಸಿಂಹಾಸನರೂಡ ಗಣಪ, ಹೆಸ್ಕಾಂ ಕಚೇರಿಯ ಕಾಮಧೇನು ಗಣಪ, ತಟಗಾರ ಕ್ರಾಸ್ ಅರಮನೆ ಗಣಪ, ವಿನಾಯಕ ನಗರದ ನಂಧಿ ವಾಹನ ಗಣಪ, ಕಟ್ಟಿಗೆ ಡಿಪೊ,ಬಸ್ ನಿಲ್ದಾಣ, ಪಟ್ಟಣಪಂಚಾಯತ,ನೂತನನಗೆ,ಪೊಲೀಸ್ ವಸತಿಗೃಹ ಸಂಕೀರ್ಣ, ನಾಯ್ಕನಕೆರೆ, ಜಿ.ಪಂ ನಲ್ಲಿ ಶ್ರೀಧರ ಸಂಜೀವ ಕೆರೆಕರ ಬಾಲಕನ ಕೈಲಿ ಅರಳಿದ ಮುದ್ದುಗಣಪ,ಕೊಂಡೆಮನೆ ರಸ್ತೆಯ ಗಣಪ ಇನ್ನು ಹಲವು ಗಣಪತಿಗಳ ನೋಡುವುದೆ ಸೌಭಾಗ್ಯದಂತಿದೆ.

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ತೊಗಲು ಹರಳಯ್ಯ ಟ್ರಸ್ಟ (ರಿ) ವತಿಯಿಂದ ಕುಲಕಸುಬು ಜಾಗದ ಸ್ವಚ್ಚತೆ – ಕಚೇರಿ ಉದ್ಘಾಟನೆ

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಯಲ್ಲಾಪುರ: ಕುಟುಂಬದ ಹಿರಿಯರು ತಲ ತಲಾಂತರದಿಂದ ಕುಲಕಸಬಾದ ತೊಗಲು …

Leave a Reply

Your email address will not be published. Required fields are marked *