
ಪ್ರತಿಧ್ವನಿ ಯಲ್ಲಾಪುರ : ಇತ್ತೀಚೆಗೆ ಕೇಳಿ ಬರುತ್ತಿರುವಂತೆ ಮಂಗಳೂರು ಸಂಚಾರಿ ಪೀಠದ ವ್ಯಾಪ್ತಿಗೆ ಉತ್ತರ ಕನ್ನಡ ಜಿಲ್ಲೆ ಸೇರ್ಪಡೆ ಮಾಡುವ ಪ್ರಸ್ತಾಪ ಕೇಳಿ ಬರುತ್ತಿದ್ದು ಇಂತಹ ಅವೈಜ್ಞಾನಿಕ ನಿರ್ಧಾರವನ್ನು ರಾಜ್ಯದ ಕ್ರಿಯಾಶೀಲವಾದ “ಜಯ ಕರ್ನಾಟಕ ಸಂಘಟನೆ ” ಪ್ರಭಲವಾಗಿ ವಿರೋದಿಸುತ್ತದೆ ಎಂದು ಯಲ್ಲಾಪುರ ತಾಲೂಕು ಜಯ ಕರ್ನಾಟಕ ಸಂಘಟನೆ ಅಧ್ಯಕ್ಷ ವಿಲ್ಸನ್ ಫರ್ನಾಂಡೀಸ್ ಪ್ರತಿಧ್ವನಿ ಯೊಂದಿಗೆ ಅನಿಸಿಕೆ ವ್ಯಕ್ತಪಡಿಸಿದ್ದಾರೆ.
ಕ್ರಮಿಸುವ ದೂರ ಮತ್ತು ಸಮಯ ಹಾಗು ಆರ್ಥಿಕವಾಗಿಯು ಉತ್ತರ ಕನ್ನಡ ಜಿಲ್ಲೆಯ ಜನತೆಗೆ ಹೊರೆಯಾಗಲಿದ್ದು ಇದೊಂದು ಅವೈಜ್ಞಾನಿಕ ಆಲೋಚನೆಯಾಗಿದೆ. ಇದರ ವಿರುದ್ದ ಯಾವುದೇ ಸಂಘಟನೆ ಹೋರಾಟಕ್ಕೆ ಮುಂದಾದರೆ ಜಯ ಕರ್ನಾಟಕ ಸಂಘಟನೆ ಸಂಪೂರ್ಣ ಬೆಂಬಲ ಘೋಷಿಸಿ ಹೋರಾಟದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲಿದೆ ಎಂದು ಹೇಳಿದರು.

















Prathidvani Yellapura