Breaking News

ಯಲ್ಲಾಪುರ ಅರಣ್ಯ ವಿಭಾಗದಿಂದ “ವಿಶ್ವ ಕಪ್ಪೆ ದಿನ” ಆಚರಣೆ

ಕೆನರಾ ವೃತ್ತದ ಅರಣ್ಯ ಸಂರಕ್ಷಣಾಧಿಕಾರಿಗಳಾದ ವಸಂತ ರೆಡ್ಡಿ ಕಾರ್ಯಕ್ರಮದ ದೀಪ ಬೆಳಗಿದರು

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ… ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ……..

ಪ್ರತಿಧ್ವನಿ, ಯಲ್ಲಾಪುರ : ತಾಲ್ಲೂಕಿನ ಮಾಗೋಡು ಪ್ರಕೃತಿ ಶಿಭಿರದ ಆವಾರದಲ್ಲಿ ವಿಶ್ವ ಕಪ್ಪೆ ದಿನದ ಆಚರಣೆಯನ್ನು ಮಾಡಲಾಯಿತು.
ಕಾರ್ಯಕ್ರಮ ಉದ್ಘಾಟಿಸಿದ ಅರಣ್ಯ ಸಂರಕ್ಷಣಾಧಿಕಾರಿ ವಸಂತರೆಡ್ಡಿ ಮಾತನಾಡಿ ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿ 230 ವಿವಿಧ ಪ್ರಭೇದದ ಕಪ್ಪೆಗಳಿದ್ದು ಅವುಗಳ ಸಂರಕ್ಷಣೆ ಮನುಕುಲದ ಜವಾಬ್ದಾರಿಯಾಗಿದೆ. ಮನುಷ್ಯನ ನಡೆ ಪ್ರಕೃತಿ ಎಡೆಗೆ ಸಾತ್ವಿಕ ವಾಗಿ ಸಾಗಬೇಕಿದೆ ಆದರೆ ದುರಾದೃಷ್ಟ ಇತ್ತೀಚಿನ ದಿನಗಳಲ್ಲಿ ಮನುಷ್ಯನ ಕೃತ್ಯ ವಿಕೃತಿ ಯಾಗುತ್ತಿರುವುದು ವಿಷಾದದ ಸಂಗತಿಯಾಗಿದೆ. ಭೂಮಿಯ ಮೇಲೆ ಜೀವಿಗಳ ಆಹಾರ ಸರಪಳಿ ಮತ್ತು ಅವುಗಳ ಪ್ರಾಮುಖ್ಯತೆ ಎಷ್ಟೆಂಬುದನ್ನು ಅರಿತುಕೊಳ್ಳುವ ಮಹತ್ವಾಕಾಂಕ್ಷೆಯಿಂದ ವಿಶ್ವ ಕಪ್ಪೆದಿನ ಆಚರಿಸುತ್ತಿರುವುದು ಅರ್ಥಪೂರ್ಣವಾಗಿದೆ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಕೆನರಾ ವೃತ್ತದ ಸಿಸಿಎಫ್ ಕೆ.ವಿ.ವಸಂತ ರೆಡ್ಡಿ ( I.F.S ) ಮಾತನಾಡಿದರು


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ನಂದೊಳ್ಳಿ ಗ್ರಾಮಪಂಚಾಯತ್ ಅಧ್ಯಕ್ಷ ನರಸಿಂಹ ಕೋಣೆಮನೆ ಭಾರತದ ಸಂವಿಧಾನ ನಮಗೆ ಮಾತ್ರ ಜೀವಿಸುವ ಹಕ್ಕು ನೀಡಿದೆ ಎಂಬಂತೆ ನಡೆದುಕೊಳ್ಳುತ್ತಿರುವುದು ದುರಂತವಾಗಿದೆ. ಭೂಮಿಯ ಮೇಲಿನ ಪ್ರತಿ ಜೀವಿಗು ಬದುಕುವ ಹಕ್ಕು ನೀಡಲಾಗಿದೆ‌ಎಂಬುದನ್ನು ಅರ್ಥೈಸಿಕೊಳ್ಳಬೇಕಿದೆ. ಕೆಲವು ದಿನಗಳು ಕೇವಲ ಆಚರಣೆಗೆ ಸೀಮಿತವಾಗಿರದೆ ಅದರ ಹಿಂದಿರುವ ಸದುದ್ದೇಶ ಅರ್ಥೈಸಿಕೊಳ್ಳಬೇಕಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಂದೊಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷ ನರಸಿಂಹ ಕೋಣೆಮನೆ ಮಾತನಾಡಿದರು


ಕಾರ್ಯಕ್ರಮದಲ್ಲಿ ಅಧಿತಿ ಭಟ್ ಪ್ರಾರ್ಥಿಸಿದರು. ಇಡಗುಂದಿ ವಲಯ ಅರಣ್ಯಾಧಿಕಾರಿ ಶಿಲ್ಪಾ ನಾಯ್ಕ್ ಸ್ವಾಗತಿಸಿದರು. ಸಹಾಯಕ ಅರಣ್ಯ ಸಂರಕ್ಷಣಧಿಕಾರಿ ಹಿಮವತಿ ಭಟ್ ಪ್ರಾಸ್ತಾವಿಕ ನುಡಿದರು. ಡಿ.ಆರ್.ಎಫ್.ಒ ಲೊಕೇಶ್ ನಾಯ್ಕ್ ವಂದಿಸಿದರು. ಗಸ್ತು ವನಪಾಲಕ ಕೆಂಚಪ್ಪ ಹಂಚಿನಾಳ ನಿರೂಪಿಸಿದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ ಸುಂದರ ಕ್ಷಣದ ಗ್ರೂಪ್ ಫೋಟೋ


ಸಭಾ ಕಾರ್ಯಕ್ರಮದ ನಂತರ ನಡೆದ ತಾಂತ್ರಿಕ ಉಪನ್ಯಾಸ ಕಾರ್ಯಗಾರದಲ್ಲಿ ಎಸಿಎಫ್ ಹಿಮವತಿ ಭಟ್ ಮತ್ತು ಉಪ ವಲಯ ಅರಣ್ಯಾಧಿಕಾರಿ ಪರಶುರಾಮ ಭಜಂತ್ರಿ ಕಪ್ಪೆಗಳ ಜೀವನಕ್ರಮ ಭೂಮಿಗೆ ಅವುಗಳ ಅವಶ್ಯಕತೆ ಮತ್ತು ಸಂತಾನೋತ್ಪತ್ತಿ ಪ್ರಕ್ರಿಯೆ ಕುರಿತು ವಿಡಿಯೋ ದೃಶ್ಯಾವಳಿ ಸಹಿತ ಉಪನ್ಯಾಸ ನೀಡಿದರು.

ವಿಶ್ವ ಕಪ್ಪೆ ದಿನದ ಅಂಗವಾಗಿ ಕಪ್ಪೆಗಳ ಕುರಿತು ವಿವರಣೆ ನೀಡಿದ ಮಂಚಿಕೇರಿ ಉಪ ವಿಭಾಗದ ಎಸಿಎಫ್ ಹಿಮವತಿ ಭಟ್
ಕಪ್ಪೆಗಳ ಜೀವನಕ್ರಮದ ಬಗ್ಗೆ ಸಮಗ್ರ ಮಾಹಿತಿ ನೀಡಿದ ಉಪ ವಲಯ ಅರಣ್ಯಾಧಿಕಾರಿ ಪರಶುರಾಮ ಭಜಂತ್ರಿ


ವೇದಿಕೆಯಲ್ಲಿ ಯಲ್ಲಪುರ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಸ್.ಜಿ.ಹೆಗಡೆ , ಗ್ರಾಮಾರಣ್ಯ ಸಮಿತಿ ಅಧ್ಯಕ್ಷ ರಾಮಚಂದ್ರ ಭಟ್ , ಮಂಚಿಕೇರಿ ವಲಯಾರಣ್ಯ ಅಧಿಕಾರಿ ಅಮಿತ್ ಚೌಹಾಣ್ , ಸಂಪನ್ಮೂಲ ವ್ಯಕ್ತಿ ಸುಹಾಸ್ ಹೆಗಡೆ ಉಪಸ್ಥಿತರಿದ್ದರು.
ಕಾರ್ಯಗಾರದಲ್ಲಿ ಯಲ್ಲಾಪುರ ವಿವಿಧ ಶಾಲೆಗಳ ಮಕ್ಕಳು ಸ್ಥಳೀಯ ನಾಗರಿಕರು ಅರಣ್ಯ ಇಲಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಜಾಹಿರಾತು ನೀಡಿ ಯಲ್ಲಾಪುರ ನೆಲದ ಪ್ರತಿಧ್ವನಿ ಪ್ರೋತ್ಸಾಹಿಸಿ ‌‌‌ದೂರವಾಣಿ ಸಂಖ್ಯೆ..9113096085

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ವೈ.ಟಿ.ಎಸ್‌.ಎಸ್ ನಿಂದ ರಾಧಾ ಕೃಷ್ಣ ವೇಷ ಸ್ಪರ್ಧೆ.

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ ವರದಿ, ಯಲ್ಲಾಪುರ : ಸ್ಥಳೀಯ ವೈ.ಟಿ.ಎಸ್.ಎಸ್ …

Leave a Reply

Your email address will not be published. Required fields are marked *