Breaking News

ಯಲ್ಲಾಪುರದಲೊಂದು ವಿಶೇಷ..ಒರ್ವ ವಿದ್ಯಾರ್ಥಿನಿ ಪರಿಕ್ಷೆಗಾಗಿ ಕಾರ್ಯನಿರ್ವಹಿಸಿದ 13 ಮಂದಿ ಪರೀಕ್ಷಾ ಸಿಬ್ಬಂದಿ!!!

ವೈ.ಟಿ.ಎಸ್.ಎಸ್ ಪರೀಕ್ಷಾ ಕೇಂದ್ರದಲ್ಲಿ ಏಕಾಂಗಿಯಾಗಿ ಸಂಸ್ಕೃತ ಪರಿಕ್ಷೆ ಬರೆದ ವಿದ್ಯಾರ್ಥಿನಿ

ಪ್ರತಿಧ್ವನಿ, ಯಲ್ಲಾಪುರ: ಪಟ್ಟಣದ ವೈಟಿಎಸ್ಎಸ್ ವಿದ್ಯಾ ಸಂಸ್ಥೆ ಕಾಲೇಜು ವಿಭಾಗದಲ್ಲಿ ಬುಧವಾರ ಸಂಸ್ಕೃತ ವಿಷಯದ ದ್ವಿತೀಯ ಪಿಯುಸಿ ಪರಿಕ್ಷೆಗೆ ಒರ್ವ ವಿದ್ಯಾರ್ಥಿನಿ ಕುಳಿತಿದ್ದು 13 ಮಂದಿ ಪರೀಕ್ಷಾ ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸಿದ್ದು ವಿಶೇಷವಾಗಿತ್ತು.

ಪರೀಕ್ಷಾ ಕೊಠಡಿ


ದ್ವಿತೀಯ ಪಿಯುಸಿ ಪರೀಕ್ಷೆಗಳು ರೋಸ್ಟರ್ ಪದ್ದತಿ ಅನುಸರಿಸುತ್ತಿದ್ದು ವೈಟಿಎಸ್ಎಸ್ ನ 17 ವಿಧ್ಯಾರ್ಥಿಗಳು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ಪರಿಕ್ಷೆ ಬರೆದರೆ ಅದೇ ಕಾಲೇಜಿನ ಒರ್ವ ಖಾಸಗಿ ವಿದ್ಯಾರ್ಥಿನಿ ವೈಟಿಎಸ್ಎಸ್ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆದಳು. ಆಕೆ ಬರೆದ ಪರೀಕ್ಷೆಗಾಗಿ ಪರೀಕ್ಷಾ ಮುಖ್ಯ ಅಧೀಕ್ಷಕ, ಸಹ ಮುಖ್ಯ ಅಧೀಕ್ಷಕ, ಇಬ್ಬರು ಜಾಗೃತ ದಳದವರು, ಕಚೇರಿ ಅಧೀಕ್ಷಕ , ಪ್ರಶ್ನೆಪತ್ರಿಕೆ ಪಾಲಕ, ಉತ್ತರ ಪತ್ರಿಕೆ ಪಾಲಕ, ಕೊಠಡಿ ಮೇಲ್ವಿಚಾರಕ, ಇಬ್ಬರು ಕಚೇರಿ ಸಹಾಯಕರು, ಗ್ರೂಪ್ ಡಿ ಸಿಬ್ಬಂದಿ, ಆರೋಗ್ಯ ಮತ್ತು ಪೊಲೀಸ್ ಸಿಬ್ಬಂದಿ ಕರ್ತವ್ಯ ನಿರ್ವಹಿಸಿದ್ದು ವಿಶೇಷವಾಗಿತ್ತು.

ಪರೀಕ್ಷಾ ಕೇಂದ್ರದಲ್ಲಿ ಇತರೆ ಸಿಬ್ಬಂದಿಯೊಂದಿಗೆ ಆರೋಗ್ಯ ಮತ್ತು ಆರಕ್ಷಕ ಸಿಬ್ಬಂದಿ

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ವೈ.ಟಿ.ಎಸ್‌.ಎಸ್ ನಿಂದ ರಾಧಾ ಕೃಷ್ಣ ವೇಷ ಸ್ಪರ್ಧೆ.

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ ವರದಿ, ಯಲ್ಲಾಪುರ : ಸ್ಥಳೀಯ ವೈ.ಟಿ.ಎಸ್.ಎಸ್ …

Leave a Reply

Your email address will not be published. Required fields are marked *