Breaking News

ಕು|| ಶ್ರೀಧರ ಸಂಜೀವ ಕೆರೆಕರನ ಕರದಲ್ಲಿ ಮೂಡಿದ ಸುಂದರ ಗಣಪ..!

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ


ಪ್ರತಿಧ್ವನಿ ಯಲ್ಲಾಪುರ : ಸಹಾಯಕ ಕಾರ್ಯನಿರ್ವಾಹಕ ಇಂಜಿನೀಯರ್, ಪಂಚಾಯತ್ ರಾಜ್ ಇಂಜಿನೀಯರಿಂಗ್ ಉಪ ವಿಭಾಗ ಯಲ್ಲಾಪುರ ಕಛೇರಿಯಲ್ಲಿ ಸಿಬ್ಬಂದಿಗಳೆಲ್ಲ ಸೇರಿ ಕಳೆದ 30 ವರ್ಷಗಳಿಂದ ಗಣೇಶ ಚತುರ್ಥಿ ಉತ್ಸವ ವಿಜೃಂಬಣೆಯಿಂದ ಆಚರಿಸತ್ತಾ ಬಂದಿದ್ದಾರೆ.

ವಿಶೇಷವೆೆಂದರೆ ಕಳೆದ ಕೆಲ ವರ್ಷಗಳಿಂದ ಕು|| ಶ್ರೀಧರ ಸಂಜೀವ ಕೆರೆಕರ- ಕೆ.ಎಚ್.ಬಿ. ಕಾಲೋನಿ, ಶಿರಸಿ (ಚಂದನ ಆಂಗ್ಲ ಮಾಧ್ಯಮ ವಿಧ್ಯಾರ್ಥಿ) ಇತನು ಸುಂದರವಾದ ಮುತ್ತು ಹವಳಗಳಿಂದ ಅಲಂಕೃತಗೊಂಡ ಪರಿಸರ ಸ್ನೇಹಿ ಗಣೇಶಮೂರ್ತಿ ತಯಾರಿಸಿದ್ದು, ಇತನ ಕಲೆಗೆ ಪ್ರೋತ್ಸಾಹಿಸಲು ಕಛೇರಿಯ ಅಧಿಕಾರಿಗಳಾದ ಅಶೋಕ ಬಿ. ಬಂಟ್-ಸ.ಕಾ.ಇಂ ಹಾಗೂ ಪಂ.ರಾ.ಇಂ/ಗ್ರಾ.ಕು.ನೀ&ನೈ. ಉಪವಿಭಾಗ ಸಿಬ್ಬಂದಿಗಳು ಬಾಲಕ ತಯಾರಿಸಿದ ಗಣೇಶನ ಮೂರ್ತಿಯನ್ನು ಕಛೇರಿಯಲ್ಲಿ ಪ್ರತಿಸ್ಥಾಪಿಸಲು ನಿರ್ಣಯಿಸಿ, ಶ್ರೀ ವಿಘ್ನ ನಿವಾರಕ ಗಣೇಶಮೂರ್ತಿಯನ್ನು ಸೆ.7ರಂದು ಶಾಸ್ತ್ರೋಕ್ತವಾಗಿ ಪ್ರತಿಸ್ಥಾಪಿಸಲಾಯಿತು. ಇಲಾಖೆಯ ಅಧಿಕಾರಿ/ಸಿಬ್ಬಂದಿಗಳು ಹಾಗೂ ಗುತ್ತಿಗೆದಾರರು ಸೇರಿ ವಿಜೃಂಬಣೆಯಿಂದ ಗಣೇಶ ಚತುರ್ಥಿ ಆಚರಿಸಲಾಗುತ್ತಿದೆ.

ಶಶಿಕಲಾ ಸಂತೋಷ ಬಾಂದಿವಡೇಕರ ಇವರು ಗಣಪತಿಯ ಪ್ರತಿಷ್ಠಾಪನಾ ಸ್ಥಳದಲ್ಲಿ ಆಕರ್ಷಣೆಗಾಗಿ ಶ್ರೀ ಕ್ಷೇತ್ರ ಕೇದಾರನಾಥ ದೇವಸ್ಥಾನಕ್ಕೆ ಕೈಗೊಳ್ಳುವ ಯಾತ್ರೆಯ ಸಂಪೂರ್ಣ ಚಿತ್ರಣವನ್ನು ಮೈರೋಮಾಂಚನಗೊಳ್ಳುವ ಸನ್ನಿವೇಶವನ್ನು ತಾವೇ ತಯಾರಿಸಿ ಅಲಂಕರಿಸಿರುವುದು ವಿಶೇಷವಾಗಿದೆ.

ನಾಲ್ಕನೇ ದಿನ ಮಂಗಳವಾರ ಮಹಾಪೂಜೆ, ಪ್ರಸಾದ ಭೋಜನ ವಿತರಣೆ ಹಾಗೂ ಐದನೇ ದಿನ ಬುಧವಾರದಂದು ಶ್ರೀ ಮಂಗಳಮೂರ್ತಿಯನ್ನು ಭವ್ಯ ಮೆರವಣಿಗೆಯೊಂದಿಗೆ ವಿಸರ್ಜಿಸಲಾಗುವುದು.

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ಯಲ್ಲಾಪುರದ ಪಂಚಾಯತ ರಾಜ್ ಇಂಜಿನೀಯರಿಂಗ್ ಕಛೇರಿಯಲ್ಲಿ ಗಣೇಶೋತ್ಸವ – ಶ್ರೀಧರ ಸಂಜೀವ ಕರಕೆರ ಕೈಯಲ್ಲಿ ಅರಳಿದ ಕೂರ್ಮಾರೂಡ ಗಣಪ.

ಪ್ರತಿಧ್ವನಿ ಯಲ್ಲಾಪುರ : ಪಟ್ಟಣದಲ್ಲಿನ ಸಹಾಯಕ ಕಾರ್ಯನಿರ್ವಾಹಕ ಇಂಜಿನೀಯರ, ಪಂಚಾಯತ ರಾಜ್ ಇಂಜಿನೀಯರಿಂಗ್, ಉಪ ವಿಭಾಗ, ಯಲ್ಲಾಪುರ ಕಾರ್ಯಾಲಯದಲ್ಲಿ ಅಧಿಕಾರಿ …

Leave a Reply

Your email address will not be published. Required fields are marked *