
ಪ್ರತಿಧ್ವನಿ ಯಲ್ಲಾಪುರ :ದೇಹದಲ್ಲಿ ಸರ್ವ ಅಂಗಗಳು ಪ್ರಾಮುಖ್ಯವೆ ಅದರಲ್ಲೂ ಕಣ್ಣಿಗೆ ಹೆಚ್ಚಿನ ಪ್ರಾಧಾನ್ಯತೆ ಇದೆ. ಜಗತ್ತನ್ನು ದರ್ಶಿಸುವುದು ಕಣ್ಣಿನಿಂದಲೆ ಅಂತಹ ಕಣ್ಣಿನ ಬಗ್ಗೆ ಪ್ರತಿಯೊಬ್ಬರು ಜಾಗ್ರತೆ ವಹಿಸಿ ಕಾಲಕಾಲಕ್ಕೆ ತಪಾಸಣೆಯೊಂದಿಗೆ ಹಾರೈಕೆ ಅತಿ ಮುಖ್ಯ ವಾಗಿದೆ ಇಂತಹ ಸಾರ್ಥಕ ಸೇವಾ ಈ ಭಾಗದ ಜನರಿಗೆ ಅನುಕೂಲ ಆಗಿದೆ,ಕಣ್ಣಿನ ಸಮಸ್ಯೆಗೆ ದೂರದ ಮಹಾನಗರ ಗಳಿಗೆ ತಲುಪುವುದು ಅಸಾಧ್ಯ ವಾಗಿತ್ತು ಊರಿನಲ್ಲಿ ಯೇ ಕಣ್ಣಿನ ತಪಾಸಣೆ ಮಾಡಿದ್ದಕ್ಕೆ ಸಂಘಟಕರಿಗೆ ಧನ್ಯವಾದ ಅರ್ಪಿಸುವೆ ಎಂದು ಯಲ್ಲಾಪುರ ತಾಲೂಕು ಪಂಚಾಯತ ಮಾಜಿ ಅಧ್ಯಕ್ಷ ಸ್ಥಳೀಯ ಪ್ರಮುಖ ಸಾಮಾಜಿಕ ಕಾರ್ಯಕರ್ತ ರವಿ ಕೈಟ್ಕರ್ ಸಭೆಯನುದ್ದೇಶಿಸಿ ಹೇಳಿದರು.

ಅವರು ಬುಧವಾರ ತಾಲೂಕಿನ ಕೊಡಸೆಯಲ್ಲಿ ಒನ್ ಲೈಟ್ ಎಸ್ಸಿಲಾರ್ ಲಕ್ಸೊಟಿಕಾ ಫೌಂಡೇಶನ್, ಸ್ಪಂದನ ಸೇವಾ ಟ್ರಸ್ಟ್ ಹಡಿನಬಾಳ ಹೊನ್ನಾವರ,ವಿದ್ಯಾ ಗಜಾನನೋತ್ಸವ ಸಮಿತಿ ಕೊಡಸೆ,ನಂದನ ಪ್ರಾಥಮಿಕ ಕ್ರಷಿ ಪತ್ತಿನ ಸೇವಾ ಸಹಕಾರಿ ಸಂಘ ಕಣ್ಣೀಗೇರಿ, ಗ್ರಾಂ ಪಂ ಕಣ್ಣೀಗೇರಿ,ಊರ ನಾಗರಿಕರು ಕೊಡಸೆ ಯಲ್ಲಾಪುರ ಇವರ ಸಂಯುಕ್ತ ಆಶ್ರಯ ದಲ್ಲಿ ಕೊಡಸೆಯ ವಿದ್ಯಾ ಗಜಾನನೋತ್ಸವ ಸಭಾ ಭವನದಲ್ಲಿ ನಡೆದ ಉಚಿತ ಕಣ್ಣು ತಪಾಸಣಾ ಶಿಬಿರದಲ್ಲಿ ಮಾತನಾಡಿದರು.

ಕಾರ್ಯಕ್ರಮವನ್ನು ಸ್ಪಂದನ ಸೇವಾ ಸಂಸ್ಥೆಯ ಗಣಪತಿ ಹೆಗಡೆ ಉದ್ಘಾಟಿಸಿದ ಸ್ಪಂದನ ಸೇವಾ ಟ್ರಸ್ಟ್ ನ ಗಣಪತಿ ಹೆಗಡೆ ಮಾತನಾಡಿ ಟ್ರಸ್ಟ್ ಉದ್ದೇಶ ಯಾರೂ ಕೂಡ ಕಣ್ಣಿನ ತೊಂದರೆ ಇಂದ ಬಳಲ ಬಾರದು ಎಂದು ತಿಳಿಸಿದರು.
ವಿ ಎಸ್ ಭಟ್ಟ ಕಲ್ಲೇಶ್ವರ ರವರು ಪ್ರಾಸ್ತಾವಿಕ ವಾಗಿ ಮಾತನಾಡಿ ಉಚಿತವಾಗಿ ಕೊಡುವವರಿದ್ದರೂ ಅದನ್ನು ಜನರಿಗೆ ಪ್ರಾಮಾಣಿಕವಾಗಿ ತಲುಪಿಸುವುದು ಅಷ್ಟೇ ಮುಖ್ಯ ಅದನ್ನು ಇಲ್ಲಿನ ಜನ ಮಾಡುತ್ತಿದ್ದಾರೆ,ಇವರ ಕಾರ್ಯ ಶ್ಲಾಘನೀಯ, ಒಳ್ಳೆಯ ದಾಗಲಿ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಡಾ ಸಂತೋಷ ರವರು ಬಂದ ಎಲ್ಲರಿಗೂ ಕಣ್ಣಿನ ತಪಾಸಣೆ ಮಾಡಿ ಸಲಹೆ ನೀಡಿದರು.ಊರ ಹಿರಿಯರಾದ ನರಸಿಂಹ ಹೆಗಡೆ, ಗಣಪತಿ ಗುಮ್ಮಾನಿ, ಮಂಜುನಾಥ ಪಾಟೀಲ, ವಿ ಎಸ್ ಭಟ್ಟ ಕಲ್ಲೇಶ್ವರ ಉಪಸ್ಥಿತರಿದ್ದರು.

ಪ್ರಶಾಂತ ಹೆಗ್ಗಾರ ಕಾರ್ಯಕ್ರಮ ನಿರ್ವಹಣೆ ಮಾಡಿದರು,ಗಣಪತಿ ಗುಮ್ಮಾನಿ ಮತ್ತು ಮಂಜುನಾಥ ಹೆಗಡೆ ಕಾರ್ಯಕ್ರಮ ಸಂಯೋಜಿಸಿದ್ದರು. ಕೊಡಸೆ ಹಾಗೂ ಕನ್ನಡಗಲ್ ಬಾಗದ 150 ಕ್ಕೂ ಹೆಚ್ಚು ನಾಗರಿಕರು ಇದರ ಪ್ರಯೋಜನ ಪಡೆದರು.









Prathidvani Yellapura