


ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ

ಪ್ರತಿಧ್ವನಿ ಯಲ್ಲಾಪುರ : ದೇಶದ ಅರಣ್ಯ ಸಂಪತ್ತು ಮತ್ತು ವನ್ಯಜೀವಿಗಳ ಸಂರಕ್ಷಣೆಯ ಕಾರ್ಯದಲ್ಲಿ ಪ್ರಾಣ ತ್ಯಾಗ ಮಾಡಿದ ಮಹನೀಯರಿಗೆ ನನ್ನ ನಮನಗಳು. ಮನು ಕುಲದ ಆರೋಗ್ಯಕರ ಜೀವನ ಪರಿಸರ ಸಮತೋಲನ ನೆಮ್ಮದಿಯ ಬದುಕಿಗೆ ದಾರಿಯಾಗಿದೆ ಈ ಕಾರ್ಯದಲ್ಲಿ ಅರಣ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಪ್ರತಿಯೊಬ್ಬರ ಕರ್ತವ್ಯ ನಿಷ್ಟೆ ಶ್ಲಾಘನೀಯ ಎಂದು ಸಿವಿಲ್ ನ್ಯಾಯಾಧೀಶರಾದ ಲಕ್ಷ್ಮೀ ಬಾಯಿ ಬಸನಗೌಡ ಪಾಟೀಲ್ ಹೇಳಿದರು.

ಅವರು ಪಟ್ಟಣದ ಅರಣ್ಯ ಇಲಾಖೆ ಆವರಣದಲ್ಲಿ ಹಮ್ಮಿಕೊಳ್ಳಲಾದ ಅರಣ್ಯ ಹುತಾತ್ಮ ದಿನಾಚರಣೆಯಲ್ಲಿ ಹುತಾತ್ಮರ ಸ್ಮಾರಕಕ್ಕೆ ಹೂಗುಚ್ಚ ಅರ್ಪಣೆಯೊಂದಿಗೆ ಗೌರವ ಸಲ್ಲಿಸಿ ಮಾತನಾಡಿದರು.

ಇರುವ ಮೂಲಭೂತ ಸೌಕರ್ಯಗಳ ನಡುವೆ ದೇಶದ ಆಸ್ತಿ ಅಮೂಲ್ಯ ಅರಣ್ಯ ಸಂಪತ್ತನ್ನು ಸಂರಕ್ಷಿಸಿ ಅರಣ್ಯಕ್ಕಾಗಿ ಜನನ, ಅರಣ್ಯಕ್ಕಾಗಿ ಜೀವನ, ಅರಣ್ಯಕ್ಕಾಗಿ ಮರಣ ಎಂಬ ಹಿರಿಯ ಹುತಾತ್ಮರ ಕರ್ತವ್ಯ ನಿಷ್ಟೆ ಅವಿಸ್ಮರಣೀಯ ಅಂತಹವರ ತ್ಯಾಗ ಬಲಿದಾನಕ್ಕೆ ನನ್ನ ನಮನಗಳು ಎಂದು ಯಲ್ಲಾಪುರ ಉಪವಿಭಾಗ ಅರಣ್ಯ ಸಂರಕ್ಷಣಾಧಿಕಾರಿ ಎಸ್. ಜಿ.ಹೆಗಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ತಾಲೂಕು ದಂಡಾಧಿಕಾರಿ ಗುರುರಾಜ್ ಮಾತನಾಡಿ ಗಡಿಯಲ್ಲಿ ಯೋಧರು ದೇಶದ ಭದ್ರತೆ ಕಾಪಾಡುವುದು. ದೇಶದೊಳಗೆ ಆರಕ್ಷಕರು ಶಾಂತಿ ಸುವ್ಯವಸ್ಥೆ ಕಾಪಾಡುವುದು. ಅದರಂತೆ ದೇಶದ ಅಮೂಲ್ಯ ಸಂಪತ್ತು ಅರಣ್ಯ ಮತ್ತು ವನ್ಯಜೀವಿಗಳ ಸಂರಕ್ಷಣೆ ಮಾಡುತ್ತಿರುವ ಅರಣ್ಯ ಯೋಧರ ಸೇವೆ ಅಭಿವಂದನೀಯ. ಇಂತಹ ಸಾರ್ಥಕ ಸೇವೆಯಲ್ಲಿ ಪ್ರಾಣತ್ಯಾಗ ಮಾಡಿದ ಪ್ರತಿಯೊಬ್ಬರಿಗು ನನ್ನ ನಮನಗಳು ಎಂದರು.

ಪಟ್ಟಣ ಪಂಚಾಯತ ಮುಖ್ಯಾಧಿಕಾರಿ ಸುನಿಲ್ ಗಾವಡೆ ಮಾತನಾಡಿ ನನ್ನ ಜೀವನದ ಅತ್ಯಂತ ಪ್ರೀತಿಯ ಕನಸಾಗಿದ್ದುದು ಅರಣ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸಬೇಕೆಂದು ಆದರೆ ದೈವೇಚ್ಚೆ ಬೇರೆ ಇತ್ತು ಸದ್ಯ ಪಟ್ಟಣ ಪಂಚಾಯತ್ ನಲ್ಲಿ ಸೇವೆ ಸಲ್ಲಿಸುತ್ತಿದ್ದೇನೆ ಈಗಲು ಅವಕಾಶ ಸಿಕ್ಕರೆ ಸೇವೆಸಲ್ಲಿಸಲು ಸಿದ್ದನಿದ್ದೇನೆ. ಇಂತಹ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತ ಪ್ರಾಣ ತ್ಯಾಗ ಮಾಡಿದ ಎಲ್ಲಾ ಹುತಾತ್ಮರಿಗೆ ನನ್ನ ನಮನಗಳು ಎಂದರು.

ವೇದಿಕೆಯಲ್ಲಿ ಉಪಸ್ಥಿತರಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ಆರ್.ಹೆಗಡೆ, ಎ.ಸಿ.ಎಫ್ ಗಳಾದ ಅಶೋಕ್ ಬಾಬು ರವಿ ಹುಲುಕೋಟಿ ಹುತಾತ್ಮ ಸ್ಮಾರಕಕ್ಕೆ ಪುಷ್ಪ ನಮನಸಲ್ಲಿಸಿದರು.

ಇಲಾಖೆ ಎಲ್ಲಾ ಸ್ತರಗಳ ಅಧಿಕಾರಿಗಳು, ಸಿಬ್ಬಂದಿಗಳು, ಲಿಪಿಕವರ್ಗ, ಚಾಲಕರು ಸ್ಮಾರಕಕ್ಕೆ ಪುಷ್ಪ ನಮನ ಸಲ್ಲಿಸಿದರು.

ಉಪ ವಲಯ ಅರಣ್ಯಾಧಿಕಾರಿ ಸಂಜಯ್ ಬರ್ಗೋಲಿ ಅರಣ್ಯ ಹುತಾತ್ಮ ದಿನಾಚರಣೆಯ ವಿಶೇಷತೆ ಆಚರಣೆಗೆ ಕಾರಣಗಳ ಪಕ್ಷಿನೋಟ ವಾಚಿಸಿದರು.ಶ್ರೀಶೈಲ ಅಯ್ನಾಪುರ್ ನಿರೂಪಿಸಿ ವಂದಿಸಿದರು.
Prathidvani Yellapura