Breaking News

ಯಲ್ಲಾಪುರ ಕನ್ನಡ ವೈಶ್ಯ ಸಮಾಜದ  ದಾಮೋದರ್ ಶೆಟ್ಟಿ ನಿಧನ

ಪ್ರತಿಧ್ವನಿ ಯಲ್ಲಾಪುರ : ಪಟ್ಟಣದ ಕನ್ನಡ ವೈಶ್ಯ ಸಮಾಜ ಬಾಂಧವರ ಪ್ರೀತಿಯ “ದಾಮಣ್ಣಾ”, ಯಲ್ಲಾಪುರ ಸಮಸ್ತ ನಾಗರಿಕರ ಪ್ರೀತಿಯ “ಅಂಕೋಲೆ ಶೆಟ್ರು” ಎಂದೇ ಪ್ರಸಿದ್ದಿ ಪಡೆದಿದ್ದ  ದಾಮೋದರ್ ಶೆಟ್ಟಿ ಅವರು ಬುಧವಾರ ನಿಧನರಾಗಿದ್ದು ಅಪಾರ ಬಂಧುಬಳಗ ಹಿತೈಷಿಗಳನ್ನು ಅಗಲಿದ್ದಾರೆ.

ಮೃತರು ಯಲ್ಲಾಪುರದ ಹಿರಿಯರು ದಿವಂಗತರಾದ ಕಾಮಾಕ್ಷಿ ಗಜಾನನ ಭಟ್, ನಾಗೇಶ್ ಶಾನಬಾಗ್ ಹಾಗು ಇನ್ನಿತರ ಪ್ರಮುಖರ ಶಾಲಾ ಜೀವನದ ಗೆಳೆಯರಾಗಿದ್ದರು.

ಯಲ್ಲಾಪುರದ ಹೃದಯಭಾಗದಲ್ಲಿ ಕಿರಾಣಿ ಅಂಗಡಿಯನ್ನು ನಡೆಸುತ್ತಾ  ತಾಲೂಕಿನ ನಾಗರಿಕರ ಪರಿಚಯ-ಪ್ರೀತಿಯನ್ನು ಸಂಪಾದಿಸಿದ್ದರು. ಯಲ್ಲಾಪುರದಲ್ಲಿ  ಕನ್ನಡ ವೈಶ್ಯ ಸಮಾಜದ ಸಂಸ್ಥಾಪಕ ಅಧ್ಯಕ್ಷರಾಗಿ ಸಂಘವನ್ನು ಕಟ್ಟಿ ಬೆಳೆಸಿದ್ದರು. ವೈಶ್ಯ ಸಮಾಜದ ಶೃಂಗೇರಿ ಪ್ರವಾಸ, ಮಾಘಶುದ್ಧ ಪ್ರತಿಪದೆ ಕಾರ್ಯಕ್ರಮದಲ್ಲಿ ಅವರ ಮುಂದಾಳತ್ವ, ಆಸಕ್ತಿ, ಪರಿಶ್ರಮ ಎಲ್ಲರಿಗೂ ಮಾರ್ಗದರ್ಶಕವಾಗಿರುತ್ತಿತ್ತು. ಕಾರ್ಯಕ್ರಮ ತಯಾರಿಗಾಗಿ ಮನೆಮನೆಯನ್ನು ಸಂಪರ್ಕಿಸಿ ಎಲ್ಲರನ್ನೂ ಹುರುದುಂಬಿಸುತ್ತಿದ್ದರು. ಸದಾ ನಗುಮೊಗ, ಪ್ರೀತಿ ತುಂಬಿದ ಮಾತು ಇವರ ಸಹಜ ಸ್ವಭಾವವೇ ಆಗಿತ್ತು. ಹಣ ಸಂಪಾದನೆಗಿಂತ ಜನರ ಪ್ರೀತಿ ಸಂಪಾದನೆಯೇ ಶ್ರೇಷ್ಠ ಎಂದು ಹೇಳುತ್ತಿದ್ದರು. ಬದುಕಿನುದ್ದಕ್ಕೂ ಪ್ರಾಮಾಣಿಕತೆ, ವಿಶ್ವಾಸವನ್ನು ಸಂಪಾದಿಸಿದ್ದರು.

ಮೃತರಿಗೆ 84 ವರ್ಷ ವಯಸ್ಸಾಗಿದ್ದು, ಪತ್ನಿ ಮತ್ತು ಇಬ್ಬರು ಗಂಡು ಮಕ್ಕಳು ಕಿರಣ್ ಮತ್ತು ಅರುಣ್  ಹಾಗು ಅಪಾರ ಬಂಧುಗಳು ಹಿತೈಷಿಗಳನ್ನು ಅಗಲಿದ್ದಾರೆ. ಸಮಾಜದ ಬಂಧುಗಳು, ಸಾರ್ವಜನಿಕರು,ವಿವಿಧ ಸಂಘ ಸಂಸ್ಥೆಗಳ ಪ್ರಮುಖರು ಸಂತಾಪ ಸೂಚಿಸಿದ್ದಾರೆ.

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ಬಸ್ ಅಪಘಾತದಲ್ಲಿ ಗಾಯಗೊಂಡವರಿಗೆ ಸಾಂತ್ವನ ಹೇಳಿದ ಶಾಸಕ ಹೆಬ್ಬಾರ್ ಮತ್ತು ಪುತ್ರ ವಿವೇಕ್ ಹೆಬ್ಬಾರ್.

ಪ್ರತಿಧ್ವನಿ ಯಲ್ಲಾಪುರ : ಮುಂಡಗೋಡ ತಾಲ್ಲೂಕಿನ ಶಿಡ್ಲಗುಂಡಿ ಗ್ರಾಮದಲ್ಲಿ ಬುಧವಾರ ಎರಡು ಸಾರಿಗೆ ಬಸ್‌ಗಳು ಮುಖಾಮುಖಿ ಡಿಕ್ಕಿಯಾಗಿ, ಬಸ್ ಚಾಲಕ …

Leave a Reply

Your email address will not be published. Required fields are marked *