
ಪ್ರತಿಧ್ವನಿ,ಯಲ್ಲಾಪುರ: ಕಲಿಯುಗ ವರದ ಶಬರಿಮಲೆ ಅಯ್ಯಪ್ಪ ಸ್ವಾಮಿಗೆ ವರ್ಷದಲ್ಲಿ ಮಕರ ಸಂಕ್ರಾತಿ ಎಷ್ಟು ಶ್ರೇಷ್ಟವೊ ಅಷ್ಟೆ ಶ್ರೇಷ್ಠ ವಿಶು ಪೂಜಾ ಕಾರ್ಯವಾಗಿದೆ. ಇದು ಪ್ರತಿ ವರ್ಷ ಏಪ್ರಿಲ್ ತಿಂಗಳಲ್ಲಿ ಬರಲಿದ್ದು ಯಲ್ಲಾಪುರದಲ್ಲಿ ಜೋಡುಕೆರೆ ಮಣಿಕಂಠ ಸನ್ನಿದಾನದಲ್ಲಿ ವಿಶು ಸಂದರ್ಭದ ಅಯ್ಯಪ್ಪ ದರ್ಶನಕ್ಕಾಗಿ ಕೆಲವು ಭಕ್ತರು ಮಾಲಾಧಾರಣೆ ಮಾಡಿದ್ದು ವೃತ ಪೂಜೆಯನ್ನು ಅತ್ಯಂತ ಶ್ರದ್ದಾಭಕ್ತಿಯಿಂದ ನೆರವೇರಿಸಿದರು.

ಸನ್ನಿದಾನದಲ್ಲಿ ನಡೆದ ವಿಶೇಷ ಪಡಿ ಪೂಜಾ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು. ಭಕ್ತಾದಿಗಳಿಗೆ ಅನ್ನಪ್ರಸಾದ ವಿತರಣೆಯನ್ನು ಮಾಡಲಾಯಿತು.

ಸಕಲ ಇಷ್ಟಾರ್ಥಗಳನ್ನು ಈಡೇರಿಸುವ ಭಗವಂತ ಅಯ್ಯಪ್ಪ ಸ್ವಾಮಿಯನ್ನು ದರ್ಶಿಸಿ ಸಾರ್ವಜನಿಕ ಭಕ್ತಾದಿಗಳು ಪುನಿತರಾದರು.
Prathidvani Yellapura