Breaking News

ಯಲ್ಲಾಪುರದಲ್ಲಿ ಸಿಡಿಲು,ಗುಡುಗು, ಗಾಳಿ ಸಹಿತ ಭಾರಿ ಮಳೆ ಅಲ್ಲಲ್ಲಿ ಬಾರಿ ಅವಾಂತರ.

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ


ಯಲ್ಲಾಪುರ: ಪಟ್ಟಣದಲ್ಲಿ ಮದ್ಯಾಹ್ನದ ವೇಳೆಯಲ್ಲಿ ಸಿಡಿಲು ಗುಡುಗು ಸಹಿತ ಭಾರಿ ಮಳೆ ಸುರಿಯಿತು.
ಸೋಮವಾರ ಮಧ್ಯಾಹ್ನ ದಟ್ಟನೆ ಮೋಡಕವಿದು ರಭಸವಾಗಿ ಗಾಳಿ ಬೀಸಲು ಪ್ರಾರಂಭವಾಯಿತು ನೋಡನೋಡುತ್ತಲೆ ಗುಡುಗು ಸಿಡಿಲು ಆರ್ಭಟ ಪ್ರಾರಂಭವಾಗಿ ಕೊಂಚ ಆಲಿಕಲ್ಲು ಸಹಿತ ಮಳೆ ಸುರಿಯಲಾರಂಭಿಸಿತು


ಮಳೆಯ ಮುನ್ಸೂಚನೆ ಇಲ್ಲದೆ ಏಕಾ ಏಕಿ ಗಾಳಿ ಮಳೆ ಸುರಿದ ಹಿನ್ನೆಲೆಯಲ್ಲಿ ಕೆಲವು ಮನೆಗಳ ಹೆಂಚುಗಳು,ತಗಡಿನ ಶೀಟುಗಳು ಹಾರಿ ಬಂದು ಕೆಳಗೆ ಬಿದ್ದಿದ್ದು ಸಾಲು ಸಾಲು ಮರಗಳು ನೆಲ ಕಚ್ಚಿವೆ.

ಇದರಿಂದ ಕರೆಂಟ್ ಕಂಬಗಳು ತರಗೆಲೆಯಂತೆ ಉದುರಿದೆ. ನೂತನ ನಗರ ಜಡ್ಡಿಯಲ್ಲಿ ತೆಂಗಿನ ಮರ ಬಿದ್ದ ಪರಿಣಾಮ ನಾಲ್ಕೈದು ಕರೆಂಟ್ ಕಂಬಗಳು ನೆಲಕಚ್ಚಿವೆ. ಬೆಲ್ ರಸ್ತೆಯಲ್ಲಿ ಮೂರ್ನಾಲ್ಕು ಬಾರಿ ಗಾತ್ರದ ರೆಂಬೆಗಳು ಮುರಿದು ಬಿದ್ದಿವೆ. ಮದರ್‌ಥೆರೇಸಾ ಸ್ಲೂಲ್ ಮುಂಬಾಗದ ರಸ್ತೆಯಲ್ಲಿ ತೆಂಗಿನ ಮರ ಮನೆಯ ಮೇಲೆ ಬಿದ್ದಿದ್ದು ಸದ್ಯದ ಮಾಹಿತಿ ಪ್ರಕಾರ ಯಾರಿಗು ಅವಘಡ ಸಂಭವಿಸಿಲ್ಲ.


ಮಳೆಗಾಲದ ಜಾಗೃತಗೆ ಮನೆಗಳು ಸೋರದಂತೆ ಭದ್ರತೆ ಮಾಡಿಕೊಳ್ಳಬೇಕಿಧೆ. ಸ್ಥಳೀಯ ಆಡಳಿತ ಗಟಾರಗಳ ಸ್ವಚ್ಚತೆ ಮತ್ತು ರಸ್ತೆ ಗುಂಡಿಗಳನ್ನು ಮುಚ್ಚುವುದು ಮತ್ತಿತರ ಮಳೆಗಾಲ ಪೂರ್ವ ತಯಾರಿ ಕಾರ್ಯ ಕೈಗೆತ್ತಿಕೊಳ್ಳಬೇಕಿದೆ.

ಪಟ್ಟಣದ ರವೀಂದ್ರ ನಗರದಲ್ಲಿ ಶಾಲೆಯ ಮುಂಭಾಗದಲ್ಲಿ ಬೃಹತ್ ಗಾತ್ರದ ಮತ್ತಿ ಮರ ಅರ್ಧಕ್ಕೆ ಮುರಿದು ಬಿದ್ದು ಅಲಂಕಾರಿಕ ವಿದ್ಯುತ್ ಕಂಬ ಮತ್ತು ಇತರೆ ಸಿಮೆಂಟ್ ಕಂಬಗಳು ಧರೆಗುರುಳಿದೆ.

ಯಲ್ಲಾಪುರದ ಹೈಟೆಕ್ ಬಸ್ ನಿಲ್ದಾಣದ ಪ್ಲಾಸ್ಟಿಕ್ ಶೀಟ್ ಗಳು ಕಿತ್ತು ಹಾರಿವೆ ಗಾಳಿಯ ರಭಸಕ್ಕೆ ಹಲವು ಅವಘಡಗಳು ಸಂಭವಿಸಿವೆ.


ಬಹಳ ಪ್ರಮುಖವಾಗಿ ಪ್ರತಿಯೊಬ್ಬರು ತಮ್ಮ ಮನೆಯ ಸುತ್ತಮುತ್ತಲಿನಲ್ಲಿ ಅಪಾಯದಲ್ಲಿರುವ ಮರಗಳ ಅಥವ ರೆಂಬೆಗಳ ಬಗ್ಗೆ ಜಾಗೃತರಾಗಿ ಅರಣ್ಯ ಇಲಾಖೆಗೆ,ಪಟ್ಟಣ ಪಂಚಾಯತಕ್ಕೆ ಮಾಹಿತಿ ನೀಡಿ ತೆಗೆಸಬೇಕಿದೆ. ಅದರಲ್ಲು ತೆಂಗಿನ ಮರಗಳು ಅಪಯಕಾರಿಯಾಗಿ ಪರಿಣಮಿಸುತ್ತಿದ್ದು ಕಳೆದ ವರ್ಷ ಮರಬಿದ್ದು ಒರ್ವ ವ್ಯಕ್ತಿ ಮೃತಪಟ್ಟಿದ್ದ ಈ ಬಾರಿ ಗಾಳಿಗೆ ಎರಡು ತೆಂಗಿನ ಮರಗಳು ಬಿದ್ದಿದ್ದು ಒಂದು ಮನೆಯಮೇಲೆ ಬಿದ್ದು ಅನಹುತ ಮಾಡಿದ್ದು ಮತ್ತೊಂದು ಐದಾರು ಕರೆಂಟ್ ಕಂಬಗಳನ್ನು ನೆಲಕ್ಕುರುಳಿಸಿದೆ.

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ವೈ.ಟಿ.ಎಸ್‌.ಎಸ್ ನಿಂದ ರಾಧಾ ಕೃಷ್ಣ ವೇಷ ಸ್ಪರ್ಧೆ.

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ ವರದಿ, ಯಲ್ಲಾಪುರ : ಸ್ಥಳೀಯ ವೈ.ಟಿ.ಎಸ್.ಎಸ್ …

Leave a Reply

Your email address will not be published. Required fields are marked *