

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ
ಪ್ರತಿಧ್ವನಿ,ಯಲ್ಲಾಪುರ : ಪ್ರಸ್ತುತ ದಿನಗಳಲ್ಲಿ ಪ್ರತಿಯೊಬ್ಬ ನಾಗರೀಕನು ಕಾನೂನಿನ ಬಗ್ಗೆ ತಿಳಿದುಕೊಂಡಿರಬೇಕು. ಸಮಾಜದಲ್ಲಾಗುವ ದೌರ್ಜನ್ಯ, ದಬ್ಬಾಳಿಕೆ , ಹೆಣ್ಣಿನ ಮೇಲಿನ ಶೋಷಣೆ, ಕುರಿತು ಕಾನೂನು ವ್ಯಾಪ್ತಿಯಲ್ಲಿರುವ ವಿಷಯಗಳನ್ನು ಅರಿತುಕೊಂಡಿರಬೇಕು. ಸಮಸ್ಯೆಗಳು ಬಂದಾಗ ಕಾನೂನಿನ ಸಹಾಯ ಪಡೆಯಲು ಅದರ ಅರಿವು ಮತ್ತು ತಿಳುವಳಿಕೆ ಅತ್ಯಗತ್ಯವಾಗಿದೆ. ಹಕ್ಕುಗಳು ಮತ್ತು ಕರ್ತವ್ಯಗಳನ್ನು ಸಹ ಕಾನೂನಿನ ಅರಿವು ಕಾರ್ಯಕ್ರಮದೊಂದಿಗೆ ಸಾರ್ವಜನಿಕರು ತಿಳಿದುಕೊಳ್ಳಬೇಕಿದೆ ಎಂದು ಸಂವಿಧಾನ ಫೆಲೋ ವಕೀಲ ಜಯರಾಮ ಸಿದ್ದಿ ಹೇಳಿದರು.

ಅವರು ತಾಲೂಕಿನ ಕಿರವತ್ತಿ ಸಮೀಪದ ಗುಡಂದೂರಿನ ಸಿದ್ದಿ ಕಾಲೋನಿಯಲ್ಲಿ “ನ್ಯಾಯ ಸಂಸ್ಥೆ, ಬೆಂಗಳೂರು” ಹಾಗೂ “ಜನನಿ ಸಂಸ್ಥೆ, ಯಲ್ಲಾಪುರ” ದ ಸಂಯುಕ್ತ ಆಶ್ರಯದಲ್ಲಿ ಬುಡಕಟ್ಟು ಸಮುದಾಯದ ಸಿದ್ದಿ ಮಹಿಳೆಯರು ಮತ್ತು ಯುವಕರು ಹಾಗೂ ಸಾರ್ವಜನಿಕರಿಗೆ ಏರ್ಪಡಿಸಿದ್ದ ಕಾನೂನು ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದರು.

ಕಾನೂನು ಅರಿವಿನ ಅವಶ್ಯಕತೆಯ ಕುರಿತು ಜನನಿ ಸಂಸ್ಥೆ ಉಪಾಧ್ಯಕ್ಷ ಸುರೇಶ್ ಕೈತಾನ್ ಸಿದ್ದಿ , ವಕೀಲ ವಿನಾಯಕ ಭಟ್ಟ ನೆರೆದಿದ್ದ ಸಾರ್ವಜನಿಕರಿಗೆ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಸ್ಥಳೀಯರಾದ ಮೌಲಾಲ ಮುಜಾವರ್, ಆಶಾಬಿ, ಹುಲ್ಕೊಪ್ಪ, ಶರೀಫ ಸಾಬ್ ಮುಜಾವರ್ ಇನ್ನಿತರ ಪ್ರಮುಖರು ಉಪಸ್ಥಿತರಿದ್ದರು. ಸಭೆಯಲ್ಲಿ ಅಕ್ಕಪಕ್ಕದ ಗ್ರಾಮದ ಹಲವಾರು ಬುಡಕಟ್ಟು ಸಮುದಾಯದ ನಾಗರೀಕರು, ಮಹಿಳೆಯರು, ಯುವಕರು ಭಾಗವಹಿಸಿದ್ದರು.

Prathidvani Yellapura