
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ………
ಪ್ರತಿಧ್ವನಿ,ಯಲ್ಲಾಪುರ : ಪಟ್ಟಣದ ವಿವಿದೆಡೆಯಲ್ಲಿ ಶ್ರೀರಾಮನವಮಿ ಅತ್ಯಂತ ಶ್ರದ್ದಾ ಭಕ್ತಿಯಿಂದ ಜರುಗಿತು.
ಕಾಳಮ್ಮನಗರದ ಸಾಯಿನಾಥ ಮಂದಿರದಲ್ಲಿ ಸಾಯಿನಾಥ ಮಂದಿರದ ಪ್ರಧಾನ ಅರ್ಚಕ ಪ್ರಸಾದ ಭಟ್ಟರ ನೇತೃತ್ವದಲ್ಲಿ ಸತತ ಆರು ದಿನಗಳಿಂದ ವಿಶೇಷ ಪೂಜಾ ವಿಧಿಗಳು ನಡೆಯಿತು. ಪ್ರತಿನಿತ್ಯ ಸಹಸ್ರಾರು ದೀಪಗಳನ್ನು ಹಚ್ಚಿ ಸಾಯಿನಾಥನನ್ನು ಭಜಿಸಿ ಭಕ್ತರು ಸಂತುಷ್ಟರಾದರು.

ಪಟ್ಟಣದ ತಿಲಕ್ ಚೌಕ್ ನಲ್ಲಿ ಪ್ರತಿವರ್ಷದಂತೆ ಈ ವರ್ಷವು ಶ್ರೀರಾಮನವಮಿಯನ್ನು ತಿಲಕ್ ಪರಿವಾರ ಮತ್ತು ಬಳಗದ ವತಿಯಿಂದ ಆಚರಿಸಲಾಯಿತು. ಭಕ್ತರಿಗೆ ಪಾನಕ ಪ್ರಸಾದ ವಿತರಿಸಲಾಯಿತು.




Prathidvani Yellapura