
ಪ್ರತಿಧ್ವನಿ ಯಲ್ಲಾಪುರ : ಶಾಂತಿ ಮತ್ತು ಸೌಹಾರ್ಧತೆಗೆ ಹೆಸರಾದ ಯಲ್ಲಾಪುರ ತಾಲೂಕಿನಲ್ಲಿ ಯಾವುದೆ ಧರ್ಮದ ಹಬ್ಬದಾಚರಣೆ ವೇಳೆ ಅನಿರೀಕ್ಷಿತವಾಗಿ ಯಾವುದೆ ಅಶಾಂತಿ ತಲೆದೂರದಂತೆ ಹಾಗು ಶಾಂತಿ ಸುವ್ಯಸ್ಥೆಗೆ ನಾವಿದ್ದೇವೆ ಎಂಬ ಸಂದೇಶ ಸಾರಲು ಯಲ್ಲಾಪುರ ಪೋಲಿಸರು ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಪಥ ಸಂಚಲನ ನಡೆಸಿದರು.


ಡಿವೈಎಸ್ಪಿ ಗೀತಾ ಪಾಟೀಲ್ ನೇತೃತ್ವದಲ್ಲಿ,ಪಿ.ಐ ರಮೇಶ್ ಹಾನಾಪುರ,ಪಿಎಸ್ಐಗಳಾದ ರಾಜಶೇಖರ ವಂದಲಿ, ಸಿದ್ದಪ್ಪ ಗುಡಿ ಅವರೊಂದಿಗೆ ಡಿ.ಆರ್.ಎಫ್, ಹೋಂ ಗಾಡ್೯ ಹಾಗು ಪೊಲೀಸರು ಸೇರಿದಂತೆ 60 ಕ್ಕು ಹೆಚ್ಚು ಮಂದಿ ರೂಟ್ ಮಾಚ್೯ ನಲ್ಲಿ ಪಾಲ್ಗೊಂಡಿದ್ದರು.









Prathidvani Yellapura